ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

PM Modi: ಪ್ರಾಣ ಪ್ರತಿಷ್ಠೆ ನೆರವೇರಿಸಿ, ಅಯೋಧ್ಯೆಯಿಂದ ಬಂದ ಕೂಡಲೇ ಪ್ರಧಾನಿ ಮೋದಿಯಿಂದ ಮತ್ತೊಂದು ಮಹತ್ವದ ಘೋಷಣೆ!!

11:38 PM Jan 22, 2024 IST | ಹೊಸ ಕನ್ನಡ
UpdateAt: 11:39 PM Jan 22, 2024 IST
Advertisement

PM Modi: ನಿನ್ನೆ ದಿನ ಇಡೀ ದೇಶವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಭು ಶ್ರೀರಾಮನು ಅಯೋಧ್ಯೆಯಲ್ಲಿ ವಿರಾಜಮಾನವಾಗುವ ಮೂಲಕ ದೇಶದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ದೇಶದ ಕೋಟ್ಯಾಂತರ ಹಿಂದೂಗಳ ಕನಸನ್ನು ಪ್ರಧಾನಿ ಮೋದಿಯವರು ನೆರವೇರಿಸಿ, ಎಲ್ಲರ ಪ್ರತಿನಿಧಿಯಾಗಿ ರಾಮನ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ(PM Modi)ಯವರು ಮತ್ತೊಂದು ಮಹತ್ವದ ಹೊಸ ಘೋಷಣೆ ಮಾಡಿದ್ದಾರೆ.

Advertisement

ಹೌದು, ಜ. 22ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಲೋಕಾರ್ಪಣೆ ಮಾಡಿದ ನಂತರ ನವದೆಹಲಿಗೆ ಹಿಂದಿರುಗಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ. ಅಯೋಧ್ಯೆಯಲ್ಲಿ ಸೂರ್ಯವಂಶದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಅದ್ದೂರಿಯಾಗಿ ಮುಕ್ತಾಯವಾಗಿದ್ದು, ಇದರ ನೆನಪಿಗಾಗಿ ಸೂರ್ಯನಿಂದ ಲಾಭ ಪಡೆಯುವ 'ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ'(Pradhan mantri suryoday yojane)ಯನ್ನು ಆರಂಭ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ದೇಶದ ಬಡವರು ಹಾಗೂ ಮಧ್ಯಮ ವರ್ಗಗಳಿಗೆ ಸೇರಿದ ಸುಮಾರು 1 ಕೋಟಿ ಮನೆಗಳನ್ನು ಸೌರಶಕ್ತಿ ವ್ಯಾಪ್ತಿಗೆ ತರುವ ಉದ್ದೇಶ ಈ ಯೋಜನೆಯದ್ದಾಗಿದೆ.

https://x.com/KanchanGupta/status/1749421984985862622?t=yhrJaGZRHy7KEHoxIQu5GQ&s=08

Advertisement

ಯೋಜನೆಯನ್ನು ಘೋಷಣೆ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಅವರು 'ಪ್ರಪಂಚದ ಎಲ್ಲರಿಗೂ ಸೂರ್ಯವಂಶಸ್ಥನಾದ ಶ್ರೀರಾಮನಿಂದ ಸೌರಶಕ್ತಿಯು ಯಥೇಚ್ಛವಾಗಿ ಸಿಗುತ್ತದೆ. ಅಯೋಧ್ಯೆಯಿಂದ ಬಂದ ಕೂಡಲೇ ನನ್ನಲ್ಲಿ ಸೂರ್ಯಶಕ್ತಿಯನ್ನು ಮತ್ತಷ್ಟು ಜನೋಪಯೋಗಿಯಾಗಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದ್ದೇನೆ. ಅದಕ್ಕಾಗಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದೇನೆ. ಈ ಮೂಲಕ, ದೇಶದ ಪ್ರತಿಯೊಬ್ಬ ಭಾರತೀಯನೂ ತನ್ನ ಮನೆಯ ಮೇಲೆ ತನಗೆಷ್ಟು ಬೇಕೋ ಅಷ್ಟು ವಿದ್ಯುಚ್ಛಕ್ತಿ ಉತ್ಪಾದಿಸುವ ಅವಕಾಶ ಸಿಗುತ್ತದೆ’’ ಎಂದು ಹೇಳಿದ್ದಾರೆ.

https://x.com/narendramodi/status/1749415140662055073?t=QYMxN8Dm4Pdw-zlZf0odww&s=08

ಅಲ್ಲದೆ ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ಅನ್ನು ಸ್ಥಾಪಿಸುವ ಗುರಿಯೊಂದಿಗೆ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಅನ್ನು ಪ್ರಾರಂಭಿಸುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದಿದ್ದಾರೆ ಅವರು.

Advertisement
Advertisement