Belthangady: ಬೆಳ್ತಂಗಡಿಯಲ್ಲಿ 25 ಮೇಕೆಗಳಿಗೆ ವ್ಯಕ್ತಿಗಳ ಫೋಟೋ ಅಂಟಿಸಿ ತಲೆ ಕಡಿದು ವಿಕೃತಿ - ಜಾಗದ ವಿಚಾರಕ್ಕೆ ನಡೆಯಿತಾ ವಾಮಾಚಾರ ?!
Belthangady: ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ(Belthangady) ಹಲವಾರು ವಿಚಾರಗಳಿಂದ ಸುದ್ದಿಯಲ್ಲಿದೆ. ಅಂತೆಯೇ ಇದೀಗ ತಾಲ್ಲೂಕಿನ ಗರ್ಡಾಡಿ(Gardadi) ಗ್ರಾಮದ ಎಸ್ಟೇಟ್ವೊಂದರ ಗೇಟ್ ಬಳಿ 25 ಮೇಕೆಗಳ ತಲೆ ಕಡಿದು ಅವುಗಳ ತಲೆಯಲ್ಲಿ ತಾಲೂಕಿನ 25 ವ್ಯಕ್ತಿಗಳ ಫೋಟೋ ಇಟ್ಟ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
Darshan-Pavithra Gowda: ದರ್ಶನ್ ಗೆಳತಿ ಪವಿತ್ರಾ ಗೌಡ ಪೊಲೀಸ್ ವಶಕ್ಕೆ
ಎಸ್ಟೇಟ್ ಪ್ರವೇಶಿಸುವ ಗೇಟಿನ ಒಳಗೆ ಮೇಕೆಗಳ ತಲೆಯನ್ನು ಕಡಿಯಲಾಗಿದೆ. ಜಾಗದ ವಿಚಾರವಾಗಿ ಸದಾ ಗಲಾಟೆ ನಡೆಯುತ್ತಿದ್ದು, ಈ ಸಂಬಂಧ ವಾಮಾಚಾರ ಮಾಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯ ತನಿಖೆ ಶುರು ಮಾಡಿದ್ದಾರೆ.
ಏನಿದು ಪ್ರಕರಣ?
ಬೆಳ್ತಂಗಡಿ ತಾಲೂಕಿನ ಪಡಂಗಡಿ(Padangady) ಗ್ರಾಮದ ಬೋಳಿಯಾರ್ ಎಂಬಲ್ಲಿ 25 ಎಕರೆ ಜಾಗವನ್ನು ಕೇರಳ(Kerala) ಮೂಲದ ಗೋಪಾ ಕುಮಾರ್(Gopal Kumar) ಮತ್ತು ಸುಮೇಶ್ ಎಂಬವರು ಕಳೆದ ವರ್ಷ ಮಂಗಳೂರು ವೈಷ್ಣವಿ ಟ್ರಾನ್ಸ್ ಪೋರ್ಟ್(Viashanvi Transport) ಮಾಲೀಕ ರಾಜೇಶ್ ಪ್ರಭು(Rajesh Prabhu) ಎಂಬಾತ ಖರೀದಿ ಮಾಡಿಕೊಂಡು ದಾಖಲೆ ಪತ್ರ ವರ್ಗಾವಣೆ ಮಾಡಿಸಿ ಜಾಗದ 8 ಕೋಟಿ ರೂಪಾಯಿ ಹಣ ನೀಡದೆ ಮೋಸ ಮಾಡಿದ್ದ. ಈ ಬಗ್ಗೆ ಹಲವು ಸಮಯದವರೆಗೆ ಗಲಾಟೆ ನಡೆಯುತ್ತಿತ್ತು. ನಂತರ ಮಾರಾಟ ಮಾಡಿದ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ಸೇರಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಜಾಗವನ್ನು ಮೂರನೇ ವ್ಯಕ್ತಿಗೆ ರಾಜೇಶ್ ಪ್ರಭು ಮಾರಾಟ ಮಾಡಬಾರದು ಮತ್ತು ಹಿಂದಿನ ಮೂಲ ಜಾಗದ ಮಾಲೀಕರಾದ ಗೋಪಾ ಕುಮಾರ್ ಮತ್ತು ಸುಮೇಶ್ ವಶಕ್ಕೆ ಬೆಳ್ತಂಗಡಿ ಕೋರ್ಟ್ ನೀಡಿತ್ತು.
ಇದೀಗ ಜಾಗಕ್ಕೆ ಪ್ರವೇಶ ಮಾಡುವ ಗೇಟಿನ ಮುಂದೆ ಜೂ.9 ರಂದು ರಾತ್ರಿ 25 ಮೇಕೆಯ ತಲೆ ಕಡಿದು ಅದಕ್ಕೆ 25 ಮಂದಿಯ ಫೋಟೋಗಳನ್ನು ಇಟ್ಟು ಜಾಗ ಖರೀದಿ ಮಾಡಿ ಹಣ ಮೋಸ ಮಾಡಿದ್ದ ಮಂಗಳೂರಿನ ವೈಷ್ಣವಿ ಟ್ರಾನ್ಪೋರ್ಟ್ ಮಾಲೀಕನಾಗಿರುವ ಪ್ರಭಾವಿ ವ್ಯಕ್ತಿ ರಾಜೇಶ್ ಪ್ರಭು ಎಂಬಾತ ವಾಮಾಚಾರ ಮಾಡಿದ್ದಾನೆ ಎಂದು ಆರೋಪ ಕೇಳಿಬರುತ್ತಿದ್ದೆ.
ಮೇಕೆ ಮಾಲಿಕ ಕಣ್ಣೀರು :
ಇನ್ನು ಈ 25 ಮೇಕೆಗಳಲ್ಲಿ ಮೂರು ಮೇಕೆ ಸ್ಥಳೀಯರದ್ದಾಗಿವೆ. ಮೇಯೋದಕ್ಕೆ ಬಿಟ್ಟಿರುವ ಮೇಕೆಗಳನ್ನು ಕಳೆದ ಮೂರು ದಿನಗಳ ಹಿಂದೆ ಕದ್ದು ಇಲ್ಲಿ ವಾಮಾಚಾರಕ್ಕೆ ಬಳಸಿ ಅವುಗಳ ರುಂಡವನ್ನು ಕಡಿಯಲಾಗಿದೆ. ಮಕ್ಕಳ ಹಾಗೆ ಮೇಕೆಗಳನ್ನು ನೋಡಿಕೊಳ್ಳುತ್ತಿದ್ದೆವು ಎಂದು ಮೇಕೆಯನ್ನು ಸಾಕಿದ ಮಾಲೀಕರು ಮೇಕೆಗಳ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ.
KSRTC Tickets: ಕೆಎಸ್‌ಆರ್‌ಟಿಸಿ ಪ್ರತಿಯೊಬ್ಬ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್!