ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Personality Test: ಮೊಬೈಲ್​ ಸ್ಕ್ರೀನ್​ ಲಾಕ್ ಸೀಕ್ರೆಟ್ ಒಂದು ಇಲ್ಲಿದೆ! ಏನದು ಗೊತ್ತಾ?

Personality Test: ಲಾಕ್ ಇರದ ಸ್ಮಾರ್ಟ್ ಫೋನ್ ಇಲ್ಲ ಅನ್ನೋದು ಗೊತ್ತೇ ಇದೆ. ಆದ್ರೆ ಈ ಲಾಕ್ ಕೇವಲ ನಿಮ್ಮ ಗೌಪ್ಯತೆಯನ್ನು, ವೈಯಕ್ತಿಕ ಮಾಹಿತಿಯನ್ನು ಇತರರ ಕೈಗೆ ಸಿಗದಂತೆ ಮಾಡಲು ಮಾತ್ರ ಇದರ ಉಪಯೋಗ ಅಲ್ಲ.
03:10 PM Jul 19, 2024 IST | ಕಾವ್ಯ ವಾಣಿ
UpdateAt: 03:10 PM Jul 19, 2024 IST
Advertisement

Personality Test: ಲಾಕ್ ಇರದ ಸ್ಮಾರ್ಟ್ ಫೋನ್ ಇಲ್ಲ ಅನ್ನೋದು ಗೊತ್ತೇ ಇದೆ. ಆದ್ರೆ ಈ ಲಾಕ್ ಕೇವಲ ನಿಮ್ಮ ಗೌಪ್ಯತೆಯನ್ನು, ವೈಯಕ್ತಿಕ ಮಾಹಿತಿಯನ್ನು ಇತರರ ಕೈಗೆ ಸಿಗದಂತೆ ಮಾಡಲು ಮಾತ್ರ ಇದರ ಉಪಯೋಗ ಅಲ್ಲ. ಹೌದು, ಅನೇಕ ಮಂದಿ ಫಿಂಗರ್ಪ್ರಿಂಟ್ಗಳು, ಪ್ಯಾಟರ್ನ್ಗಳು ಮತ್ತು ಪಿನ್ಗಳಂತಹ ವಿವಿಧ ರೀತಿಯ ಲಾಕ್ಗಳನ್ನು ಬಳಸುತ್ತಾರೆ. ಈ ಫೋನ್ ಅನ್ನು ಲಾಕ್ ಮಾಡುವ ವಿಧಾನವು ನಿಮ್ಮ ವ್ಯಕ್ತಿತ್ವವನ್ನು (Personality Test) ಬಹಿರಂಗಪಡಿಸುತ್ತದೆ ಎನ್ನಲಾಗಿದೆ. ಹೌದು, ನಿಮ್ಮ ಫೋನ್ ಅನ್ನು ಲಾಕ್ ಮಾಡುವ ವಿಧಾನವು ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ ಎಂದು ಸೈಬರ್ ಸೈಕಾಲಜಿ ತಜ್ಞರು ಹೇಳುತ್ತಾರೆ. ಇದರ ಪೂರ್ಣ ಮಾಹಿತಿ ಇಲ್ಲಿದೆ.

Advertisement

ಫಿಂಗರ್ಪ್ರಿಂಟ್ ಲಾಕ್ :

ಸಾಕಷ್ಟು ಮಂದಿ ಹೆಚ್ಚಾಗಿ ಫೋನ್ನಲ್ಲಿ ಫಿಂಗರ್ಪ್ರಿಂಟ್ ಲಾಕ್ ಬಳಸುತ್ತಾರೆ. ಅಂತಹವರು ತಮ್ಮ ವಿಶೇಷ ವಿಚಾರ ಮತ್ತು ಸ್ವಂತ ವಿಚಾರಗಳು ಇತರರಿಗೆ ತಿಳಿಯಬಾರದು ಎಂಬ ಉದ್ದೇಶದಿಂದ ಫಿಂಗರ್ ಪ್ರಿಂಟ್ಗಳನ್ನು ಇಡುತ್ತಾರೆ. ಇವರು ಹೊಸ ವಿಷಯಗಳಿಗೆ ಸುಲಭವಾಗಿ ಒಗ್ಗಿಕೊಳ್ಳುತ್ತಾರೆ. ಅವಕಾಶಗಳು ಮತ್ತು ಸವಾಲುಗಳಿಗಾಗಿ ಕುತೂಹಲದಿಂದ ಕಾಯುತ್ತಾರೆ. ಅವರು ತಮ್ಮದೇ ಆದ ಸಾಮರ್ಥ್ಯಗಳ ಮೇಲೆ ಹೆಚ್ಚು ವಿಶ್ವಾಸ ಹೊಂದಿರುತ್ತಾರೆ. ಈ ಜನರು ಧೈರ್ಯ ಮತ್ತು ಮುಕ್ತ ಮನಸ್ಸಿನಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವರು ಅತ್ಯುತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.

