For the best experience, open
https://m.hosakannada.com
on your mobile browser.
Advertisement

Karmataka government: 30 ವರ್ಷಗಳ ಹಿಂದೆ ರಾಮ ಜನ್ಮಭೂಮಿಗಾಗಿ ಹೋರಾಡಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ ಕಾಂಗ್ರೆಸ್ ಸರ್ಕಾರ !!

10:13 PM Jan 01, 2024 IST | ಹೊಸ ಕನ್ನಡ
UpdateAt: 10:13 PM Jan 01, 2024 IST
karmataka government  30 ವರ್ಷಗಳ ಹಿಂದೆ ರಾಮ ಜನ್ಮಭೂಮಿಗಾಗಿ ಹೋರಾಡಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ ಕಾಂಗ್ರೆಸ್ ಸರ್ಕಾರ
Advertisement

Karnataka government: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಜೀವಗಳು ಕಾತರವಾಗಿವೆ. ಆದರೆ ಈ ನಡುವೆ ರಾಮಜನ್ಮ ಭೂಮಿಗಾಗಿ ಹೋರಾಡಿದ ಸಾವಿರಾರು ಕಾರ್ಯಕರ್ತರಿಗೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ(Karnataka government)ಬಿಗ್ ಶಾಕ್ ಕೊಟ್ಟಿದೆ.

Advertisement

ಹೌದು, ಅಯೋಧ್ಯೆಯಲ್ಲಿ(Ayodhye) ರಾಮ ಮಂದಿರ ಉದ್ಘಾಟನೆ ಆಗುವ ಹೊತ್ತಿನಲ್ಲೇ ರಾಜ್ಯ ಸರ್ಕಾರವು ಸುಮಾರು 30ವರುಷಗಳ ಹಿಂದೆ ರಾಮ ಜನ್ಮ ಭೂಮಿಗಾಗಿ ಹೋರಾಟ ನಡೆಸಿದ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಗಳನ್ನು ರೀ ಒಪನ್ ಮಾಡಿದ್ದು ಅವರೆಲ್ಲರನ್ನು ಬಂಧಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಮಭಕ್ತರ ಮೇಲೆ, ರಾಮ ಅನುಯಾಯಿಗಳ ಮೇಲೆ ಕೇಸ್ ಹಾಕಿದ್ದಾರೆ.ಮೂವತ್ತು ವರ್ಷದ ಹಿಂದೆ ಹೋರಾಟ ಮಾಡಿದವರನ್ನ ಬಂಧಿಸಿದ್ದಾರೆ.

ಆಗಿದ್ದೇನು?
ಅಯೋಧ್ಯೆ ಕರಸೇವೆಗೂ (Ayodhya Karaseva) ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ (Hubballi Riots) ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದಾರೆ. ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಈ ನಡೆಗೆ ಸಾಕಷ್ಟು ಆಕ್ರೋಶ ಕೇಳಿಬರುತ್ತಿದೆ.

Advertisement

ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಈ ಕುರಿತು ಮಾತನಾಡಿದ ಪರಮೇಶ್ವರ್ ಅವರು ಹಳೆ ಕೇಸ್ ಕ್ಲಿಯರ್ ಮಾಡುವ ಸಂದರ್ಭದಲ್ಲಿ ಇದು ಬಂದಿದೆ. ಎಲ್ಲಾ ಹಳೆಯ ಪ್ರಕರಣಗಳಲ್ಲೂ ಇದೇ ರೀತಿ ಕ್ರಮ ಆಗುತ್ತೆ. ರಾಮಮಂದಿರ ಉದ್ಘಾಟನೆ ವೇಳೆ ಉದ್ದೇಶ ಪೂರ್ವಕವಾಗಿ ಈ ಸಮಯದಲ್ಲಿ ಯಾರಾದರೂ ಈ ಕೆಲಸ ಮಾಡುತ್ತಾರೆಯೇ? ಆ ರೀತಿ ಏನೂ ಇಲ್ಲ. ಇದೊಂದು ಆಕಸ್ಮಿಕ ಅಷ್ಟೇ ಎಂದು ಹೇಳಿದರು.

ಅಲ್ಲದೆ ಹಿಂದೂ ಕಾರ್ಯಕರ್ತರು ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಕೇಸ್‌ ರೀ ಓಪನ್ ಮಾಡಿ ಬಂಧಿಸುವ ಪ್ರಯತ್ನ ಮಾಡಿಲ್ಲ. ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಪೊಲೀಸ್ ಇಲಾಖೆ ಮಾಡುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ ಎಂದರು.

ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ ರಾಮನವಮಿಯನ್ನು ಯಾವತ್ತೂ ಆಚರಣೆ ಮಾಡಿಲ್ಲ. ಟಿಪ್ಪು ಜಯಂತಿಯನ್ನ ರಾಜ್ಯಾಧ್ಯಂತ ಸಂಭ್ರಮ ಮಾಡುತ್ತಾರೆ. ರಾಮ ,ಕೃಷ್ಣ ಅಂದ್ರೆ ಇವರಿಗೆ ಆಗಲ್ಲ. ಕೇಸರಿ ಶಾಲು,ಕುಂಕುಮ ಹಾಕಿದ್ರೆ ಅವರಿಗೆ ಆಗಲ್ಲ. ಅದಕ್ಕೆ ಈ ನಾಟಕ ಎಂದರು. ಅಲ್ಲದೆ ನಾನು, ಯಡಿಯೂರಪ್ಪನವರು ಕೂಡ ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದೇವು. ಹಾಗಾದ್ರೆ ನಮ್ಮನ್ನ ಅರೆಸ್ಟ್ ಮಾಡುತ್ತಾರಾ..? ಮೂವತ್ತು ವರ್ಷದ ಹಿಂದೆ ಆಗಿರುವ ಘಟನೆ ಕೇಸ್ ಗೆ ಮರು ಜೀವ ಕೊಡುತ್ತಿದ್ದಾರಾ ? ಎಂದು ಕಿಡಿಕಾರಿದರು.

Advertisement
Advertisement
Advertisement