Mangaluru: ಮೋದಿ ರೋಡ್ ಶೋ ಎಫೆಕ್ಟ್ - ಮಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಬಂದ್ !! ಇಲ್ಲಿದೆ ಮಾರ್ಗ ಬದಲಾವಣೆ
Mangaluru: ಲೋಕಸಭಾ ಚುನಾವಣೆ(Parliament Election) ಪ್ರಯುಕ್ತ ರಾಜ್ಯಕ್ಕೆ ಮೋದಿಯವರ ಆಗಮನವಾಗುತ್ತಿದೆ. ಮೈಸೂರು, ಮಂಗಳೂರಲ್ಲಿ ಮೋದಿ ರಣಕಹಳೆ ಊದಲಿದ್ದಾರೆ. ಮೋದಿ(PM Modi) ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಮೈಸೂರು(Mysore) , ಮಂಗಳೂರು(Mangaluru) ಕೇಸರಿಮಯವಾಗಿದೆ.
ಇದನ್ನೂ ಓದಿ: Andra Pradesh: ಪ್ರಚಾರದ ವೇಳೆ ಕಲ್ಲು ತೂರಾಟ, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ತೀವ್ರ ಗಾಯ !! ವಿಡಿಯೋ ವೈರಲ್
ಇಂದು ಸಂಜೆ 4 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಸಂಜೆ 4:30 – ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ 7. 30 ರ ಸುಮಾರಿಗೆ ಪ್ರಧಾನಿ ಅವರು ಬಿಜೆಪಿ ಭದ್ರಕೋಟೆ ಮಂಗಳೂರಿಗೆ ಆಗಮಿಸಲಿದ್ದು, ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಮಂಗಳೂರು ಸಂಚಾರಿ ಪೊಲೀಸ್ ಇಲಾಖೆ ಮಾರ್ಗ ಬದಲಾವಣೆ ಸೂಚಿಸಿದೆ.
ಇದನ್ನೂ ಓದಿ: Actor Salman Khan: ನಟ ಸಲ್ಮಾನ್ ಖಾನ್ ಮನೆಯ ಬಳಿ ಗುಂಡಿನ ದಾಳಿ : ಬೈಕ್ ನಲ್ಲಿ ಬಂದ ಆಘಂತುಕರಿಂದ ದುಷ್ಕೃತ್ಯ
ಹೌದು, ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಲವು ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರ್ಯಾಲಿ ಮುಗಿಯುವವರೆಗೂ ವಾಹನ ಸಂಚಾರ ನಿಷೇಧಿಸಿ, ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಯಾವ ರಸ್ತೆಗಳು ಬಂದ್?
• ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ
• ಲಾಲ್‌ಬಾಗ್. ಬಲ್ಲಾಳ್‌ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್
• ಪಿ.ವಿ.ಎಸ್ – ನವಭಾರತ ವೃತ್ತ ಹಂಪನಕಟ್ಟೆವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
• ಕಾರ್ ಸ್ಟ್ರೀಟ್ – ಕುದ್ರೋಳಿ – ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂಜಿ ರಸ್ತೆ ಪ್ರವೇಶಿಸುವ ಎಲ್ಲ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
• ಕೆಎಸ್ಆರ್ಟಿಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿವಿಎಸ್ ಕಡೆಗೆ ಹೋಗಲು ಅವಕಾಶವಿಲ್ಲ.
• ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್, ಮಣ್ಣಗುಡ್ಡ ಜಂಕ್ಷನ್ ಮತ್ತು ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲ ತರಹದ ವಾಹನ ಸಂಚಾರ ನಿಷೇಧಿಸಲಾಗಿದೆ.
• ಕೆಎಸ್ಆರ್ಟಿಸಿಯಿಂದ ಲಾಲ್‌ಬಾಗ್ ಮುಖಾಂತರ ನಾರಾಯಣಗುರು ವೃತ್ತ ಕಡೆ ಹೋಗುವ ಹಾಗೂ ಬಂಟ್ಸ್ ಹಾಸ್ಟೆಲ್
• ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್ ಹೋಗುವ ಮತ್ತು ಎಂಜಿ ರೋಡ್
• ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗದ್ದೆಕೇರಿ ರೋಡ್, ವಿ.ಟಿ. ರೋಡ್,
• ಶಾರದಾ ವಿದ್ಯಾಲಯ ರಸ್ತೆಯಿಂದ ನವಭಾರತ ಸರ್ಕಲ್ ಕಡೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
• ಎಂಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ನಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ.
