PGCIL Recruitment: ವಿದ್ಯುತ್ ಇಲಾಖೆಯಲ್ಲಿ ಉದ್ಯೋಗ ಅವಕಾಶ! 400 ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ!
PGCIL Recruitment: ಉದ್ಯೋಗ ಬಯಸುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ವಿದ್ಯುತ್ ಇಲಾಖೆ ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ (PGCIL Recruitment) 400 ಕ್ಕೂ ಅಧಿಕ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಸದ್ಯ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ಗೆ ಭೇಟಿಯನ್ನು ನೀಡುವ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಇಲಾಖೆ ಹೆಸರು: ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 435 ಹುದ್ದೆಗಳು
ಹುದ್ದೆಯ ಹೆಸರು: ಇಂಜಿನಿಯರ್ ಟ್ರೈನಿ
ಉದ್ಯೋಗ ಸ್ಥಳ: ಭಾರತದಲ್ಲಿ
ಹುದ್ದೆಗಳ ವಿವರ:
• ವಿದ್ಯುತ್: 331 ಹುದ್ದೆಗಳು
• ಸಿವಿಲ್: 53 ಹುದ್ದೆಗಳು
• ಗಣಕ ಯಂತ್ರ ವಿಜ್ಞಾನ: 37 ಹುದ್ದೆಗಳು
• ಎಲೆಕ್ಟ್ರಾನಿಕ್ಸ್: 14 ಹುದ್ದೆಗಳು
ವೇತನ ಮಾಹಿತಿ:
ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 40000 – 1,60,000/- ಸಂಬಳವನ್ನು ನೀಡಲಾಗುವುದು.
ವಯೋಮಿತಿ ಮಾಹಿತಿ:
ಅಭ್ಯರ್ಥಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆಯ ಮಾಹಿತಿ:
• OBC ಅಭ್ಯರ್ಥಿಗಳಿಗೆ: 3 ವರ್ಷಗಳು
• SC ಮತ್ತು ST ಅಭ್ಯರ್ಥಿಗಳಿಗೆ: 5 ವರ್ಷಗಳು
• PWBD ಅಭ್ಯರ್ಥಿಗಳಿಗೆ: 10 ವರ್ಷಗಳ ಕಾಲ ವಯೋಮಿತಿ ಸಡಿಲಿಕೆಯನ್ನು ನಿಡುತ್ತದೆ.
ಶೈಕ್ಷಣಿಕ ಅರ್ಹತೆ ಮಾಹಿತಿ:
PGCIL ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು B.Sc BE/ B.Tech ಮುಗಿಸಿರಬೇಕು.
ಅರ್ಜಿ ಶುಲ್ಕದ ಮಾಹಿತಿ:
• ಎಲ್ಲಾ ಇತರ ಅಭ್ಯರ್ಥಿಗಳಿಗೆ: 500/- ರೂ
• SC/ST/PwBD/ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
• ಪಾವತಿಸುವ ವಿಧಾನ: ಆನ್ಲೈನ್ ನಲ್ಲಿ ಇರುತ್ತದೆ.
ಹುದ್ದೆಯ ಪ್ರಮುಖ ಅರ್ಜಿಯನ್ನು ಸಲ್ಲಿಸುವ ಲಿಂಕ್: https://careers.powergrid.in/recruitment-nextgen/h/login.aspx
ಆಯ್ಕೆ ವಿಧಾನದ ಮಾಹಿತಿ:
GATE 2024 ಸ್ಕೋರ್ ಆಧಾರದಲ್ಲಿ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆಯ ಪ್ರಮುಖ ದಿನಾಂಕಗಳು:
• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12/06/2024
• ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/07/2024.