ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Pejavara Shri: ಅಯೋಧ್ಯೆಲ್ಲಿ ರಾಮ ಮಂದಿರ ಕಟ್ಟಿದ್ದು ಮೋದಿ ನೇತೃತ್ವದ ಕೇಂದ್ರ ಸರ್ಕಾರವಲ್ಲ - ಪೇಜಾವರ ಶ್ರೀ ಸ್ಟೇಟ್ಮೆಂಟ್ !!

Pejavara Shri: ಮಹಾನ್ ಕಾರ್ಯಕ್ಕೆ ದೇಶವೇ ಮೋದಿಯನ್ನು, ಕೇಂದ್ರ ಸರ್ಕಾರವನ್ನು ಕೊಂಡಾಡುತ್ತಿದೆ. ಆದರೆ ಇದೀಗ ಪೇಜಾವರ ಶ್ರೀಗಳುಗಳು ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.
11:05 AM May 10, 2024 IST | ಸುದರ್ಶನ್
UpdateAt: 11:07 AM May 10, 2024 IST

Pejavara Shri: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿರುವುದು ಕೇಂದ್ರ ಸರಕಾರವಲ್ಲ. ಸುಪ್ರೀಂ ಕೋರ್ಟ್(Supreme Court) ಆದೇಶದಂತೆ ಹಿಂದೂಗಳ ಟ್ರಸ್ಟ್ ಅದನ್ನು ನಿರ್ಮಿಸಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ(Pejavara Shri) ಹೇಳಿದ್ದಾರೆ.

Advertisement

ಇದನ್ನೂ ಓದಿ: Rakshitha Prem: ಕೊರಗಜ್ಜನ ಭಕ್ತೆ ನಟಿ ರಕ್ಷಿತಾ; ನಟಿ ಬೇಡಿದ ಬೇಡಿಕೆ ಏನು?

ಅಯೋಧ್ಯೆಯಲ್ಲಿ ಶ್ರೀರಾಮನ(Ayodhya Shrirama Temple) ಮಂದಿರ ನಿರ್ಮಾಣವಾಗಿ ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿದೆ. ಇದಕ್ಕೆ ಮೂಲ ಕಾರಣ ಪ್ರಧಾನಿ ಮೋದಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಬಿಜೆಪಿಯ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಇದುವೇ ಪ್ರಮುಖ ಅಂಶವಾಗಿತ್ತು. ಇದೀಗ ಮಂದಿರ ನಿರ್ಮಾಣ ಆಗಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಟೆಯೂ ನಡೆದಿದೆ. ಈ ಮಹಾನ್ ಕಾರ್ಯಕ್ಕೆ ದೇಶವೇ ಮೋದಿಯನ್ನು, ಕೇಂದ್ರ ಸರ್ಕಾರವನ್ನು ಕೊಂಡಾಡುತ್ತಿದೆ. ಆದರೆ ಇದೀಗ ಪೇಜಾವರ ಶ್ರೀಗಳುಗಳು ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

Advertisement

ಇದನ್ನೂ ಓದಿ: Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ-ದೂರು ದಾಖಲು

ಗಂಗಾವತಿ(Gangavati) ನಗರದ ಜಯನಗರದಲ್ಲಿರುವ ಸತ್ಯನಾರಾಯಣ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಶ್ರೀಗಳುಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದು ಕೇಂದ್ರ ಸರಕಾರವಲ್ಲ. ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಹಿಂದೂಗಳ ಟ್ರಸ್ಟ್‌ನಿಂದ ನಿರ್ಮಿಸಿದ್ದು. ಅಯೋಧ್ಯೆ ರಾಮ ಮಂದಿರ ಕೆಡವುತ್ತೇನೆ ಎನ್ನುವುದು ಸರ್ವೋಚ್ಚ ನ್ಯಾಯಲಯದ ಆದೇಶ ಉಲ್ಲಂಘಿಸಿದಂತೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ನಡೆಸಲಾಗುತ್ತಿರುವ ಹಿಂದೂ ದೇವಾಲಯಗಳನ್ನು ಆಯಾ ಪ್ರದೇಶಗಳಲ್ಲಿ ಇರುವ ಹಿಂದೂಗಳಿಗೆ ನಿರ್ವಹಣೆ ಹಾಗೂ ಆಡಳಿತದ ಹೊಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement
Advertisement
Next Article