ಮಾರ್ಗ ಬದಲಾವಣೆ ಮಾಹಿತಿ:
• ಉಡುಪಿ ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ನಂತೂರು ಜಂಕ್ಷನ್ – ಸೆಂಟ್ ಆಗ್ನೇಸ್ – ಕಂಕನಾಡಿ ಮೂಲಕ ಸ್ಟೇಟ್‌ಬ್ಯಾಂಕ್ ಕಡೆಗೆ ಹೋಗಬೇಕು.
• ಸ್ಟೇಟ್‌ಬ್ಯಾಂಕ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ – ಕ್ಲಾಕ್ ಟವರ್ – ರೈಲ್ವೇ ಸ್ಟೇಷನ್ ಜಂಕ್ಷನ್ – ನಂದಿಗುಡ್ಡ ರೋಡ್ – ಕೋಟಿಚೆನ್ನಯ್ಯ ಸರ್ಕಲ್ – ಕಂಕನಾಡಿ ಜಂಕ್ಷನ್ ಮೂಲಕ ಹೋಗಬಹುದು.
• ಪಂಪುವೆಲ್ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ವಾಹನಗಳು ಕಂಕನಾಡಿ ಜಂಕ್ಷನ್- ಮಿಲಾಗ್ರಿಸ್ ಜಂಕ್ಷನ್ ಮೂಲಕ ಸ್ಟೇಟ್‌ಬ್ಯಾಂಕ್ ಕಡೆಗೆ ಹೋಗಬಹುದು.
• ಕಾರ್‌ಸ್ಟ್ರೀಟ್, ಕುದ್ರೋಳಿ ಕಡೆಯಿಂದ ಬರುವ ಎಲ್ಲ ವಾಹನಗಳು ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್ ಮುಖಾಂತರ ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ ಸಂಚರಿಸಬೇಕು.
• ಬಿಜೈ ಚರ್ಚ್ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಮುಖಾಂತರ ಕೊಟ್ಟಾರ ಕ್ರಾಸ್/ ಕುಂಟಿಕಾನದ ಕಡೆಗೆ ಹೋಗಬಹುದು.
• ಕುಂಟಿಕಾನ ಕೊಟ್ಟಾರ ಕ್ರಾಸ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ನ ಮುಖಾಂತರ ಬಿಜೈ ಚರ್ಚ್ ಕಡೆಗೆ ಹೋಗಬೇಕು.
ವಾಹನ ಪಾರ್ಕಿಂಗ್ ನಿಷೇಧ
• ಬಜ್ಪೆ ವಿಮಾನ ನಿಲ್ದಾಣದಿಂದ ಕೆಂಜಾರು, ಮರವೂರು, ಕಾವೂರು, ಬೊಂದೇಲ್, ಮೇರಿಹಿಲ್, ಕೆ.ಪಿ.ಟಿ, ಕೊಟ್ಟಾರ ಚೌಕಿ, ಉರ್ವ ಸ್ಟೋರ್ ಮತ್ತು ನಾರಾಯಣಗುರು ವೃತ್ತ (ಲೇಡಿಹಿಲ್) ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
• ರೋಡ್ ಶೋ ನಡೆಯುವ ಲೇಡಿಹಿಲ್ ಬಳಿ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
• ಹಂಪನಕಟ್ಟ, ಎಲ್.ಹೆಚ್.ಹೆಚ್, ಬಾವುಟಗುಡ್ಡ, ಬಂಟ್ಸ್ ಹಾಸ್ಟೆಲ್, ಕದ್ರಿ ಕಂಬಳದ ಎರಡು ಬದಿ, ಕಾವೂರು, ಪಂಜಿಮೊಗೆರು, ಕೊಟ್ಟಾರಚೌಕಿವರೆಗೆ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.
