For the best experience, open
https://m.hosakannada.com
on your mobile browser.
Advertisement

Arjuna death matter: ಅರ್ಜುನ ಆನೆ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಆನೆ ಸತ್ತದ್ದು ಈ ಕಾರಣಕ್ಕಾ ?! ಮಾವುತ ಬಿಚ್ಚಿಟ್ಟ ಸತ್ಯವೇನು?

06:32 PM Dec 05, 2023 IST | ಹೊಸ ಕನ್ನಡ
UpdateAt: 06:36 PM Dec 05, 2023 IST
arjuna death matter  ಅರ್ಜುನ ಆನೆ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್  ಆನೆ ಸತ್ತದ್ದು ಈ ಕಾರಣಕ್ಕಾ    ಮಾವುತ ಬಿಚ್ಚಿಟ್ಟ ಸತ್ಯವೇನು
Advertisement

Arjuna death matter: ಆ ಮೂಕ ಪ್ರಾಣಿಯ ಸಾವಿಗೆ ಇಡೀ ಕನ್ನಡ ಜನ ತಮ್ಮ ಮನೆಯಲ್ಲೇ ಯಾವುದೋ ಒಂದು ಸಾವಾಯಿತು ಎಂದು ನೊಂದುಕೊಳ್ಳುತ್ತಿದ್ದಾರೆ. ಮರುಗುತ್ತಾ ಕಣ್ಣೀರ ಕರೆಯುತ್ತಿದ್ದಾರೆ. ಹೌದು, ಅರ್ಜುನ ಆನೆಯ ಸಾವು ಯಾರೋ ಒಬ್ಬ ಗಣ್ಯ ವ್ಯಕ್ತಿ, ಪ್ರೀತಿಯ ವ್ಯಕ್ತಿ ಅಗಲಿದ ನೋವನ್ನು ನೀಡುತ್ತಿದೆ. ಇಂದು ಗಜ ನಾಯಕನ ಅಂತ್ಯಸಂಸ್ಕಾರವೂ ನಡೆದಿದೆ. ಆದರೆ ಈ ಅರ್ಜುನನ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಒಂದು ದೊರೆತಿದ್ದು, ಅರ್ಜುನ ಮಾವುತ ಸತ್ಯಾಂಶವನ್ನು ಬಿಚ್ಚಿಟ್ಟಾದ್ದಾರೆ.

Advertisement

ಹೌದು,

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ (Arjuna), ವಿವಿಧೆಡೆ ಹುಲಿ ಹಾಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದ ಸಾಕಾನೆ ‘ಅರ್ಜುನ’, ಇದೇ ಕಾರ್ಯದಲ್ಲಿ ತೊಡಗಿರುವಾಗಲೇ ಹೋರಾಡುತ್ತಾ ವಿರೋಚಿತ ಸಾವು ಕಂಡಿದೆ ಎಂದು ಇದುವರೆಗೂ ಹೇಳಲಾಗಿತ್ತು. ಆದರೀಗ ಸುಳ್ಳು ಎಂದು ಸ್ವತಃ ಆನೆ ಮಾವುತರೇ ಹೇಳುತ್ತಿದ್ದು, ಅರಣ್ಯಾಧಿಕಾರಿಗಳ ನಿರ್ಲಕ್ಷದಿಂದ ಅರ್ಜುನ ಸಾವನ್ನಪ್ಪಿದ್ದಾನೆ ಎನ್ನುಲಾಗಿದೆ.

Advertisement

ಅಂದಹಾಗೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಅರ್ಜುನ ಸಾವಿಗೀಡಾಗಿದ್ದಾನೆ ಎನ್ನಲಾಗುತ್ತಿದೆ. ಆದರೆ ಅರ್ಜುನ ಸಾವಿನ ಬಗ್ಗೆ ಬೇರೆ-ಬೇರೆ ರೀತಿಯಾದ ಚರ್ಚೆಗಳು ನಡೆದಿವೆ. ಅರ್ಜುನ ಆನೆಯ ಮಾವುತನ ವಿಡಿಯೋಂದು ವೈರಲ್ ಆಗಿದ್ದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅರಣ್ಯಾಧಿಕಾರಿಗಳ ಅವಾಂತರವನ್ನು ತೆರೆದಿಟ್ಟಿದ್ದಾರೆ.

ಅಂದಹಾಗೆ ವಿಡಿಯೋದಲ್ಲಿ ಮಾತನಾಡಿದ ಅವರು 'ಅರಣ್ಯಾಧಿಕಾರಿಗಳು ದಾಳಿ ಮಾಡಿದ ಆನೇಗೆ ಶೂಟ್ ಮಾಡುವ ಬದಲು ಅರ್ಜುನನ ಕಾಲಿಗೆ ಶೂಟ್ ಮಾಡಿದ್ದಾರೆ. ಶೂಟ್ ಮಾಡಿದಾಗ ನಾವು ಆನೆಯಿಂದ ಇಳಿದು ಓಡಿದೆವು. ಬಳಿಕ ಅರ್ಜುನ ಆಲ್ಲೇ ಕುಸಿದು ಬಿದ್ದಾಗ ಕಾಡಾನೆ ಬಂದು ತನ್ನ ದಂತಗಳಿಂದ ಚುಚ್ಚಿ ಚುಚ್ಚಿ ಅರ್ಜುನನ್ನು ಸಾಯಿಸಿದೆ' ಎಂದು ಹೇಳಿದ್ದಾರೆ.

ಇದನ್ನು ಓದಿ: I.N.D.I.A: ಇಂಡಿಯಾ ಮೈತ್ರಿ ಕೂಟಕ್ಕೆ ಬಿಗ್ ಶಾಕ್- ಪ್ರಮುಖ ಪಕ್ಷಗಳ ನಾಯಕರಿಂದಲೇ ಮೈತ್ರಿ ಒಕ್ಕೂಟಕ್ಕೆ ದೊಡ್ಡ ಆಘಾತ!!

Advertisement
Advertisement
Advertisement