Physical contact: ಲೈಂಗಿಕ ಕ್ರಿಯೆಯನ್ನು ಇಷ್ಟು ನಿಮಿಷ ನಡೆಸಿದರೆ ಸಾಕು- ಇದೇ ಆರೋಗ್ಯಕ್ಕೆ ಒಳಿತು ಎನ್ನುತ್ತಾರೆ ಡಾಕ್ಟರ್ಸ್ !!
Physical contact: ದಾಂಪತ್ಯ ಜೀವನದಲ್ಲಿ ಲೈಂಗಿಕ ಜೀವನವು(Physical contact) ಕೂಡ ಪ್ರಮುಖವಾಗುತ್ತದೆ. ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಕೂಡ ಒಳ್ಳೆಯದು. ಹಾಗಂತ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗದ್ರೆ ಎಷ್ಟು ನಿಮಿಷ ಸಂಭೋಗ ನಡೆಸಿದರೆ ಒಳ್ಳೆಯದು? ಎಂದು ತಿಳಿಯೋಣ.
ಲೈಂಗಿಕ ಕ್ರಿಯೆಯು ಅವರವರ ಸಾಮರ್ಥ್ಯದ ಮೇಲೆ ನಿಂತಿರುತ್ತದೆ. ಆದರೆ ಕೆಲವರು ಇದನ್ನು ಒಂದು ಚಟವಾಗಿ ಮಾಡಿಕೊಂಡು ನಿರಂತರವಾಗಿ ಇದರಲ್ಲಿ ತೊಡಗಿಕೊಂಡಿರುತ್ತಾರೆ. ಇನ್ನು ಕೆಲವರು ಅಯ್ಯೋ ದೇವರೆ ನಾನು ಬೇಗ ಸುಸ್ತಾಗಿಬಿಡುತ್ತೀನಲ್ಲಾ ಎಂದು ನೊಂದುಕೊಳ್ಳುವವರೂ ಇದ್ದಾರೆ. ಹೀಗಾಗಿ ಪುರುಷರು ಲೈಂಗಿಕ ಕ್ರಿಯೆಯನ್ನು ಬೇಗನೇ ಮುಗಿಸಿಬಿಡುತ್ತಾರೆ ಎಂಬ ಅಪವಾದ ಕೂಡ ಇದೆ. ಆದರೆ ದೀರ್ಘಕಾಲದ ಸಂಭೋಗವು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಣಮ ಬೀರುತ್ತೆ. ಹಾಗಿದ್ರೆ ಸರಿಯಾಗಿ ಎಷ್ಟು ಸಮಯ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಲೈಂಗಿಕ ಆರೋಗ್ಯ ತಜ್ಞರು ನೀಡುವ ಮಾಹಿತಿಯ ಪ್ರಕಾರ, 7-15 ನಿಮಿಷದವರೆಗೆ ಲೈಂಗಿಕ ಕ್ರಿಯೆಯನ್ನು ನಡೆಸಬಹುದಾಗಿದೆ. ಸಂಶೋಧನೆಗಳ ಪ್ರಕಾರ, ಪುರುಷರು ಸಾಮಾನ್ಯವಾಗಿ 5-10 ನಿಮಿಷಗಳ ಲೈಂಗಿಕ ಕ್ರಿಯೆಯ ಬಳಿಕ ಸ್ಖಲನ ಮಾಡುತ್ತಾರೆ. ದಿ ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 7-13 ನಿಮಿಷಗಳ ಲೈಂಗಿಕ ಕ್ರಿಯೆಯು ಆರೋಗ್ಯಕರ ಎಂದು ತಿಳಿಯಬಹುದಾಗಿದೆ. ಅಂದಹಾಗೆ ಲೈಂಗಿಕ ಕ್ರಿಯೆ ಎಂದರೆ ಕೇವಲ ಸಂಭೋಗ ಕ್ರಿಯೆ ಮಾತ್ರವಲ್ಲ. ಇದು ಪ್ರಣಯವನ್ನೂ ಒಳಗೊಂಡಿರುತ್ತದೆ ಎಂಬುದು ಪ್ರತಿಯೊಬ್ಬರ ತಲೆಯಲ್ಲಿ ಇರಬೇಕು.