For the best experience, open
https://m.hosakannada.com
on your mobile browser.
Advertisement

Ananth Ambani Wedding: ಅನಂತ್‌-ರಾಧಿಕಾ ಸಂಗೀತ್‌ಗೆ ಭಾರತಕ್ಕೆ ಬಂದ ಪಾಪ್‌ ಗಾಯಕ ಜಸ್ಟಿನ್‌ ಬೀಬರ್-83 ಕೋಟಿ ರೂ. ಸಂಭಾವನೆ

Ananth Ambani Wedding: ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವದಲ್ಲಿ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೈಬರ್ ಕಾರ್ಯಕ್ರಮ ನೀಡಲಿದ್ದಾರೆ.
03:25 PM Jul 04, 2024 IST | ಸುದರ್ಶನ್
UpdateAt: 03:25 PM Jul 04, 2024 IST
ananth ambani wedding  ಅನಂತ್‌ ರಾಧಿಕಾ ಸಂಗೀತ್‌ಗೆ ಭಾರತಕ್ಕೆ ಬಂದ ಪಾಪ್‌ ಗಾಯಕ ಜಸ್ಟಿನ್‌ ಬೀಬರ್ 83 ಕೋಟಿ ರೂ  ಸಂಭಾವನೆ

Ananth Ambani Wedding: ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವದಲ್ಲಿ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೈಬರ್ ಕಾರ್ಯಕ್ರಮ ನೀಡಲಿದ್ದಾರೆ. ಅವರು ಜುಲೈ 4 ರ (ಇಂದು) ಗುರುವಾರದಂದು ಮುಂಬಯಿಗೆ ಆಗಮಿಸಿದ್ದು, ಗಾಯಕ ಜಸ್ಟಿಬ್‌ ಬೀಬರ್‌ ಬಂದಿರುವ ಕಾರುಗಳ ವೀಡಿಯೊಗಳನ್ನು ಪಾಪರಾಜಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Advertisement

Hyderabad: ಹೋಮ್‌ವರ್ಕ್‌ ಮಾಡ್ತಿದ್ದ 5 ವರ್ಷದ ಯುಕೆಜಿ ಮಗುವಿನ ಪ್ರಾಣ ತೆಗೆದ ಪೆನ್‌

ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌ ಅವರ ಸಂಗೀತ್‌ ಕಾರ್ಯಕ್ರಮದಲ್ಲಿ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ಮ್ಯೂಸಿಕ್‌ ಪ್ರೋಗ್ರಾಂ ಇರಲಿದೆ.

Advertisement

ಜಸ್ಟಿನ್‌ ಅವರು ಭಾರತಕ್ಕೆ ಏಳು ವರ್ಷಗಳ ನಂತರ ಬಂದಿದ್ದು, 2022 ರಲ್ಲಿ ಭಾರತದಲ್ಲಿ ಮ್ಯೂಸಿಕ್‌ ಕೋನ್ಸರ್ಟ್‌ ಅನೌನ್ಸ್‌ ಮಾಡಿದ್ದರು. ಆದರೆ ಅನಾರೋಗ್ಯದಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.

ಅಂಬಾನಿ ಪುತ್ರನ ಸಂಗೀತ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು , ಕಾರ್ಯಕ್ರಮ ನೀಡಲು ಜಸ್ಟಿನ್‌ ಅವರು ಬರೋಬ್ಬರ್‌ 83 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಾಪ್‌ ಗಾಯಕಿ ರಿಹಾನ್ನಾ ಅವರನ್ನೂ ಜಸ್ಟಿನ್‌ ಮೀರಿಸಿದ್ದಾರೆ.
ಈ ಹಿಂದೆ, ಪಾಪ್ ಕ್ವೀನ್ ರಿಹಾನ್ನಾ ಅವರು ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಬ್ಯಾಷ್‌ನಲ್ಲಿ ಪ್ರದರ್ಶನ ನೀಡಿದರು. ಈ ಕಾರ್ಯಕ್ರಮಕ್ಕೆ ರಿಹಾನ್ನಾ 74 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

ಜಾಮ್‌ನಗರದ ಆಚರಣೆಗಳ ನಂತರ, ಜೂನ್‌ನಲ್ಲಿ ನಡೆದ ಕ್ರೂಸ್ ಪಾರ್ಟಿಯು ದಿ ಬ್ಯಾಕ್‌ಸ್ಟ್ರೀಟ್ ಬಾಯ್ಸ್, ಪಿಟ್‌ಬುಲ್ ಮತ್ತು ಇಟಾಲಿಯನ್ ಒಪೆರಾ ಗಾಯಕಿ ಆಂಡ್ರಿಯಾ ಬೊಸೆಲ್ಲಿ ಅವರ ಪ್ರದರ್ಶನಗಳನ್ನು ಒಳಗೊಂಡಿತ್ತು.

ಗಾಯಕ ಎಕಾನ್‌ಗೆ 2-4 ಕೋಟಿ ರೂ, ಗಾಯಕಿ ಶಕೀರಾ 10-15 ಕೋಟಿ ನೀಡಲಾಗಿತ್ತು.

ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವಿವಾಹ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಅವರ ವಿವಾಹವು ಮೂರು ಕಾರ್ಯಕ್ರಮಗಳನ್ನು ಒಳಗೊಂಡಿದೆ - 'ಶುಭ ವಿವಾಹ' ನಂತರ ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು 'ಮಂಗಲ್ ಉತ್ಸವ' ಅಥವಾ ಜುಲೈ 14 ರಂದು ಮದುವೆಯ ಆರತಕ್ಷತೆ.

Bank Job: ಬ್ಯಾಂಕ್ ನಲ್ಲಿ ಉದ್ಯೋಗವಕಾಶ; ‘IBPS’ ನಿಂದ ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Advertisement
Advertisement
Advertisement