sharmistha mukherjee: ಕಾಂಗ್ರೆಸ್ ಗೆ ಬಿಗ್ ಶಾಕ್- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಬಿಚ್ಚಿಟ್ರು ಸ್ಪೋಟಕ ರಹಸ್ಯ !!
sharmistha mukherjee: ಪಂಚರಾಜ್ಯ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಉಂಟಾಗಿದೆ. ಕಾಂಗ್ರೆಸ್ ನ ಪ್ರಬಲ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(Pranab Mukharjee) ಅವರ ಪುತ್ರಿ ಬಿಚ್ಚಿಟ್ಟಿರುವ ಸ್ಪೋಟಕ ಸತ್ಯವೊಂದು ಇದೀಗ ಕಾಂಗ್ರೆಸ್ ಬುಡಕ್ಕೇ ಬೆಂಕಿ ಇಟ್ಟಂತಾಗಿದೆ. ಜೊತೆಗೆ ಇದರಿಂದ ಬಿಜೆಪಿಗೆ ಪ್ರಬಲ ಅಸ್ತ್ರವೊಂದು ಸಿಕ್ಕಂತಾಗಿದೆ.
ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡಿದ್ದ ಪ್ರಮುಖ ಆರೋಪಗಳಲ್ಲಿ, ಮನ್‌ಮೋಹನ್ ಸಿಂಗ್(Manamohan Singh) ಪ್ರಧಾನಿಯಾಗಿದ್ದರು, ಆದರೆ ಎಲ್ಲಾ ಅಧಿಕಾರ ಸೋನಿಯಾ ಗಾಂಧಿ ಕೈಯಲ್ಲಿತ್ತು ಅನ್ನೋ ಆರೋಪ ಬಹಳ ಮುಖ್ಯವಾದದ್ದು. ಇದು ಸತ್ಯಕ್ಕೆ ದೂರದ ಮಾತೆಂದು ಕಾಂಗ್ರೆಸ್ ಹೇಳುತ್ತಲೇ ಬರುತ್ತಿತ್ತು. ಆದರೀಗ ಬಿಜೆಪಿಯ ಈ ಆಯೋಪಕ್ಕೆ ಇದೀಗ ಬಹಳ ದೊಡ್ಡ ಶಕ್ಕಿಬಂದಂತಾಗಿದ್ದು ಪ್ರಬಲ ಸಾಕ್ಷ್ಯ ಲಭ್ಯವಾಗಿದೆ.
ಹೌದು, ಮಾಜಿ ರಾಷ್ಟ್ರಪತಿ, ಕಾಂಗ್ರೆಸ್(Congress) ದಿವಂಗತ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ(sharmistha mukherjee) ಅವರು 'ಪ್ರಣಬ್ ಮೈ ಫಾದರ್, ಎ ಡಾಟರ್ ರಿಮೆಂಬರ್ಸ್' ಅನ್ನೋ ಆತ್ಮಚರಿತ್ರೆ ಬರೆದಿದ್ದು ಅದು ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಪ್ರಣಬ್ ಮುಖರ್ಜಿ ಅವರ ಹಲವು ಸ್ಫೋಟಕ ಅಭಿಪ್ರಾಯ, ಮಾತುಗಳು, ಚರ್ಚೆಗಳನ್ನು ಅವರ ಪುತ್ರಿ ದಾಖಲಿಸಿ ಕಾಂಗ್ರೆಸ್ ನ ಬಣ್ಣ ಬಯಲಾಗುವಂತೆ ಮಾಡಿದ್ದಾರೆ. ಜೊತೆಗೆ ಇದಕ್ಕೂ ಮೊದಲು ಶರ್ಮಿಷ್ಠಾ ನೀಡಿರುವ ಸಂದರ್ಶನ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ.
