ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Post Office Scheme: ಡಬಲ್‌ ಪ್ರಾಫಿಟ್ ಮಾಡೋಕೆ ಇಲ್ಲಿ ಹೂಡಿಕೆ ಮಾಡಿ! ಶೇಕಡಾ ನೂರಕ್ಕೆ ನೂರು ಗ್ಯಾರಂಟಿ ಇಲ್ಲಿದೆ!

Post Office Scheme: ಪೋಸ್ಟ್ ಆಫೀಸ್‌ನ ಅನೇಕ ಯೋಜನೆಗಳಿವೆ(Post Office Scheme), ಇಲ್ಲಿ ಬಡ್ಡಿ ಶೇಕಡಾ 7 ಕ್ಕಿಂತ ಹೆಚ್ಚಿದೆ  ಅಂತಹ ಯೋಜನೆಗಳ ಪಟ್ಟಿ ಇಲ್ಲಿದೆ.
02:08 PM Jul 18, 2024 IST | ಕಾವ್ಯ ವಾಣಿ
UpdateAt: 02:08 PM Jul 18, 2024 IST
Advertisement

Post Office Scheme: ಡಬಲ್ ಪ್ರಾಫಿಟ್ ಪಡೆಯಲು ಕೆಲವರು ಅಲ್ಲಿ ಇಲ್ಲಿ ಬ್ಯಾಂಕ್ ಗೆ ಅಲೆದಾಡುತ್ತಾರೆ. ಆದ್ರೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಅಂಚೆ ಕಚೇರಿ ಸೂಕ್ತವಾಗಿದೆ. ಹೌದು, ಸರ್ಕಾರದ ಬೆಂಬಲಿತ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದಲ್ಲಿ ನಿರ್ದಿಷ್ಟ ಅವಧಿಯ ಕೊನೆಯಲ್ಲಿ ಗ್ಯಾರಂಟಿ ರಿಟರ್ನ್ಸ್ ಪಡೆಯಲು ನೂರಕ್ಕೆ ನೂರು ಸಾಧ್ಯ ವಿದೆ. ಹೌದು, ವಾಸ್ತವವಾಗಿ ಪೋಸ್ಟ್ ಆಫೀಸ್‌ನ ಅನೇಕ ಯೋಜನೆಗಳಿವೆ(Post Office Scheme), ಇಲ್ಲಿ ಬಡ್ಡಿ ಶೇಕಡಾ 7 ಕ್ಕಿಂತ ಹೆಚ್ಚಿದೆ  ಅಂತಹ ಯೋಜನೆಗಳ ಪಟ್ಟಿ ಇಲ್ಲಿದೆ.

Advertisement

ಸಾರ್ವಜನಿಕ ಭವಿಷ್ಯ ನಿಧಿ:

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಶೇಕಡಾ 7.1 ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ. ಮೆಚುರಿಟಿ ಅವಧಿ 15 ವರ್ಷಗಲಾಗಿದ್ದು, ಗರಿಷ್ಠ 1.5 ಲಕ್ಷ ಹೂಡಿಕೆ ಮಾಡಬಹುದು. ಚಕ್ರಬಡ್ಡಿಯ ಲಾಭವೂ ಇದೆ. ಪಿಪಿಎಫ ಯೋಜನೆಯು ತೆರಿಗೆ ಉಳಿತಾಯ, ಆದಾಯ ಮತ್ತು ಸುರಕ್ಷತೆಯ ಸಂಯೋಜನೆಯಿಂದಾಗಿ ಭಾರತದಲ್ಲಿ ಬಹಳ ಜನಪ್ರಿಯವಾದ ಇತ್ತೀಚಿನ ಉಳಿತಾಯ ಯೋಜನೆಯಾಗಿದೆ.

