For the best experience, open
https://m.hosakannada.com
on your mobile browser.
Advertisement

PMAY Scheme: ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೌಲಭ್ಯ ಪಡೆಯಲು ಈ ಅರ್ಹತೆ ಇರಲೇಬೇಕು!

PMAY Scheme: ಸರ್ಕಾರದ ಯೋಜನೆ ಅಥವಾ ಮನೆಗೆ ಸಂಬಂಧಿಸಿದ ಯಾವುದೇ ಯೋಜನೆಯ ಲಾಭವನ್ನು ಪಡೆಯುತ್ತಿರುವ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನವು ಲಭ್ಯವಿಲ್ಲ.
02:53 PM Jun 16, 2024 IST | ಕಾವ್ಯ ವಾಣಿ
UpdateAt: 02:54 PM Jun 16, 2024 IST
pmay scheme  ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೌಲಭ್ಯ ಪಡೆಯಲು ಈ ಅರ್ಹತೆ ಇರಲೇಬೇಕು
Advertisement

PMAY Scheme: ಆರ್ಥಿಕ ಸಮಸ್ಯೆ, ಬಡತನ ಅಥವಾ ಹಲವಾರು ಕಾರಣಗಳಿಂದ ಕೆಲವರಿಗೆ ಮನೆ ಕಟ್ಟಲು ಆಗುವುದಿಲ್ಲ. ಆದ್ದರಿಂದ ಬಡವರಿಗೆ ಮತ್ತು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸವಿರುವವರಿಗೆ ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಾರಿಗೆ ತರಲಾಗಿದ್ದು, ಈ ಯೋಜನೆ ಮೂಲಕ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಮನೆಯನ್ನು ಕಟ್ಟಲು ಸಹಾಯ ಪಡೆಯಬಹುದಾಗಿದೆ.

Advertisement

ಮುಖ್ಯವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಯೋಜನ ಪಡೆಯಲು, ಅರ್ಜಿದಾರರು ಭಾರತದ ಯಾವುದೇ ಭಾಗದಲ್ಲಿ ಶಾಶ್ವತ ಮನೆ ಹೊಂದಿರಬಾರದು. ಅವರ ಕುಟುಂಬದ ವಾರ್ಷಿಕ ಆದಾಯ 18 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಜೊತೆಗೆ ಸರ್ಕಾರದ ಯೋಜನೆ ಅಥವಾ ಮನೆಗೆ ಸಂಬಂಧಿಸಿದ ಯಾವುದೇ ಯೋಜನೆಯ ಲಾಭವನ್ನು ಪಡೆಯುತ್ತಿರುವ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನವು ಲಭ್ಯವಿಲ್ಲ. ಇನ್ನು ಆ ಕುಟುಂಬದಲ್ಲಿ ಗಂಡ ಹೆಂಡತಿ ಮಗ ಅಥವಾ ಮಗಳು ಇರಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY Scheme)  ಅಡಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನ:

Advertisement

ಮೊದಲು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಅರ್ಹತೆ ಸರಿಹೊಂದುವ ವರ್ಗವನ್ನು ನೀವು ಆಯ್ಕೆ ಮಾಡಬೇಕು. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಹ ಸಲ್ಲಿಸಬೇಕು. ನಂತರ ಅಲ್ಲಿ ಕೇಳಲಾಗುವ ನಿಮ್ಮ ಹೆಸರು, ಫೋನ್ ನಂಬರ್, ಇಮೇಲ್ ವಿಳಾಸ ಮುಂತಾದ ಎಲ್ಲ ಮಾಹಿತಿಯನ್ನು ಅಲ್ಲಿ  ನೀಡಬೇಕು. ನಿಮ್ಮ ವಿಳಾಸ ಮತ್ತು ಆದಾಯದ ವಿವರಗಳನ್ನು ಒಳಗೊಂಡಂತೆ ನೀವು ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಒದಗಿಸಬೇಕಾಗುತ್ತದೆ. ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ಮೂಲಕ ಅರ್ಜಿಯ ಪ್ರತಿಯ ಪ್ರಿಂಟ್ ಔಟ್ ತೆಗೆದುಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

Advertisement
Advertisement
Advertisement