ವಾಹನ ಪಾರ್ಕಿಂಗ್ ಮಾಡುವ ಸ್ಥಳ:
ಕರಾವಳಿ ಮೈದಾನ, ಲೇಡಿಹಿಲ್ ಶಾಲಾ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಉರ್ವ ಸ್ಟೋರ್ ಮೈದಾನ, ಉರ್ವ ಕೆನರಾ ಶಾಲಾ ಮೈದಾನ, ಕೆನರಾ ಕಾಲೇಜು ಮೈದಾನ, ಡೊಂಗರಕೇರಿ ಕೆನರಾ ಶಾಲಾ ಮೈದಾನ. ಗಣಪತಿ ಶಾಲಾ ಮೈದಾನ, ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್, ಸಿ.ವಿ ನಾಯಕ್ ಹಾಲ್ ಮೈದಾನ, ಟಿ.ಎಂ.ಎ ಪೈ ಹಾಲ್ ಮೈದಾನ, ಬಿ.ಇ.ಎಂ ಶಾಲಾ ಮೈದಾನ, ನೆಹರೂ ಮೈದಾನ, ಪುರಭವನ ಆವರಣದಲ್ಲಿ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ.
ಕದ್ರಿ ಮೈದಾನ, ಕೆಪಿಟಿ ಕಾಲೇಜು ಮೈದಾನ, ಕೆಪಿಟಿ ಬಳಿಯ ಆರ್.ಟಿ.ಓ ಮೈದಾನ, ಪದುವಾ ಕಾಲೇಜು ಮೈದಾನ, ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು, ಸುಲ್ತಾನ್ ಬತ್ತೇರಿ ಗ್ರೌಂಡ್ಸ್, ಗೋಕರ್ಣಥೇಶ್ವರ ಕಾಲೇಜು ಗ್ರೌಂಡ್, ಎಮ್ಮೆಕರೆ ಮೈದಾನ, ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್ ಪಾರ್ಕಿಂಗ್ ಗ್ರೌಂಡ್, ಮಿಲಾಗ್ರಿಸ್ ಕಾಲೇಜು ಮೈದಾನ, ಬಲ್ಮಠ ಶಾಂತಿ ನಿಲಯದ ಮೈದಾನ, ಸೇಂಟ್ ಸೆಬಾಸ್ಟಿಯನ್ ಹಾಲ್ ಫಕಿಂಗ್ (ಸೆಂಟ್ ಅಗ್ನೇಸ್ ಶಾಲೆ) ಆವರಣದಲ್ಲಿ ವಾಹನ ಪಾರ್ಕ್ ಮಾಡಬಹುದು.
ಮಂಗಳೂರಲ್ಲಿ ಮೋದಿ ರೋಡ್ ಶೋ ಪ್ಲಾನ್:
• ಸಂಜೆ 7:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ.
• 7:45ಕ್ಕೆ ನಾರಾಯಣ ಗುರು ಸರ್ಕಲ್ ಗೆ ಮೋದಿ ಭೇಟಿ ನೀಡಲಿದ್ದಾರೆ.
• ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಆರಂಭವಾಗಲಿದೆ
• 1.5 ಕಿ.ಮೀ ದೂರದಲ್ಲಿರುವ ನವಭಾರತ ವೃತ್ತದಲ್ಲಿ ರೋಡ್ ಶೋ ಕೊನೆಯಾಗಲಿದೆ.
• ರಾತ್ರಿ 8.30 ರೊಳಗೆ ಪ್ರಧಾನಿಯವರ ರೋಡ್ ಶೋ ಮುಕ್ತಾಯವಾಗುವ ಸಾಧ್ಯತೆ ಇದ್ದು ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ಲಾಲ್ಬಾಗ್, ಬಳ್ಳಾಲ್ ಬಾಗ್, ಗೋವಿಂದ ಪೈ ಸರ್ಕಲ್(ನವ ಭಾರತ್ ಸರ್ಕಲ್)ವರೆಗೆ ರೋಡ್ ಶೋ ನಡೆಯಲಿದೆ.
• ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಆರು ಕಡೆ ಮಿನಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯಲ್ಲಿ ಹುಲಿ ಕುಣಿತ, ಭರತನಾಟ್ಯ, ಕಂಬಳ, ದೈವಾರಾಧನೆಗಳ ಪ್ರಾತ್ಯಕ್ಷಿಕೆ ಇರಲಿದೆ.
• ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ, ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಮುಂತಾದ ಗಣ್ಯರು ಮೋದಿಗೆ ಸಾಥ್ ನೀಡಲಿದ್ದಾರೆ.
• ರೋಡ್ ಶೋಗೆ ಭಾರೀ ಬಿಗಿಭದ್ರತೆ ಏರ್ಪಡಿಸಲಾಗಿದೆ. 1,500 ಮಂದಿ ಪೊಲೀಸರು, ಎಸ್ ಜಿಪಿ ತಂಡದ ಭದ್ರತೆಯನ್ನು ನೀಡಲಾಗಿದೆ.