ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Arvind Kejriwal: ದೆಹಲಿ ಜಲ ಮಂಡಳಿ ಹಗರಣ : 8ನೇ ಬಾರಿ ವಿಚಾರಣೆಗೆ ಚಕ್ಕರ್ ಹಾಕಿದ ಅರವಿಂದ ಕೇಜ್ರಿವಾಲ್

10:03 PM Mar 18, 2024 IST | ಹೊಸ ಕನ್ನಡ
UpdateAt: 10:03 PM Mar 18, 2024 IST
Advertisement

ನವದೆಹಲಿ : ಮಾರ್ಚ್ 18ಕ್ಕೆ ದೆಹಲಿ ಜಲ ಮಂಡಳಿಯ ಅಕ್ರಮಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ( ಇಡಿ ) ಸಮನ್ಸ್ ಜಾರಿ ಮಾಡಿತ್ತು, ಆದರೆ ಕೇಜ್ರಿವಾಲ್ ವಿಚಾರಣೆಗೆ ತೆರಳದೆ ಗೈರಾಗಿದ್ದಾರೆ.

Advertisement

ಇದನ್ನೂ ಓದಿ: Infosys founder Narayan Murthy: 4 ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ

ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಪಕ್ಷವು ಜಲಮಂಡಳಿ ಅಕ್ರಮ ಪ್ರಕರಣವು ಕೇಜ್ರಿವಾಲ್ ಅವರನ್ನು ಬಂಧಿಸುವ ಮತ್ತು ಲೋಕಸಭಾ ಚುನಾವಣೆಯ ಪ್ರಚಾರದಿಂದ ಅವರನ್ನು ತಡೆಯುವ ಹಿಂದಿನ ಯೋಜನೆಯಾಗಿದೆ " ಎಂದು ಹೇಳಿದೆ .

Advertisement

ಕೇಜ್ರಿವಾಲ್ ಇದುವರೆಗೆ ಎಂಟು ಸಮನ್ಸ್ಗಳನ್ನು ತಪ್ಪಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತನ್ನ ಸಮನ್ಸ್ ಅನ್ನು ಪಾಲಿಸದ ಕಾರಣ ಇಡಿ ಸಲ್ಲಿಸಿದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಮಾರ್ಚ್ 17 ರಂದು ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದು, ಮತ್ತೆ ಮಾರ್ಚ್ 21ರಂದು ಇಡಿ ತನಿಕಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಷರತ್ತು ವಿಧಿಸಲಾಗಿದೆ.

ಇನ್ನು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ . ಚಂದ್ರಶೇಖರ್ ರಾವ್ ಅವರ ಪುತ್ರಿ, ಭಾರತ ರಾಷ್ಟ್ರ ಸಮಿತಿ ( ಬಿಆರ್ಎಸ್ ) ನಾಯಕಿ ಕೆ . ಕವಿತಾ ಅವರನ್ನು ಈಗ ರದ್ದುಗೊಳಿಸಲಾದ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.

Advertisement
Advertisement