ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Post Office Scheme: ಕೇವಲ 10,000 ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಮೊತ್ತ ಪಡೆಯಿರಿ

07:07 AM Feb 14, 2024 IST | ಹೊಸ ಕನ್ನಡ
UpdateAt: 07:07 AM Feb 14, 2024 IST
Advertisement

Post office :ಪ್ರತಿ ತಿಂಗಳು ಭಾರತೀಯ ಅಂಚೆಯಲ್ಲಿ(Post office )10,000 ರೂಪಾಯಿಯನ್ನು ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಬಹು ದೊಡ್ದ ಮೊತ್ತದ ಹಣ ನಿಮ್ಮ ಕೈ ಸೇರುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

 

ನೀವು ಸಂಪಾದಿಸಿದ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಇಚ್ಛಿಸಿದರೆ, ಅಂಚೆ ಇಲಾಖೆಯ(Post office )ಹೊಸ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಯೋಜನೆಯಡಿಯಲ್ಲಿ ನೀವು ಪ್ರತಿ ತಿಂಗಳು 10,000 ರೂಪಾಯಿಯನ್ನು ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ ಬಂಪರ್ ರಿಟರ್ನ್ಸ್ ನಿಮ್ಮ ಕೈ ಸೇರುತ್ತದೆ.

Advertisement

 

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಿದ ಹಣಕಾಸು ಸಚಿವಾಲಯ

 

ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಹಣಕಾಸು ಸಚಿವಾಲಯವು ಬದಲಾವಣೆಗಳನ್ನು ಸೂಚಿಸಿದೆ. ಇದರ ಅಡಿ 5 ವರ್ಷಗಳ ಠೇವಣಿ ನೀಡುತ್ತಿದೆ. ಸರ್ಕಾರವು ತನ್ನ ಬಡ್ಡಿದರವನ್ನು ಈಗ 30 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚು ಮಾಡಿದೆ. ಈಗ ಪೋಸ್ಟ್ ಆಫೀಸ್ ಠೇವಣಿಗಳ ಮೇಲಿನ ಬಡ್ಡಿಯು ಶೇ. 6.2 ರ ಬದಲಿಗೆ ಶೇಕಡಾ 6.5 ಏರಿಕೆಯಾಗಲಿದೆ.

 

ಈ ಯೋಜನೆಯು ಮಧ್ಯಮ ಅವಧಿಯ ಹೂಡಿಕೆದಾರರಿಗೆ ಇರುವ ಯೋಜನೆಯಾಗಿದೆ. ವಾರ್ಷಿಕವಾಗಿ 6.5 ರಷ್ಟು ಬಡ್ಡಿ ಇರುತ್ತದೆ. ಆದರೆ ಇದರ ಲೆಕ್ಕಾಚಾರವನ್ನು ತ್ರೈಮಾಸಿಕ ಸಂಯೋಜನೆಯ ಆಧಾರದ ಮೇಲೆ ಮಾಡಲಾಗುತ್ತದೆ.

 

ಈ ಯೋಜನೆಯಲ್ಲಿ ಕನಿಷ್ಠ ಮೊತ್ತ 100 ರೂಪಾಯಿಯಿಂದ ಹೂಡಿಕೆ ಮಾಡಬಹುದು. ಬ್ಯಾಂಕ್‌ಗಳಿಗಿಂತ ಭಿನ್ನವಾಗಿ, ಅಂಚೆಯಲ್ಲಿ ಇಲಾಖೆಯಲ್ಲಿ ಠೇವಣಿಗಳು ಕೇವಲ 5 ವರ್ಷಗಳವರೆಗೆ ಮಾತ್ರ ಸೀಮಿತವಾಗಿರುತ್ತದೆ. ನಮಗೆ ಅವಶ್ಯಕತೆ ಇದ್ದರೇ 5 ವರ್ಷಗಳವರೆಗೆ ಬೇಕಾದರೆ ವಿಸ್ತರಿಸಿಕೊಳ್ಳಬಹುದು. ಈ ವಿಸ್ತರಣೆಯ ಸಮಯದಲ್ಲಿ, ನೀವು ಹಳೆಯ ಬಡ್ಡಿದರಗಳ ಲಾಭವನ್ನು ಮಾತ್ರ ಪಡೆಯುತ್ತೀರಿ.

 

10 ಸಾವಿರ ಠೇವಣಿ ಇಟ್ಟರೆ 7.10 ಲಕ್ಷ ರೂಪಾಯಿ ಆದಾಯ

 

ಅಂಚೆ ಇಲಾಖೆಯ ಆರ್‌ಡಿ ಕ್ಯಾಲ್ಕುಲೇಟರ್ ಪ್ರಕಾರ, ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿಯನ್ನು ಠೇವಣಿ ಮಾಡಿದರೆ, ಐದು ವರ್ಷಗಳ ನಂತರ ಅವರು 7 ಲಕ್ಷ 10 ಸಾವಿರ ರೂಪಾಯಿಯನ್ನು ಪಡೆಯುತ್ತಾರೆ ಎಂದು ಹೇಳುತ್ತದೆ. ಒಟ್ಟು ಠೇವಣಿ 6 ಲಕ್ಷ ಮತ್ತು ಜೊತೆಗೆ ಬಡ್ಡಿ ಸುಮಾರು 1 ಲಕ್ಷ 10 ಸಾವಿರ ಇರುತ್ತದೆ. ನೀವು ಪ್ರತಿ ತಿಂಗಳಿನ 1 ರಿಂದ 15ನೇ ತಾರೀಖಿನ ನಡುವೆ ಖಾತೆಯನ್ನು ತೆರೆದರೆ ಒಳ್ಳೆಯದು.

 

ನೀವು ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಹಣವನ್ನು ಠೇವಣಿಗೆ ಇಡಬೇಕಾಗುತ್ತೆ. 15ನೇ ತಾರೀಖಿನ ನಂತರದ ದಿನದಲ್ಲಿ ಖಾತೆ ತೆರೆದರೆ ಪ್ರತಿ ತಿಂಗಳ ಕೊನೆಯೊಳಗೆ ಕಂತುಗಳನ್ನು ಕಟ್ಟಬೇಕು.

 

ನೀವು 12 ಕಂತುಗಳನ್ನು ಠೇವಣಿ ಮಾಡಿದಲ್ಲಿ ನಿಮಗೆ ಸಾಲ ಸೌಲಭ್ಯವೂ ಸಹ ದೊರೆಯುತ್ತದೆ. ಬಡ್ಡಿ ದರವು ಆರ್‌ಡಿ ಖಾತೆಯ ಬಡ್ಡಿ ದರಕ್ಕಿಂತ ಶೇಕಡಾ 2 ರಷ್ಟು ಹೆಚ್ಚಿರುತ್ತದೆ. 5 ವರ್ಷಗಳ ಮೊದಲು 1 ದಿನ ಮುಂಚಿತವಾಗಿ ನೀವು ಈ ಖಾತೆಯನ್ನು ಮುಚ್ಚಿದರೆ, ಉಳಿತಾಯ ಖಾತೆಯ ಬಡ್ಡಿಯ ಲಾಭ ಮಾತ್ರ ಲಭ್ಯವಿರುತ್ತದೆ. ಪ್ರಸ್ತುತ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವು ಶೇಕಡಾ 4 ರಷ್ಟಿದೆ.

ಇದನ್ನೂ ಓದಿ : HSRP ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

Related News

Advertisement
Advertisement