ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Peepapl Tree : ಅಶ್ವತ್ಥ ಮರವನ್ನು ಯಾವಾಗ ಪೂಜಿಸಿದ್ರೆ ಉತ್ತಮ?

Why people not worship Peepal tree on sunday and the reason by this practice explained here.
07:32 PM Feb 19, 2023 IST | ಅಶ್ವಿನಿ ಹೆಬ್ಬಾರ್
UpdateAt: 07:52 PM Feb 19, 2023 IST
Advertisement

Peepal tree: ಹಿಂದೂ ಧರ್ಮದಲ್ಲಿ ಕೆಲವು ಗಿಡ ಮರಗಳಿಗೆ ವಿಶೇಷ ಸ್ಥಾನ ಮಾನ ನೀಡಲಾಗುತ್ತದೆ. ಅಷ್ಟೆ ಅಲ್ಲದೇ, ದೇವತೆಗಳ ಪ್ರತಿರೂಪ ಎಂದು ಕೂಡ ಪೂಜಿಸಲಾಗುತ್ತದೆ. ಅಶ್ವತ್ಥ ಮರವು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಪೌರಾಣಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಅಶ್ವತ್ಥ ಮರ(Peepal tree)ದ ಬೇರುಗಳಲ್ಲಿ ಬ್ರಹ್ಮನೂ, ಕಾಂಡದಲ್ಲಿ ವಿಷ್ಣುವೂ, ಎಲೆಗಳಲ್ಲಿ ಶಿವನೂ ವಾಸಿಸುತ್ತಾರೆ ಎಂಬ ನಂಬಿಕೆ ಕೂಡ ಇದೆ. ಅಶ್ವತ್ಥ ವೃಕ್ಷವನ್ನು ಎಲ್ಲ ವೃಕ್ಷಗಳ ರಾಜ ಎಂದು ಕೂಡ ಪರಿಗಣಿಸಲಾಗುತ್ತದೆ.

Advertisement

 

ಅಶ್ವತ್ಥ ಮರವು ಸಾಕಷ್ಟು ರೋಗಗಳಿಗೆ ಔಷಧಿ ನೀಡುವ ಶಕ್ತಿಯನ್ನು ಪಡೆದುಕೊಂಡಿದ್ದು, ಇದರಿಂದಾಗಿ ಹಿಂದಿನ ಕಾಲದಲ್ಲಿ ದೈವ ಸ್ವರೂಪದ ಮರ ಎಂದು ಈ ಮರವನ್ನು ಪೂಜಿಸಲಾಗುತ್ತಿತ್ತು. ಅಶ್ವತ್ಥ ಮರ ( Peepal tree) ಉಳಿದ ವೃಕ್ಷಗಳಂತೆ ರಾತ್ರಿ ಹೊತ್ತು ಇಂಗಾಲ ಬಿಡುಗಡೆ ಮಾಡುವುದಿಲ್ಲ.ಇದರ ಬದಲಿಗೆ ಬೆಳಗ್ಗೆ, ರಾತ್ರಿ ಎಲ್ಲ ಸಮಯವೂ ಆಮ್ಲಜನಕವನ್ನೇ ಹೊರ ಹಾಕುವ ಹಿನ್ನೆಲೆ ನಮ್ಮ ಹಲವಾರು ಗ್ರಹ ದೋಷಗಳಿಗೆ, ಪಿತೃ ದೋಷಗಳಿಗೆ ಅಶ್ವತ್ಥ ಮರವನ್ನು ಪೂಜಿಸುವುದರಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ಹೆಚ್ಚಿನವರ ನಂಬಿಕೆಯಾಗಿದೆ. ಆದರೆ, ಈ ಅಶ್ವತ್ಥ ವೃಕ್ಷವನ್ನು ಭಾನುವಾರ ಪೂಜಿಸಿದರೆ ಅಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಹಾಗಿದ್ದರೆ ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಈ ಕುರಿತ ಕಂಪ್ಲೀಟ್ ಡೀಟೇಲ್ಸ್!

Advertisement

 

ಪುರಾತನ ಕಾಲದಿಂದಲೂ ಅಶ್ವತ್ಥ ಮರವನ್ನು ವಿವಿಧ ಕಾರಣಗಳಿಗೆ ಪೂಜಿಸಿಕೊಂಡು ಬರುವ ಕ್ರಮ ರೂಡಿಯಲ್ಲಿದ್ದು ದಿನನಿತ್ಯ ದೀಪ ಬೆಳಗುವ ಅದೇ ರೀತಿ ವ್ರತ ಕೈಗೊಳ್ಳುವ ಪುಣ್ಯ ಕಾರ್ಯದಲ್ಲಿ ಹೆಚ್ಚಿನವರು ತೊಡಗಿಸಿಕೊಳ್ಳುತ್ತಾರೆ. ವಿವಿಧ ಗ್ರಹ ದೋಷಗಳು, ಅನಾರೋಗ್ಯ ಹಾಗೂ ಸಮಸ್ಯೆಗಳು ಜೀವನದಲ್ಲಿ ನಿರಂತರವಾಗಿ ಬರುತ್ತಿದ್ದ ಸಂದರ್ಭದಲ್ಲಿ ಅಶ್ವತ್ಥ ಮರವನ್ನು ಪೂಜಿಸಬೇಕು ಎಂದು ಹಿರಿಯರು ಹೇಳಿದ ಮಾತುಗಳು ನಿಮಗೆ ನೆನಪಿರಬಹುದು.ಈ ಕ್ರಮವನ್ನು ಅನುಸರಿಸಿದರೆ ಆಗ ವ್ಯಕ್ತಿಯ ಜೀವನವು ಅತ್ಯಂತ ಸಮೃದ್ಧಿಯ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಕೂಡ ಇದೆ.

