For the best experience, open
https://m.hosakannada.com
on your mobile browser.
Advertisement

Petrol-Diesel : GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ?! ನಿರ್ಮಲ ಸೀತಾರಾಮ್ ಮಹತ್ವದ ಹೇಳಿಕೆ !!

Petrol-Diesel ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂಧನಗಳನ್ನು GST ವ್ಯಾಪ್ತಿಗೆ ತರುವ ಬಗ್ಗೆ ಇರುವ ನಿಲುವುಗಳೇನು ಎಂಬುದನ್ನು ಅವರು ತಿಳಿಸಿದ್ದಾರೆ.
08:56 AM Jun 23, 2024 IST | ಸುದರ್ಶನ್
UpdateAt: 08:56 AM Jun 23, 2024 IST
petrol diesel   gst ವ್ಯಾಪ್ತಿಗೆ ಪೆಟ್ರೋಲ್  ಡೀಸೆಲ್    ನಿರ್ಮಲ ಸೀತಾರಾಮ್ ಮಹತ್ವದ ಹೇಳಿಕೆ
Advertisement

Petrol-Diesel ಬೆಲೆ ಹೆಚ್ಚಾದಂತಹ ಸಂದರ್ಭದಲ್ಲೆಲ್ಲಾ ಇವುಗಳನ್ನು GST ವ್ಯಾಪ್ತಿಗೆ ತರುವ ಚರ್ಚೆ ಶುರುವಾಗುತ್ತದೆ. ಮತ್ತದು ಅಲ್ಲಿಗೇ ಅಂತ್ಯವಾಗಿಬಿಡುತ್ತದೆ. ಅಂತೆಯೇ ಇದೀಗ ದೇಶದಲ್ಲಿ ಹೊರ ಸರ್ಕಾರ ರಚನೆಯಾಗಿದ್ದು, ಬಜೆಟ್ ಮಂಡನೆ ಕೂಡ ನಡೆಯಬೇಕಿದೆ. ಹೀಗಾಗಿ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು GST ವ್ಯಾಪ್ತಿಗೆ ಸೇರಿಸುವ ವಿಚಾರ ಮುನ್ನಲೆಗೆ ಬಂದಿದೆ. ಕೇಂದ್ರ ಹಣಕಾಸು ಸಚಿವರು ಹಾಗೂ ಇಂಧನ ಸಚಿವರು ಈ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

Advertisement

ಹೌದು, ಕೆಲವು ದಿನಗಳ ಹಿಂದೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ(Hardeep Singh Puri) ಅವರು ಪೆಟ್ರೋಲ್‌, ಡೀಸೆಲ್‌ ಮತ್ತು ನೈಸರ್ಗಿಕ ಅನಿಲಗಳನ್ನು ಜಿಎಸ್‌ಟಿ(GST) ವ್ಯಾಪ್ತಿಗೆ ತರಲು ಪ್ರಯತ್ನಿಸುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಜಿಎಸ್‌ಟಿ ಕೌನ್ಸಿಲ್ ಸಭೆ (GST Council Meeting) ಕೂಡ ನಡೆದಿದ್ದು, ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಾಹಿತಿ ನೀಡಿದ್ದಾರೆ. ಈ ವೇಳೆ ಇಂಧನಗಳನ್ನು GST ವ್ಯಾಪ್ತಿಗೆ ತರುವ ಬಗ್ಗೆ ಇರುವ ನಿಲುವುಗಳೇನು ಎಂಬುದನ್ನೂ ಅವರು ತಿಳಿಸಿದ್ದಾರೆ.

ತಿರುಪತಿಯಲ್ಲಿ ಚಂದ್ರಬಾಬು ನಾಯ್ಡು ಹವಾ ಶುರು!ತಿರುಮಲ ಭಕ್ತರಿಗೆ ಹಲವು ಗುಡ್​ ನ್ಯೂಸ್ ಕೊಟ್ಟ ​TTD!

Advertisement

ನಿರ್ಮಲ ಸೀತಾರಾಮ್ ಹೇಳಿದ್ದೇನು?
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯೊಳಗೆ ಸೇರಿಸಲು ಕೇಂದ್ರ ಸರ್ಕಾರ ಬಯಸಿದೆ. ಇದಕ್ಕೆ ನಮ್ಮ ಒಪ್ಪಿಗೆಯೂ ಇದೆ. ಆದರೆ, ಅದನ್ನು ನಿರ್ಧರಿಸುವುದು ರಾಜ್ಯಗಳಿಗೆ ಬಿಟ್ಟಿದ್ದು. ಪೆಟ್ರೋಲ್ ಮತ್ತು ಡೀಸೆಲ್‌ಗೆ ಇನ್ನೂ ತೆರಿಗೆ ವಿಧಿಸಲಾಗಿಲ್ಲ. ಅದರ ಬದಲಾಗಿ, ನೈಸರ್ಗಿಕ ಅನಿಲ, ಎಟಿಎಫ್ ಜೊತೆಗೆ ಈ ಇಂಧನಗಳು ವ್ಯಾಟ್, ಕೇಂದ್ರ ಅಬಕಾರಿ ಸುಂಕ, ಕೇಂದ್ರ ಮಾರಾಟ ತೆರಿಗೆಗೆ ಒಳಪಟ್ಟಿರುತ್ತವೆ ಎಂದಿದ್ದಾರೆ.

ಇಂಧನ ಸಚಿವರು ಹೇಳಿದ್ದೇನು?
2020ರಲ್ಲೇ ಈ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಪೆಟ್ರೋಲ್‌, ಡೀಸೆಲ್‌ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತದೆ. ಸದ್ಯ ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾದರೆ ಮಾತ್ರ ನಾವು ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ಕ್ರಮ ತೆಗೆದುಕೊಳ್ಳಬಹುದು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಅವಕಾಶ! ಕೂಡಲೇ ಅರ್ಜಿ ಸಲ್ಲಿಸಿ!

Advertisement
Advertisement
Advertisement