For the best experience, open
https://m.hosakannada.com
on your mobile browser.
Advertisement

PM Modi: NEET ಅಕ್ರಮ ಬಗ್ಗೆ ಕೊನೆಗೂ ಮೌನ ಮುರಿದ ಮೋದಿ -ಸಂಸತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟ ಹೊಸ ಭರವಸೆ ಏನು ?!

PM Modi: ದೇಶಾದ್ಯಂತ ಭಾರೀ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪರೀಕ್ಷೆ(NEET Exam) ಅಕ್ರಮ ವಿಚಾರದ ಕುರಿತು ಪ್ರಧಾನಿ ಮೋದಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
08:06 AM Jul 03, 2024 IST | ಸುದರ್ಶನ್
UpdateAt: 08:06 AM Jul 03, 2024 IST
pm modi  neet ಅಕ್ರಮ ಬಗ್ಗೆ ಕೊನೆಗೂ ಮೌನ ಮುರಿದ ಮೋದಿ  ಸಂಸತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೊಟ್ಟ ಹೊಸ ಭರವಸೆ ಏನು

PM Modi: ದೇಶಾದ್ಯಂತ ಭಾರೀ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪರೀಕ್ಷೆ(NEET Exam) ಅಕ್ರಮ ವಿಚಾರದ ಕುರಿತು ಪ್ರಧಾನಿ ಮೋದಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಸಂಸತ್ತಿನಲ್ಲಿ ಈ ಕುರಿತು ಮೋದಿ ಪ್ರಸ್ತಾಪಿಸಿದ್ದಾರೆ. ಹಾಗಿದ್ರೆ ಪ್ರಧಾನಿ ಅವರು ವಿದ್ಯಾರ್ಥಿಗಳಿಗೆ ಹೇಳಿದ್ದೇನು ಗೊತ್ತಾ?

Advertisement

ಹೌದು, ನೀಟ್ ಅಕ್ರಮ ಬಗ್ಗೆ ಪ್ರಧಾನಿ ಮೋದಿ(MP Modi) ಪ್ರತಿಕ್ರಿಯಿಸಬೇಕು, ವಿದ್ಯಾರ್ಥಿಗಳಿಗೆ ಭರವಸೆ ನೀಡಬೆಕು, ಮೌನವಾಗಿರುವುದು ಸರಿಯಲ್ಲ ಎಂಬ ವಿಪಕ್ಷಗಳ ಟೀಕೆಗೆ, ಆಕ್ರೋಶಕ್ಕೆ ಕೊನೆಗೂ ಮಣಿದ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ(President Address) ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವಾಗ ನೀಟ್‌ ಅಕ್ರಮದ (NEET 2024) ಕುರಿತು ಕೂಡ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು 'ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್‌ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಗುಡುಗಿದ್ದಾರೆ.

Advertisement

Kolara: ರಾಜ್ಯದಲ್ಲೊಂದು ಶಾಕಿಂಗ್ ಪ್ರಕರಣ – ಕಾಲೇಜಲ್ಲೇ ಮಗುವಿಗೆ ಜನ್ಮ ನೀಡಿದ 1st ಪಿಯು ವಿದ್ಯಾರ್ಥಿನಿ !!

Advertisement
Advertisement
Advertisement