For the best experience, open
https://m.hosakannada.com
on your mobile browser.
Advertisement

PM Modi: ನಮ್ಮ ಪಕ್ಕದ ಮನೆಯೇ ಮುಸ್ಲಿಮರದ್ದು, ಈದ್ ದಿನ ಅವರ ಮನೆಯಲ್ಲೇ ನಮ್ಮ ಊಟ - ಪ್ರಧಾನಿ ಮೋದಿ

PM Modi: ಪ್ರಧಾನಿ ಮೋದಿ ಅವರು ತಮ್ಮ ಮತ್ತು ಮುಸ್ಲಿಂ ಬಾಂಧವರ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
02:52 PM May 15, 2024 IST | ಸುದರ್ಶನ್
UpdateAt: 02:54 PM May 15, 2024 IST
pm modi  ನಮ್ಮ ಪಕ್ಕದ ಮನೆಯೇ ಮುಸ್ಲಿಮರದ್ದು  ಈದ್ ದಿನ ಅವರ ಮನೆಯಲ್ಲೇ ನಮ್ಮ ಊಟ   ಪ್ರಧಾನಿ ಮೋದಿ
Advertisement

PM Modi: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿ ಮೋದಿಯವರು ಕೆಲವು ಮುಸ್ಲಿಂ(Muslim) ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮುಸ್ಲಿಂ ಮೀಸಲಾತಿ ವಿರುದ್ಧ ಮೋದಿ ಧ್ವನಿ ಎತ್ತಿದ್ದ ಕಾರಣ ಇದು ಇನ್ನೂ ಹೆಚ್ಚು ಸದ್ದು ಮಾಡುತ್ತಿದೆ. ಆದರೀಗ ಈ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ತಮ್ಮ ಮತ್ತು ಮುಸ್ಲಿಂ ಬಾಂಧವರ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

Advertisement

ಇದನ್ನೂ ಓದಿ: SSLC: ಬೇಸಿಗೆ ರಜೆಗೆ ಕತ್ತರಿ! ಶಿಕ್ಷಣ ಇಲಾಖೆ ಮೇಲೆ ಶಿಕ್ಷಕರ ಆಕ್ರೋಶ!

ಹೌದು, ಕಾಂಗ್ರೆಸ್‌(Congress) ಅಧಿಕಾರಕ್ಕೆ ಬಂದರೆ ಅದು ನಿಮ್ಮ ಆಸ್ತಿಗಳನ್ನು ಕಿತ್ತು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ'ನೀಡುತ್ತದೆ ಎಂದು ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವಾಗಿ ಕಾಂಗ್ರೆಸ್‌ ಚುನಾವಣಾ ಆಯೋಗದ(Election Commission) ಮೆಟ್ಟಿಲನ್ನು ಸಹ ಹತ್ತಿತ್ತು ಮತ್ತು ಆಯೋಗ ಎಂದಿನಂತೆ ತನ್ನ ಮೌನವನ್ನು ಕಾಪಾಡಿಕೊಂಡಿತ್ತು. ಈಗ ಪ್ರಧಾನಿ ಮೋದಿ(PM Modi) ಈ ವಿಷಯದಕ್ಕೆ ಸಂಬಂಧಿಸಿದಂತೆ ಖಾಸಗೀ ವಾಹಿನಿಯೊಂದರಲ್ಲಿ ಮಾತನಾಡಿದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Advertisement

ಇದನ್ನೂ ಓದಿ: Indian Railway: ಕೊಳೆ ಆಗುತ್ತೆ ಅಂತ ಗೊತ್ತಿದ್ದರೂ ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನು ಮಾತ್ರ ಬಳಸೋದು ಯಾಕೆ

ನಿರೂಪಕರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಮೊದಲಿಗೆ ನಾನು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಮುಸ್ಲಿಮರ ಮೇಲಿರುವ ಪ್ರೀತಿಯನ್ನು ಮಾರಾಟ ಮಾಡುವುದಿಲ್ಲ. ನಾನು ಹಿಂದೂ-ಮುಸ್ಲಿಂ ಎಂದು ರಾಜಕೀಯ ಮಾಡುವುದಿಲ್ಲ. ಹಾಗೆ ಮಾಡಲು ಪ್ರಾರಂಭಿಸಿದ ದಿನ ನಾನು ರಾಜಕೀಯವನ್ನು ತೊರೆಯುತ್ತೇನೆ. ನಾನು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಿಲ್ಲ, ಪ್ರತಿ ಬಡ ಕುಟುಂಬದ ಬಗ್ಗೆಯೂ ಮಾತನಾಡಿದ್ದೇನೆ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಇದು ನನ್ನ ನಿರ್ಣಯ ಎಂದಿದ್ದಾರೆ.

ಅಲ್ಲದೆ ಮುಸ್ಲಿಮರು ನನ್ನನ್ನು ಇಷ್ಟಪಡುತ್ತಾರೆ. ನಾನು ನನ್ನ ಬಾಲ್ಯವನ್ನು ಮುಸ್ಲಿಮರೊಂದಿಗೆ ಕಳೆದಿದ್ದೇನೆ. ನನ್ನ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಈದ್ ದಿನದಂದು ನಮ್ಮ ಮನೆಗಳಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ಮನೆಗೆ ಅಲ್ಲಿನ ಮುಸ್ಲಿಂ ಕುಟುಂಬಗಳು ಊಟ ಕಳುಹಿಸುತ್ತಿದ್ದವು ಎಂದಿದ್ದಾರೆ.

Advertisement
Advertisement
Advertisement