ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

NEET UG 2024: ನೀಟ್ ಪರೀಕ್ಷೆಯನ್ನು ಮರು ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ

NEET UG 2024: 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಮತ್ತೆ ಸುಪ್ರೀಂ ಕೋರ್ಟ್ ಸಹಾಯಕ್ಕೆ ಹೋಗಿದ್ದಾರೆ.
07:29 AM Jun 04, 2024 IST | ಸುದರ್ಶನ್
UpdateAt: 07:31 AM Jun 04, 2024 IST
Advertisement

NEET UG 2024: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಅಕ್ರಮ ನಡೆದಿದೆ ಎಂಬ ದೂರುಗಳ ಬೆನ್ನಲ್ಲೇ, 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಮತ್ತೆ ಸುಪ್ರೀಂ ಕೋರ್ಟ್ ಸಹಾಯಕ್ಕೆ ಹೋಗಿದ್ದಾರೆ.

Advertisement

ಈ ಸಂಬಂಧ ಶಿವಾಂಗಿ ಮಿಶ್ರಾ ಮತ್ತು ಇತರರು ಜೂನ್ 1 ರಂದು ಸುಪ್ರೀಂಕೋರ್ಟ್‌ ಅನ್ನು ಸಂಪರ್ಕಿಸಿದ್ದು, ಈ ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅನ್ನು ಪ್ರತಿವಾದಿಯನ್ನಾಗಿಸಿದ್ದಾರೆ. ಅಲ್ಲದೆ, ಪ್ರಶ್ನೆಪತ್ರಿಕೆಯ ಸೋರಿಕೆ ಹಾಗೂ ಪರೀಕ್ಷೆಯ ಮಾನ್ಯತೆಯನ್ನೂ ಪ್ರಶ್ನಿಸಿದ್ದಾರೆ. ಸುಪ್ರೀಕೋರ್ಟಿನ ರಜಾಕಾಲದ ಪೀಠವು ಈ ವಾರವೇ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ದೇಶದಾದ್ಯಂತ 2024ನೇ ಸಾಲಿನ ನೀಟ್ ಪರೀಕ್ಷೆಯು ಕಳೆದ ತಿಂಗಳ 5ರಂದು ನಡೆದಿತ್ತು. ದೇಶದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಹಾಗೂ ಇತರೆ ಕೋರ್ಸ್‌ಗಳ ಪ್ರವೇಶಾತಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಯು ನಡೆಸುವ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವ್ಯಾಪಕ ಸೋರಿಕೆ ಕಂಡುಬಂದಿತ್ತು. ನೀಟ್ ಪರೀಕ್ಷೆಯ ರಿಸಲ್ಟ್ ಜೂನ್ 14ರಂದು ಪ್ರಕಟವಾಗುವುದು ಎಂದು ನಿರ್ಧಾರವಾಗಿದೆ. ಇದರ ಮಧ್ಯೆ ನೊಂದ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಮೆಟ್ಟಲು ಹತ್ತಿದ್ದಾರೆ.

Advertisement

Advertisement
Advertisement