ಅಂದಹಾಗೆ 2004ರಲ್ಲಿ ಲೋಕಸಭಾಚುನಾವಣೆಯಲ್ಲಿ
ಯುಪಿಎ ಮೈತ್ರಿ ಕೂಟ ಗೆಲುವಿನ ನಗೆ ಬೀರಿತ್ತು. ಕಾಂಗ್ರೆಸ್ ನಾಯಕರ ಪೈಕಿ ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಎಲ್ಲಾ ಅರ್ಹತೆಗಳಿತ್ತು. ಇದು ಕಾಂಗ್ರೆಸ್‌ನ ಬಹುತೇಕ ನಾಯಕರ ಆಯ್ಕೆ ಕೂಡ ಆಗಿತ್ತು. ಆದರೆ ಗಾಂಧಿ ಕುಟುಂಬಕ್ಕೆ ಪ್ರಣಬ್ ಮುಖರ್ಜಿ ಪ್ರಧಾನಿಯಾಗುವುದು ಸುತಾರಂ ಇಷ್ಟವಿರಲಿಲ್ಲ. ಪ್ರಣಬ್ ಪ್ರಧಾನಿಯಾದರೆ ಗಾಂಧಿ ಕುಟುಂಬದ ಕೈಯಲ್ಲಿರುವ ಅಧಿಕಾರಿ ಸಂಪೂರ್ಣ ಕೈತಪ್ಪಲಿದೆ. ಇದನ್ನರಿತ ಸೋನಿಯಾ ಗಾಂಧಿ(Soina gandhi) ತನಗೆ ಯಾವುದೇ ಅಧಿಕಾರ ಚಲಾವಣೆ ಸಾಧ್ಯವಿಲ್ಲ ಎಂದು ಪ್ರಣಬ್ ಪ್ರಧಾನಿಯಾಗುವುದನ್ನು ವಿರೋಧಿಸಿದರು ಎನ್ನುವ ಸ್ಫೋಟಕ ಮಾಹಿತಿಯನ್ನು ಪ್ರಣಬ್ ಮುಖರ್ಜಿ ಪುತ್ರಿ ಬಹಿರಂಗಪಡಿಸಿದ್ದಾರೆ.
ಅಲ್ಲದೆ ಸೋನಿಯಾ ಹಾಗೂ ಗಾಂಧಿ ಕುಟುಂಬದ ಮಾತು ಕೇಳುವ ಹಾಗೂ ಸೋನಿಯಾ ಅಧಿಕಾರ ಚಲಾವಣೆಯಲ್ಲಿ ಯಾವುದೇ ರೀತಿ ಅಡ್ಡಬರದ ವ್ಯಕ್ತಿಯನ್ನು ಸೋನಿಯಾ ಗಾಂಧಿ ಪ್ರಧಾನಿ ಮಾಡಿದರು ಎಂದು ಪುತ್ರಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಮಾಡಿದ್ದ ಪ್ರಮುಖ ಆರೋಪಗಳಲ್ಲಿ, ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ಆದರೆ ಎಲ್ಲಾ ಅಧಿಕಾರ ಸೋನಿಯಾ ಗಾಂಧಿ ಕೈಯಲ್ಲಿತ್ತು ಅನ್ನೋ ಆರೋಪಕ್ಕೆ ಇದೀಗ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ. ಇದರಿಂದಾಗಿ ಚಳಿಗಾಲದ ಅಧಿವೇಶನ ನಡೆಯುವಾಗ, ಲೋಕಸಭಾ ಚುನಾವಣೆ ಎದುರಾಗುವಾಗ ಕಾಂಗ್ರೆಸ್ ಗೆ ಭಾರೀ ಮುಜುಗರವಾಗಿದ್ದು, ಬಿಜೆಪಿಗೆ ಪ್ರಬಲ ಅಸ್ತ್ರ ದೊರೆತಂತಾಗಿದೆ.
ಇದನ್ನು ಓದಿ: Crime News: ಮದುವೆ ಮನೆಯಲ್ಲಿ ಊಟ ಬಡಿಸುವವನನ್ನೇ ಹೊಡೆದು ಕೊಂದ ಅತಿಥಿಗಳು - ಮರುಕ ಹುಟ್ಟಿಸುತ್ತೆ ಕಾರಣ