Ayodhya: ಬಿಜೆಪಿ ಸೋಲಿಸಿದಕ್ಕೆ ಮುಸ್ಲಿಂ ವೇಷ ಹಾಕಿ ಅಯೋಧ್ಯೆ ಹಿಂದೂಗಳನ್ನು ಟೀಕಿಸಿದ್ದ ವ್ಯಕ್ತಿ ಅರೆಸ್ಟ್ !!
Ayodhya: ಲೋಕಸಭಾ ಚುನಾವಣೆಯಲ್ಲಿ(Parliament Election) ಬಿಜೆಪಿ(BJP) ಭಾರೀ ಮುಖಬಂಗವಾಗಿದೆ. ಅದೂ ಕೂಡ ದೇಶಾದ್ಯಂತ ಸದ್ದು ಮಾಡಿದ್ದು ಅಯೋಧ್ಯೆಯ(Ayodhya) ರಾಮ ಜನ್ಮ ಭೂಮಿಯಲ್ಲಿ ಬಿಜೆಪಿಗಾದ ಸೋಲು. ಭವ್ಯ ಮಂದಿರ ನಿರ್ಮಿಸಿದರೂ, ಹಿಂದೂ, ಹಿಂದುತ್ವಕ್ಕೆ ಒತ್ತು ನೀಡಿದರೂ ಅಲ್ಲಿನ ಜನ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಗರ್ವಭಂಗ ಮಾಡಿದ್ದಾರೆ.
Shivrajkumar: ಯುವರಾಜ್‌ಕುಮಾರ್ ಡಿವೋರ್ಸ್ ಬಗ್ಗೆ ನಟ ಶಿವಣ್ಣ ಹೇಳಿದ್ದಿಷ್ಟು !!
ಈ ಕುರಿತು ಕೆಲ ದಿನಗಳ ಹಿಂದೆ ಮುಸ್ಲಿಂ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಬಿಜೆಪಿ ಸೋಸಿಸಿದ್ದಕ್ಕೆ ಅಯೋಧ್ಯೆಯ ಹಿಂದೂಗಳ(Ayodhya Hindhus) ವಿರುದ್ಧ ಕಿಡಿಕಾರಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಜನರು ಶೇರ್ ಮಾಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಿಜವಾದ ಮಾತು ಎಂದೆಲ್ಲಾ ಕೊಂಡಾಡಿದ್ದರು. ಆದರೀಗ ಈ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಡಿಯೋದಲ್ಲಿರುವಾತ ಮುಸ್ಲಿಂ ವ್ಯಕ್ತಿಯೇ ಅಲ್ಲ, ಆತ ನಿಜವಾಗಿಯೂ ಹಿಂದೂ ಧರ್ಮದ ಧೀರೇಂದ್ರ ರಾಘವನ್ ಎಂದು ತಿಳಿದು ಬಂದಿದೆ. ಸದ್ಯ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಹೌದು, ತನ್ನನ್ನು ಮುಸ್ಲಿಂ ಎಂದು ಬಿಂಬಿಸಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಧೀರೇಂದ್ರ ರಾಘವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಮನನೊಂದು, ತಮ್ಮ ಆಕ್ರೋಶ ವ್ಯಕ್ತಪಡಿಸಲು ಬೇರೆ ದಾರಿ ಕಾಣದೆ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಂಧಿಸಿರುವ ಪೋಲೀಸರು 'ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರ ವೇಷ ಹಾಕಿ ಈ ವಿಡಿಯೋ ತಯಾರಿಸಿದ್ದೆಂದು' ಹೇಳಲಾಗಿದೆ.
ವಿಡಿಯೋದಲ್ಲಿ ಧೀರೇಂದ್ರ ರಾಘವ್ ಹೇಳಿದ್ದೇನು?
ವಿಡಿಯೋದಲ್ಲಿ ಕಾರಿನಲ್ಲಿ ಕುಳಿತಿರುವಂತೆ ತೋರುವ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಾ ಹಿಂದೂಗಳನ್ನು ಅಪಹಾಸ್ಯ ಮಾಡಿದ್ದಾರೆ. ಅಯೋಧ್ಯೆಯ ಹಿಂದೂಗಳನ್ನು ಎರಡು ಮುಖದವರು ಎಂದು ಹೀಯಾಳಿಸಿದ್ದಾರೆ. 'ರಾಹುಲ್‍ಗಾಂಧಿ ಅಧಿಕಾರಕ್ಕೆ ಬಂದಿದ್ದರೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದರು. ಒಬ್ಬ ನಾಯಕ ನಮಗೆ ಮಸೀದಿ ನಿರ್ಮಿಸಿದರೆ, ನಾವು ನಮ್ಮ ಜೀವನವಿಡೀ ಆತನಿಗೆ ಮತ ಹಾಕುತ್ತೇವೆ. ಆದರೆ ನಿಮಗೆ ಎಲ್ಲವನ್ನೂ ಮಾಡಿದ್ದರೂ ನೀವು ಮೋದಿಗೆ ಮತ ಹಾಕುವುದಿಲ್ಲ ಎಂದಿದ್ದಾರೆ. ಅವರು ವಿಡಿಯೋದ ಉದ್ದಕ್ಕೂ ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ಕೇಳಬಹುದು.
Delhi: ಮೋದಿ ಪ್ರಮಾಣವಚನ ವೇಳೆ ಹಿಂಬದಿಯಲ್ಲಿ ನಿಗೂಢ ಪ್ರಾಣಿಯ ಸಂಚಾರ - ವಿಡಿಯೋ ವೈರಲ್ !!
ಅಲ್ಲದೆ ವಿಡಿಯೋದಲ್ಲಿ ಈ ಕೆಳಗಿನ ಪಠ್ಯವನ್ನು ಹಿಂದಿಯಲ್ಲಿ ಬರೆಯಲಾಗಿದೆ ಮತ್ತು ಅದರ ಅನುವಾದ “ಮುಂದಿನ ಸರ್ಕಾರವು ನಮ್ಮ ದೇವಸ್ಥಾನದ ಬದಲಿಗೆ ಮಸೀದಿಯನ್ನು ನಿರ್ಮಿಸುತ್ತದೆ.” ಈ ವಿಡಿಯೋವನ್ನು “ಮುಸ್ಲಿಮರಿಂದ ಹಿಂದೂಗಳಿಗೆ ಸಂದೇಶ” ಎಂದು ಹಂಚಿಕೊಳ್ಳಲಾಗುತ್ತಿದೆ.