Plants: ಮನೆಯ ಪಕ್ಕ ಹಾವು ಸುಳಿಯದೆ ಇರಲು ಇಲ್ಲಿದೆ ಪರಿಹಾರ!
Plants: ಮಳೆಗಾಲದಲ್ಲಿ ವಿವಿಧ ರೀತಿಯ ಅಪಾಯಕಾರಿ ಹಾವುಗಳು ಮನೆಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹಾವುಗಳು ಜೀವಕ್ಕೆ ಅಪಾಯಕಾರಿ ಆಗಿದೆ. ಹೀಗಿರುವಾಗ ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು (Plants) ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ.
ವರ್ಮ್ವುಡ್ ಸಸ್ಯ:
ನಿಮ್ಮ ಉದ್ಯಾನ, ಅಂಗಳ, ಬಾಲ್ಕನಿ ಅಥವಾ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ವರ್ಮ್ವುಡ್ ಗಿಡವನ್ನು ನೆಡಿ. ವರ್ಮ್ವುಡ್ ಒಂದು ವಿಶೇಷ ವಾಸನೆಯನ್ನು ಹೊಂದಿರುವ ಸಸ್ಯವಾಗಿದೆ. ಅದರ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ವಾಸನೆ ಬಂದ ತಕ್ಷಣ ಹಾವುಗಳು ಅಲ್ಲಿಂದ ಓಡಿ ಹೋಗುತ್ತದೆ.
ಕಳ್ಳಿ ಗಿಡ:
ಕಳ್ಳಿ ಒಂದು ಮುಳ್ಳಿನ ಗಿಡ. ಹಾವುಗಳು ಅಂತಹ ಸಸ್ಯಗಳ ಬಳಿ ಬರುವುದಿಲ್ಲ. ಅದಕ್ಕಾಗಿ ಮನೆಯ ಕಿಟಕಿಗಳು, ಮುಖ್ಯ ಗೇಟ್, ಬಾಲ್ಕನಿ ಮುಂತಾದ ಸ್ಥಳಗಳಲ್ಲಿ ಇದನ್ನು ಬೆಳೆಸಿ.
ಬೇವಿನ ಗಿಡ:
ಬೇವು ಹೊರಹೊಮ್ಮುವ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ಆದ್ದರಿಂದ ಅಂಗಳದಲ್ಲಿ ಅಥವಾ ನಿಮ್ಮ ಮನೆಯ ಹೊರಗೆ ಬೇವಿನ ಮರವಿದ್ದರೆ, ಹಾವುಗಳಿಂದ ಸುರಕ್ಷಿತವಾಗಿರಬಹುದು.
ಚೆಂಡುಹೂವಿನ ಗಿಡ:
ಚೆಂಡುಹೂವಿನ ಗಿಡವನ್ನು ಹಾವುಗಳಿಂದ ಸುರಕ್ಷಿತವಾಗಿರಬಹುದು. ಏಕೆಂದರೆ ಚೆಂಡುಹೂವಿನ ಬಲವಾದ ಪರಿಮಳವು ಹಾವುಗಳಿಗೆ ಇಷ್ಟವಾಗುವುದಿಲ್ಲ.