ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

POK: ಪಾಕಿಸ್ತಾನಿ ಸೇನೆಯ ವಿರುದ್ಧ ತಿರುಗಿಬಿದ್ದ ಆಕ್ರಮಿತ ಕಾಶ್ಮೀರದ ಜನ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಸಲಿಗೆ ಏನಾಗುತ್ತಿದೆ?

POK: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK)ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದ್ದು, ಇದರಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗುತ್ತಿದ್ದಾರೆ.
06:08 PM May 14, 2024 IST | ಸುದರ್ಶನ್
UpdateAt: 08:27 PM May 14, 2024 IST
Advertisement

POK: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(POK) ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಿದ್ದು, ಇದರಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗುತ್ತಿದ್ದಾರೆ. ಇದೀಗ ಪ್ರತಿಭಟನಾಕಾರರು ಉದ್ವಿಗ್ನಗೊಂಡು ಪೊಲೀಸರನ್ನು ಗುಂಪುಗೂಡಿಸಿ ಹತ್ಯೆಗೈದಿದ್ದಾರೆ.

Advertisement

ಇದನ್ನೂ ಓದಿ: Stomach Pain: ಹೊಟ್ಟೆ ನೋವು ಅಂತ ನರಳಬೇಡಿ, ಈ ಸೂಪರ್ ಫುಡ್ ಗಳನ್ನು ಟ್ರೈ ಮಾಡಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅವಾಮಿ ಕ್ರಿಯಾ ಸಮಿತಿಯ ಎನ್ನುವ ಸಂಘಟನೆಯು ನಿರಂತರ ಆಂದೋಲನಗಳನ್ನು ನಡೆಸುತ್ತಿದ್ದು ಅವು ಇದೀಗ ಹಿಂಸಾಚಾರಕ್ಕೆ ತಿರುಗಿವೆ. ಸೋಮವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಪ್ರತಿಭಟನಾಕಾರರ ಮೇಲೆ ಸೇನೆ ಗುಂಡಿನ ದಾಳಿ(Pakistan military) ನಡೆಸಿದೆ. ಈ ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಇದನ್ನೂ ಓದಿ: Belthangady: ಆಸ್ಪತ್ರೆಯಿಂದ ಬಂದ ಪರಿಚಯಸ್ತನಿಗೆ ಪ್ರೀತಿಯಿಂದ ಹೊಡೆದ ವೈದ್ಯಾಧಿಕಾರಿ - ಸ್ಥಳದಲ್ಲೇ ಸಾವನಪ್ಪಿದ ವ್ಯಕ್ತಿ !!

ಈ ಹಿಂದೆ ಶನಿವಾರ ನಡೆದ ಗಲಭೆಯಲ್ಲಿ ಪೊಲೀಸ್(police officer) ಅಧಿಕಾರಿ ಸೇರಿದಂತೆ ಹಲವು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಸದ್ಯ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟುಗಳು ಸಂಪೂರ್ಣ ಬಂದ್ ಆಗಿವೆ.

ಶನಿವಾರ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಒಂದು ಹಂತದಲ್ಲಿ ಎಕೆ 47 (AK-47gun)ಗಳಿಂದ ಗುಂಡು ಹಾರಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದ ಸರ್ಕಾರ(Pakistan government)ಕೋಟಿ ಗಟ್ಟಲೆ ಪಾಕಿಸ್ತಾನಿ ರೂಪಾಯಿ ಬಿಡುಗಡೆ ಮಾಡಿದ್ದರೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಜನ ದಂಗೆ ಏಳಲು ಇವೇ ಕಾರಣ :

ಜನ ಇಷ್ಟರಮಟ್ಟಿಗೆ ದಂಗೆ ಹೇಳಲು ಕಾರಣ ಏನೆಂದರೆ ಸ್ಥಳೀಯ ಅಣೆಕಟ್ಟಿನಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಉಚಿತವಾಗಿ ನೀಡಬೇಕು, ಇದಲ್ಲದೆ ಅವರು ಗೋಧಿಯ ಮೇಲೆ ಸಬ್ಸಿಡಿಗಳನ್ನು ನೀಡಬೇಕು, ಇಷ್ಟು ಮಾತ್ರವಲ್ಲದೆ ಇತ್ತೀಚೆಗೆ ಈ ಪ್ರದೇಶದಲ್ಲಿ ಹಣದುಬ್ಬರ ತೀವ್ರ ಮಟ್ಟವನ್ನು ತಲುಪಿದ್ದು, ಬೆಲೆಗಳು ಗಗನಕ್ಕೇರಿವೆ. ಪರಿಣಾಮವಾಗಿ, ಸ್ಥಳೀಯ ಆಡಳಿತದ ವಿರುದ್ಧ ಜನರು ಬಂಡಾಯವೆದ್ದಿದ್ದಾರೆ.

ಇದನ್ನು ತಡೆಯಲು ಸರ್ಕಾರ ಸೆಕ್ಷನ್ 144(section 144) ಜಾರಿಗೊಳಿಸಿದೆ ಇತ್ತೀಚೆಗೆ INK ಯ ಕಾರ್ಯಕರ್ತ ಅಂಜದ್ ಅಯೂಬ್ ಮಿರ್ಜಾ ಅವರು ನಿರಾಯುದರ ಜನರ ಮೇಲೆ ಪಡೆಗಳು ಗುಂಡು ಹಾರಿಸುತ್ತಿದ್ದಾರೆ ಇದರ ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತ(India) ದೇಶ ಈ ಕುರಿತು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದಾರೆ. ಪ್ರಸ್ತುತ ಇಲ್ಲಿನ ಪರಿಸ್ಥಿತಿ ಕೈ ಮೀರಿದೆ ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಈ ಪ್ರದೇಶಕ್ಕೆ ಸ್ವಾತಂತ್ರ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Related News

Advertisement
Advertisement