ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Nitin Gadkari: ಪ್ರಧಾನಿ ಹುದ್ದೆಯ ರೇಸ್ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದೇನು ?

10:18 PM Mar 18, 2024 IST | ಹೊಸ ಕನ್ನಡ
UpdateAt: 10:18 PM Mar 18, 2024 IST
Advertisement

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾನು ಎಂದಿಗೂ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಇರಲಿಲ್ಲ ಮತ್ತು ನನ್ನ ಬಳಿ ಏನಿದೆಯೋ ಅದರಲ್ಲಿ ತೃಪ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Actress Ananya Pandey: ಲ್ಯಾಕ್ಮೆ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಈ ಹೇಳಿಕೆ ನೀಡಿದ್ದಾರೆ. ಮುಂಬರುವ ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ . ಡಿ . ಎ . ಸರ್ಕಾರವು ಬಹುಮತ ಗಳಿಸುವಲ್ಲಿ ವಿಫಲವಾದರೆ ತಾವು" ಮುಂದಿನ ಪ್ರಧಾನಿ ಅಭ್ಯರ್ಥಿ ಆಗಬಹುದು ಎಂಬ ಊಹಾಪೋಹಗಳ ಕುರಿತ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದಾರೆ.

Advertisement

ಇದನ್ನೂ ಓದಿ: Arvind Kejriwal: ದೆಹಲಿ ಜಲ ಮಂಡಳಿ ಹಗರಣ : 8ನೇ ಬಾರಿ ವಿಚಾರಣೆಗೆ ಚಕ್ಕರ್ ಹಾಕಿದ ಅರವಿಂದ ಕೇಜ್ರಿವಾಲ್

ನಾನು ಎಂದಿಗೂ ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಇರಲಿಲ್ಲ. ಇಂದು ನಾನು ಏನಾಗಿದ್ದೇನೋ ಅದರಲ್ಲಿ ನನಗೆ ತೃಪ್ತಿಯಿದೆ. ನಾನು ನಂಬಿಕೆಯುಳ್ಳ ಬದ್ಧತೆಯಿರುವ ಬಿಜೆಪಿ ಕಾರ್ಯಕರ್ತನಾಗಿದ್ದೇನೆ, ನಾನು ಲೆಕ್ಕಾಚಾರದಿಂದ ರಾಜಕಾರಣಿಯಲ್ಲ" ಎಂದು ಗಡ್ಕರಿ ತಿಳಿಸಿದ್ದಾರೆ.

ನಾನು ಸಬ್ಕಾ ಸಾಥ್ ಸಬ್ಕಾ ವಿಕಾಸ್ ನಲ್ಲಿ ನಂಬಿಕೆ ಇಟ್ಟಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್ .ಡಿ. ಎ. ಸರ್ಕಾರ ಶ್ಲಾಘನೀಯ ಕೆಲಸ ಮಾಡುತ್ತಿದೆ. ಮೋದಿ ನಾಯಕತ್ವದಲ್ಲಿ ನಾವು ಮತ್ತೆ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಮತ್ತು ಬಿಜೆಪಿ ಪ್ರಸ್ತಾಪಿಸಿರುವ " ಆಕ್ರಮಣಕಾರಿ ಹಿಂದುತ್ವದ ಆರೋಪಗಳ ಬಗ್ಗೆಯೂ ಗಡ್ಕರಿ ಮಾತನಾಡಿದ್ದು, ರಾಮ ಮಂದಿರದ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ನಾನು ಭಾವಿಸುತ್ತೇನೆ. " ಎಂದು ಗಡ್ಕರಿ ಹೇಳಿದ್ದಾರೆ.

Related News

Advertisement
Advertisement