PM Awas Yojana: ಮನೆ ಇಲ್ಲದವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಮನೆ ಸೌಲಭ್ಯ; ಈ ರೀತಿ ಅರ್ಜಿ ಸಲ್ಲಿಸಿ
PM Avas Yojana: ಪ್ರತಿಯೊಬ್ಬನಿಗೂ ತನಗೊಂದು ಸ್ವಂತ ಮನೆ ಇರಬೇಕು ಎಂಬ ಕನಸು ಇದ್ದೇ ಇರುತ್ತೆ. ಸದ್ಯ ಇದೀಗ ಬಡವರ ಈ ಕನಸನ್ನು ನನಸು ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (pradhan mantri avas yojana) ಕೇಂದ್ರ ಸರ್ಕಾರದಿಂದ (central government) ಸಿಗಲಿದೆ ಉಚಿತ ಮನೆ. ಹೌದು, ಕೇಂದ್ರ ಸರ್ಕಾರವು ಮನೆಗಳ ಕೊರತೆಯುಳ್ಳ ಎಲ್ಲರಿಗೂ ಕೂಡ ಮನೆ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ದೇಶದಲ್ಲಿರುವ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವಂತಹ ಜನರಿಗಾಗಿ 2015 ರಲ್ಲಿ, ಕೇಂದ್ರ ಸರ್ಕಾರವು (central government) ವಸತಿರಹಿತರು ಮತ್ತು ಮನೆ ಕಟ್ಟುವವರಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ ಪ್ರಾರಂಭಿಸಿತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶವೆಂದರೆ ಎಲ್ಲಾ ಜನರು ಕೂಡ ತಮ್ಮ ವಾಸಕ್ಕಾಗಿ ಸ್ವಂತ ಮನೆಯನ್ನು ಹೊಂದುವುದು. ಮತ್ತು ಬಡತನ ರೇಖೆಗಿಂತ ಕೆಳಗಿನವರಿಗೆ ಮನೆಗಳನ್ನು ಒದಗಿಸುವುದಾಗಿದೆ.
ಹೌದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (pm avas yojana) 2024ರಲ್ಲಿಯೂ ಮನೆ ಇಲ್ಲದ ಅಥವಾ ಕಚ್ಚೆ ಮನೆಗಳಲ್ಲಿ ಸಮನೆ ಎದುರಿಸುತ್ತಿರುವವರಿಗೆ ಈ ಯೋಜನೆಯಿಂದ ಬಹಳ ಅನುಕೂಲವಾಗಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
ಸ್ವಂತ ಮನೆ ಕಟ್ಟಲು ಸಾಮರ್ಥ್ಯವಿಲ್ಲದವರು ಹಾಗೂ ಬಡತನ ರೇಖೆಗಿಂತ ಕೆಳಗಿನವರು. ಅರ್ಜಿ ಸಲ್ಲಿಸಲು ಅರ್ಜಿದಾರನು 18 ವರ್ಷಕ್ಕಿಂತ ಮೇಲಿನ ವಯಸ್ಸಿನವನಾಗಿರಬೇಕು. ಅರ್ಜಿದಾರರ ಹೆಸರು ಪಡಿತರ ಚೀಟಿಯಲ್ಲಿ ಅಥವಾ ಮತದಾರರ ಪಟ್ಟಿಯಲ್ಲಿ ಇರಬೇಕು. ಈಗ ವಾಸ ಮಾಡುತ್ತಿರುವ ಮನೆಯಲ್ಲಿ ಕೇವಲ 2 ಕೋಣೆಗಳಿದ್ದರೆ ಅಂತವರು ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ರೂ.ವರೆಗೆ ಇರಬೇಕು. ಕುಟುಂಬದಲ್ಲಿ ವಿಕಲಚೇತನ ಸದಸ್ಯರು ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬೈಟ್ https://pmaymis.gov.in ಭೇಟಿ ನೀಡಬೇಕು. ನಂತರ ಆವಾಸ್ಸಾಫ್ಟ್ ಕ್ಲಿಕ್ಮಾಡಿ ಅವಾಸ್ ಗಾಗಿ ಡೇಟಾ ಎಂಟ್ರಿ ಆಯ್ಕೆ ಮಾಡಿ. ಅಲ್ಲಿ ಅರ್ಜಿದಾರನು ಅವರ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಬೇಕು. ತದನಂತರ ನಿಮ್ಮ ಹೆಸರು, ಪಾಸ್‌ವರ್ಡ್, ಕ್ಯಾಪ್ಟಾ ಮುಂತಾದ ವಿವರಗಳನ್ನು ನಮೂದಿಸಿ ಲಾಗ್ ಇನ್ ಮಾಡಬೇಕು.ನಂ ತರ ಬಳಕೆದಾರರ ನೋಂದಣಿ ಫಾರ್ಮ್ ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಬ್ಯಾಂಕ್ ವಿವರ (bank details) ನಮೂದಿಸಬೇಕು. ನಂತರ ಮೂರನೇ ವಿಭಾಗದಲ್ಲಿ ಫಲಾನುಭವಿಯ ಸಮನ್ವಯ ವಿವರಗಳನ್ನು ನಮೂದಿಸಬೇಕು. ನಾಲ್ಕನೇ ವಿಭಾಗದಲ್ಲಿ ಸಂಬಂಧಪಟ್ಟ ಕಚೇರಿಯಿಂದ ಭರ್ತಿ ಮಾಡಿದ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿ.
Jharkhand : 3 ತಿಂಗಳ ಹಿಂದೆ ಕಾಣೆಯಾಗಿದ್ದ ಹುಡುಗಿ ಗುಹೆಯೊಳಗೆ ಹಾವಾಗಿ ಪತ್ತೆ !! ಏನಿದು ವಿಸ್ಮಯ?