For the best experience, open
https://m.hosakannada.com
on your mobile browser.
Advertisement

Vidhanasoudha: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್‌ ಹುಸೇನ್‌'ಗೆ ಗೆಲುವು - ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

07:09 AM Feb 28, 2024 IST | ಹೊಸ ಕನ್ನಡ
UpdateAt: 10:24 AM Feb 28, 2024 IST
vidhanasoudha  ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್‌ ಹುಸೇನ್‌ ಗೆ ಗೆಲುವು   ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
Advertisement

Vidhanasoudha: ರಾಜ್ಯಸಭಾ ಚುನಾವಣೆ ನಡೆದು ಫಲಿತಾಂಶವೂ ಪ್ರಕಟಗೊಂಡಿದ್ದು ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು, ಬಿಜೆಪಿಯ ಓರ್ವ ಅಭ್ಯರ್ಥಿ ಸಂಸತ್ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಈ ವೇಳೆ ಗೆಲುವನ್ನು ಸಂಭ್ರಮಿಸುವಾಗ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಧಾನಸೌಧದಲ್ಲಿ(Vidhanasoudha) ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

Advertisement

ಇದನ್ನೂ ಓದಿ: Rajyasabhe election: ರಾಜ್ಯಸಭೆ ಚುನಾವಣೆ- ಕರ್ನಾಟಕದಲ್ಲಿ ಯಾರಿಗೆಷ್ಟು ಗೆಲುವು?

https://youtu.be/H3DcGjQKlYc?si=hy1QrJY6Cfug3HkH

Advertisement

ಹೌದು, ನಾಸೀರ್ ಹುಸೇನ್(Naseer husen) ಅವರ ಗೆಲುವನ್ನು ಸಂಭ್ರಮಿಸುವಾಗ ರಾಜ್ಯದ ವಿಧಾನಸೌಧದಲ್ಲಿ ಕೆಲವು ದೇಶದ್ರೋಹಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾ ಅರಚಾಡಿದ್ದಾರೆ. ಮಾಧ್ಯಮಗಳಲ್ಲಿ ಪಾಕ್ ಜಿಂದಾಬಾದ್ ಘೋಷಣೆ ವೀಡಿಯೋ ವೈರಲ್ ಆಗತೊಡಗಿವೆ. ಘೋಷಣೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡುತ್ತಿದ್ದಂತೆಯೇ ನಾಸಿರ್ ಹುಸೇನ್ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಇನ್ನು ಗೆಲುವನ್ನು ಕಂಡ ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ಈ ಕುರಿತು ಪ್ರತಿಕ್ರಿಯಿಸಿ ಆ ರೀತಿ ಘೋಷಣೆ ಯಾರು ಕೂಗಿದ್ದಾರೆ ಗೊತ್ತಿಲ್ಲ. ಯಾರೇ ಮಾಡಿದ್ದರೂ ಅದೂ ತಪ್ಪು. ಯಾರು ಮಾಡಿದ್ದಾರೆ ಅನ್ನೋದನ್ನ ಪರಿಶೀಲನೆ ಮಾಡಬೇಕು ಎಂದು ಜಿಸಿ ಚಂದ್ರಶೇಖರ್ ಹೇಳಿದ್ದಾರೆ.

ಆರ್‌ ಅಶೋಕ್‌ ಟ್ವೀಟ್‌ ಮಾಡಿ ಕಿಡಿ

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು ಈ ಘಟನೆ ಕಾಂಗ್ರೆಸ್‌ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ ಎಂದು ಆರೋಪಿಸಿದ್ದಾರೆ.

Advertisement
Advertisement
Advertisement