Advertisement

ಹಿರಿಯ ನಾಗರಿಕರ ಉಳಿತಾಯ ಯೋಜನೆ:

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ ಮೊತ್ತ 30 ಲಕ್ಷ ರೂಪಾಯಿ. ಯೋಜನೆಯು ವಾರ್ಷಿಕ 8.2 ಶೇಕಡಾ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ:

ಇಲ್ಲಿ ಸಂಪೂರ್ಣ ಮೊತ್ತವನ್ನು ಒಮ್ಮೆಗೇ ಹೂಡಿಕೆ ಮಾಡಬೇಕು. ಬದಲಾಗಿ ಗ್ರಾಹಕರು ಪ್ರತಿ ತಿಂಗಳು ಬಡ್ಡಿ ಆದಾಯ ಪಡೆಯುತ್ತಾರೆ. ಈ ಯೋಜನೆಯು ಶೇಕಡಾ 7.4 ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ.

ಪೋಸ್ಟ್ ಆಫೀಸ್ ಸಮಯ ಠೇವಣಿ:

ಈ ಯೋಜನೆಯನ್ನು ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ ಎಂದೂ ಕರೆಯುತ್ತಾರೆ. 3 ವರ್ಷಗಳ ಬಡ್ಡಿ ದರವು 7.1 ಪ್ರತಿಶತ ಇರುತ್ತದೆ.

ಅಂಚೆ ಕಛೇರಿ ಕಿಸಾನ್ ವಿಕಾಸ್ ಪತ್ರ: ಕಿಸಾನ್ ವಿಕಾಸ್ ಪತ್ರವು ಶೇಕಡಾ 7.5 ರ ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಈ ಯೋಜನೆಯ ವಿಶೇಷತೆ ಏನೆಂದರೆ ಹೂಡಿಕೆದಾರರ ಹಣ 113 ತಿಂಗಳಲ್ಲಿ ದುಪ್ಪಟ್ಟಾಗುತ್ತದೆ. ಗರಿಷ್ಠ ಹೂಡಿಕೆ ಮಿತಿ ಇಲ್ಲ.

BSNL Recharge Plan: ಬಿಎಸ್‌ಎನ್‌ಎಲ್‌ ನಿಂದ 395 ದಿನಗಳ ಸೂಪರ್ ರಿಚಾರ್ಜ್ ಪ್ಲಾನ್! ದೇಶದಾದ್ಯಂತ 4G ಸೇವೆ!

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ:

ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ  ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಹೂಡಿಕೆ ಮಾಡಬೇಕು. ಬಡ್ಡಿ ದರವು 7.5 ಪ್ರತಿಶತ ಇದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ:

ಉಳಿತಾಯಕ್ಕಾಗಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ NSC ಉತ್ತಮವಾಗಿದೆ. ಸ್ಥಿರವಾದ ಬಡ್ಡಿಯನ್ನು ಗಳಿಸಲು ಸುರಕ್ಷಿತ ಹೂಡಿಕೆ ಮಾರ್ಗವನ್ನು ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಯೋಜನೆ.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿ ದರವು ಶೇಕಡಾ 7.7 ಆಗಿದೆ. ಸಂಯುಕ್ತ ಬಡ್ಡಿಯ ಪ್ರಯೋಜನಗಳು ಹೊಂದಾಣಿಕೆಯಾಗುತ್ತವೆ. ಇದಲ್ಲದೆ, ಈ ಯೋಜನೆಯಲ್ಲಿ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಸಹ ಪಡೆಯುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ:

ಸುಕನ್ಯಾ ಸಮೃದ್ಧಿ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮದ ಭಾಗವಾಗಿ  2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲಾಗಿದೆ. ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತಂದಿದೆ. 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. ಇಲ್ಲಿ ಬಡ್ಡಿ ದರವು 8.2 ಪ್ರತಿಶತ ಇದೆ.

Ananth -Radhika Marriage: ಅಂಬಾನಿ ಮಗನದ್ದು ಅದ್ಧೂರಿಯಲ್ಲ, ಇದೊಂದು ಕಂಜೂಸ್, ಜಿಪುಣರಲ್ಲಿ ಜಿಪುಣರ ಮದುವೆಯಂತೆ !! ಇದು ನಿಜಾ ಕೂಡ.. ಇಲ್ಲಿದೆ ನೋಡಿ ಅಚ್ಚರಿ ಕಾರಣಗಳು !!

Advertisement
Advertisement