For the best experience, open
https://m.hosakannada.com
on your mobile browser.
Advertisement

Jaipur: ತರಕಾರಿ ವ್ಯಾಪಾರಿಯನ್ನು ಅಮಾನುಷವಾಗಿ ಹೊಡೆದು ಕೊಂದ ಪೋಲೀಸ್ ಮಗ !! ಭಯಾನಕ ವಿಡಿಯೋ ವೈರಲ್

Jaipur: ತರಕಾರಿ ವ್ಯಾಪಾರಿಯನ್ನು ಪೊಲೀಸ್ ಅಧಿಕಾರಿಯ ಮಗನೊಬ್ಬ ಮನಬಂದಂತೆ ಥಳಿಸಿ ಕೊಂದ ಅಘಾತಕಾರಿ ಘಟನೆ
02:55 PM Apr 04, 2024 IST | ಸುದರ್ಶನ್
UpdateAt: 03:01 PM Apr 04, 2024 IST
jaipur  ತರಕಾರಿ ವ್ಯಾಪಾರಿಯನ್ನು ಅಮಾನುಷವಾಗಿ ಹೊಡೆದು ಕೊಂದ ಪೋಲೀಸ್ ಮಗ    ಭಯಾನಕ ವಿಡಿಯೋ ವೈರಲ್

Jaipur: ತರಕಾರಿ ವ್ಯಾಪಾರಿಯನ್ನು ಪೊಲೀಸ್ ಅಧಿಕಾರಿಯ ಮಗನೊಬ್ಬ ಮನಬಂದಂತೆ ಥಳಿಸಿ ಕೊಂದ ಅಘಾತಕಾರಿ ಘಟನೆ ರಾಜಸ್ಥಾನದ ಜೈಪುರದ(Jaipur) ಕರಣಿ ವಿಹಾರ್ ಪ್ರದೇಶದಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Vijayapura: ಕೊಳವೆ ಬಾವಿಗೆ ಬಿದ್ದ ಮಗು ಪ್ರಕರಣ; ಅಪರೇಷನ್‌ ಸಕ್ಸಸ್‌; ಸಾವು ಗೆದ್ದು ಬಂದ ಪುಟ್ಟ ಕಂದ

https://x.com/SachinGuptaUP/status/1775718872458338371?t=tFiUjgRvdRYY9uPSijW1kg&s=08

Advertisement

ಹೌದು, ಮಂಗಳವಾರ ರಾತ್ರಿ 10:30ರ ಸುಮಾರಿಗೆ ಈ ಭಯಾನಕ ಘಟನೆ ನಡೆದಿದ್ದು ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Vedio Viral)ಆಗಿದೆ. ವಿಡಿಯೋದಲ್ಲಿ ಆರೋಪಿ ತನ್ನ ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಮನನೆಯಿಂದ ಹೊರಬಂದು ಸಂತ್ರಸ್ತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಾನೆ. ಸಂತ್ರಸ್ತ ಸಹಾಯಕ್ಕೆ ಅಂಗಲಾಚಿದರೂ ಸಹ ಯಾರೂ ಆತನ ನೆರವಿಗೆ ಧಾವಿಸುವುದಿಲ್ಲ.

ಇದನ್ನೂ ಓದಿ: Home Tips: ಈ ಬೇಸಿಗೆ ಕಾಲದಲ್ಲಿ ನಿಮ್ಮ ಮನೆಯನ್ನು ಎಸಿ ಅಥವಾ ಕೂಲರ್ ಇಲ್ಲದೆ ಕೂಡಾ ತಂಪಾಗಿರಿಸಬಹುದು; ಈ ಸಲಹೆ ಅನುಸರಿಸಿ

ಬೇಕಾಬಿಟ್ಟಿ ಹೊಡೆದು, ತೀವ್ರ ರಕ್ತಸ್ರಾವದಿಂದ ಆತ ಕೆಳಗೆ ಬಿದ್ದರೂ ಸುಮ್ಮನಾಗದ ಪಾಪಿ ಆತನಿಗೆ ಮತ್ತೆ ಮತ್ತೆ ಬ್ಯಾಟಿನಿಂದ ಹೊಡೆಯುತ್ತಿರುತ್ತಾನೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿಯ ತಂದೆ ಪೋಲೀಸ್ ಕೂಡ ಪಕ್ಕದಲ್ಲೇ ನಿಂತಿದ್ದು, ಏನೂ ಪ್ರತಿಭಟಿಸದೆ ಸುಮ್ಮನೆ ನಿಂತಿರುವುದು ನಿಜಕ್ಕೂ ಎಂತವರನ್ನು ಘಾಸಿಗೊಳಿಸುತ್ತದಿ.

ಜೈಪುರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿ ಯಾವ ಕಾರಣಕ್ಕೆ ಆರೋಪಿ ಸಂತ್ರಸ್ತನ ಮೇಲೆ ಹಲ್ಲೆ ಮಾಡಿದ ಎಂದು ಈವರೆಗೆ ತಿಳಿದು ಬಂದಿಲ್ಲ. ಸಂತ್ರಸ್ತನ ಮೇಲೆ ಹಲ್ಲೆ ಮಾಡಿದ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮೃತನ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement
Advertisement