ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

PM Modi: ಯೂಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ತಪ್ಪಿಸಿದ್ದು ಮೋದಿ : ಸಿ ಎನ್ ಎನ್ ಸುದ್ದಿ ಸಂಸ್ಥೆ ವರದಿ ಬಿಡುಗಡೆ

08:38 AM Mar 11, 2024 IST | ಹೊಸ ಕನ್ನಡ
UpdateAt: 08:38 AM Mar 11, 2024 IST
Advertisement

ಜಾಗತಿಕವಾಗಿ ಭಾರತ ತನ್ನ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಮೇರಿಕಾದ ಸುದ್ದಿ ಸಂಸ್ಥೆ ಸಿ.ಎನ್.ಎನ್ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಯಾದಿಮಿ‌ರ್ ಪುತಿನ್‌ರ ಮನವೊಲಿಸಿದ್ದರಿಂದ ಯೂಕ್ರೇನ್ ಮೇಲಿನ ಸಂಭಾವ್ಯ ಅಣ್ವಸ್ತ್ರ ದಾಳಿ ತಪ್ಪಿತ್ತೆಂದು ವರದಿ ಮಾಡಿದೆ.

Advertisement

2022ರಲ್ಲಿ ಯೂಕ್ರೇನ್ ವಿರುದ್ದದ ಯುದ್ಧವನ್ನು ಆರಂಭಿಸಿದ್ದ ರಷ್ಯಾ ಅಧ್ಯಕ್ಷ ಪುಟಿನ್, ಯುಕ್ರೇನ್ ದೇಶದ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಬಗ್ಗೆ ಗಂಭೀರ ಯತ್ನ ನಡೆಸುತ್ತಿತ್ತು.

ಇದರ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಅನೇಕ ದೇಶಗಳ ಪ್ರಧಾನಿಗಳು ಕಳವಳ ವ್ಯಕ್ತಪಡಿಸಿ ಇಂಥ ಅಪಾಯವನ್ನು ತಪ್ಪಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದರು. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವರ ಸಹಕಾರವನ್ನು ಕೋರಲಾಗಿತ್ತು. ಪ್ರಧಾನಿ ಮೋದಿ ಮತ್ತು ಇತರರು ಪುತಿನ್ ರೊಂದಿಗೆ ಮಾತುಕತೆ ನಡೆಸಿದ ನಂತರವಷ್ಟೇ ಈ ಬಿಕ್ಕಟ್ಟು ನಿವಾರಣೆಯಾಯಿತು ಎಂದು ವರದಿ ಮಾಡಿದೆ.

Advertisement

Related News

Advertisement
Advertisement