Advertisement

ಪ್ಯಾಟರ್ನ್ ಲಾಕ್:

ಇವರು ತಮ್ಮ ಪ್ರತ್ಯೇಕತೆಯನ್ನು ಹೆಚ್ಚು ಗೌರವಿಸುತ್ತಾರೆ. ಇವರು ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತಾರೆ. ಅವರು ತಮ್ಮದೇ ಆದ ಆದ್ಯತೆಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಕಲಾವಿದರು, ವಿನ್ಯಾಸಕರು, ಬರಹಗಾರರು, ಸಂಗೀತಗಾರರಂತಹ ಸೃಜನಶೀಲ ಮಂದಿ ಈ ಮಾದರಿಯ ಲಾಕ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಇನ್ನು ವ್ಯಾಪಾರಿಗಳು ಸಾಮಾನ್ಯವಾಗಿ ಪ್ಯಾಟರ್ನ್ ಲಾಕ್ ಅನ್ನು ಬಳಸುತ್ತಾರೆ. ಒಂದು ರೀತಿ ಹೊಸದಾಗಿ ಯೋಚಿಸುತ್ತಾರೆ. ಹೆಚ್ಚು ಜ್ಞಾನವುಳ್ಳ ವ್ಯಾಪಾರಿಗಳನ್ನು ತಂತ್ರಜ್ಞಾನದಲ್ಲಿ ಹೊಸದನ್ನು ಟ್ರೈ ಮಾಡಲು ಬಯಸುತ್ತಾರೆ.

ಪಿನ್ ಲಾಕ್:

ಈ ವಿಧಾನವನ್ನು ಅನುಸರಿಸುವವರು  ಸ್ಥಿರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಪಿನ್ ಲಾಕ್ ಇಡುವವರು ಸಣ್ಣ ವಿಚಾರಗಳ ಬಗ್ಗೆಯೂ ಬಹಳ ಜಾಗರೂಕರಾಗಿರುತ್ತಾರೆ. ಯಾವುದೇ ಕೆಲಸವನ್ನಾದರೂ ಬಹಳ ಎಚ್ಚರಿಕೆಯಿಂದ ಪೂರ್ಣಗೊಳಿಸುವುದರಲ್ಲಿ ಜಾಣರು. ಪಿನ್ ಲಾಕ್ ಅನ್ನು ಹೆಚ್ಚಾಗಿ ಎಂಜಿನಿಯರ್ಗಳು, ಸಂಶೋಧಕರು ಮುಂತಾದವರು ಬಳಸುತ್ತಾರೆ. ಜೊತೆಗೆ ಒಗಟುಗಳು, ಸುಡೊಕು ಮತ್ತು ಇತರ ಸವಾಲಿನ ಆಟಗಳನ್ನು ಆಡುವಂತಹವರು ಫೋನ್ಗಳಲ್ಲಿ ಪಿನ್ ಲಾಕ್ ಬಳಸಲು ಇಷ್ಟಪಡುತ್ತಾರೆ. ಪಿನ್ ಲಾಕ್ ಬಳಕೆದಾರರು ಫೋನ್ ಸುರಕ್ಷತೆಯ ವಿಷಯದಲ್ಲಿ ಮಾತ್ರವಲ್ಲದೇ ದೈನಂದಿನ ಜೀವನದಲ್ಲಿಯೂ ಜಾಗರೂಕರಾಗಿರಲು ಬಯಸುತ್ತಾರೆ.

 

Related News

Advertisement
Advertisement