 

ಪೌರಾಣಿಕ ನಂಬಿಕೆಗಳ ಅನುಸಾರ, ದೇವರು (God)ಮತ್ತು ದೇವತೆಗಳ ಜೊತೆಗೆ, ಆತ್ಮಗಳು ಮತ್ತು ಪೂರ್ವಜರು ಸಹ ಅಶ್ವತ್ಥ ಮರದ ಮೇಲೆ ನೆಲೆಯಾಗಿದೆ ಎಂಬ ನಂಬಿಕೆ ಇದ್ದು, ಇದಲ್ಲದೆ, ಶನಿವಾರ ಅಶ್ವತ್ಥ ಮರದ ಮುಂದೆ ದೀಪವನ್ನು ಹಚ್ಚಿದರೆ ಶನಿದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರವನ್ನು ಪೂಜಿಸಲು ಬಯಸುವವರಿಗೆ ಶನಿವಾರ ಅತ್ಯುತ್ತಮ ದಿನವಾಗಿದ್ದು, ಅದೇ ರೀತಿ ಭಾನುವಾರದಂದು(Sunday) ಅಶ್ವತ್ಥ ವೃಕ್ಷವನ್ನು(Peepal Tree) ಪೂಜಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂದು ಗಮನಿಸಿದರೆ,ಅಶ್ವತ್ಥ ಮರದ ಪೂಜೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳು ಅನ್ವಯವಾಗುತ್ತವೆ. ಅಷ್ಟೆ ಅಲ್ಲದೇ ಪೌರಾಣಿಕ ಹಿನ್ನೆಲೆ ಕೂಡ ಇದೆ.

 

ಒಂದು ವೇಳೆ, ಅಶ್ವತ್ಥ ಮರವನ್ನು ಭಾನುವಾರದಂದು ಪೂಜಿಸಿದರೆ ಆರ್ಥಿಕ ಸ್ಥಿತಿ ಕೆಡುತ್ತದೆ ಇದಲ್ಲದೆ ದೈಹಿಕ ತೊಂದರೆಗಳನ್ನೂ ಎದುರಿಸಬೇಕಾಗುತ್ತದೆ. ತಾಯಿ ಲಕ್ಷ್ಮಿ ಮತ್ತು ಆಕೆಯ ಸಹೋದರಿ ಅಲಕ್ಷ್ಮಿ ಇಬ್ಬರೂ ಸಮುದ್ರ ಮಂಥನದಿಂದ ಹೊರ ಬಂದ ಬಳಿಕ ಇಬ್ಬರೂ ಸಹೋದರಿಯರು ಮಹಾ ವಿಷ್ಣುವಿನ ಬಳಿ ತಮಗೆ ಉಳಿಯಲು ಆಶ್ರಯ ಕಲ್ಪಿಸಲು ಮನವಿ ಮಾಡಿಕೊಂಡರು ಎನ್ನಲಾಗಿದೆ.

 

ಹೀಗಾಗಿ, ಪುರಾಣಗಳ ಪ್ರಕಾರ, ವಿಷ್ಣುವು ಲಕ್ಷ್ಮಿ ದೇವಿ ಮತ್ತು ಅವಳ ಸಹೋದರಿ ದರಿದ್ರಾ ಇಬ್ಬರಿಗೂ ಅಶ್ವತ್ಥ ಮರದಲ್ಲಿ ನೆಲೆಸಲು ಸ್ಥಳವನ್ನು ನೀಡಿದ್ದು, ಹೀಗಾಗಿ ಸಹೋದರಿಯರಿಬ್ಬರೂ ಕೂಡ ಅಶ್ವತ್ಥ ಮರದಲ್ಲಿ ನೆಲೆಸಲು ಆರಂಭಿಸಿದರು. ಒಮ್ಮೆ ವಿಷ್ಣುವು ಮಾತೆ ಲಕ್ಷ್ಮಿಯನ್ನು ವರಿಸಲು ಬಯಸಿ ಮದುವೆಯ ಕುರಿತು ಪ್ರಸ್ತಾಪ ಇಟ್ಟ ಸಂದರ್ಭದಲ್ಲಿ ಮಾತೆ ಲಕ್ಷ್ಮಿಯ ಮದುವೆಗೂ ಮೊದಲು ಸಹೋದರಿ ದರಿದ್ರಳನ್ನು ಮದುವೆಯಾಗುವಂತೆ ಮನವಿ ಮಾಡಿದರು ಎನ್ನಲಾಗಿದೆ. ಆಗ ಅಲಕ್ಷ್ಮಿ ಪೂಜೆ ಮಾಡದವನನ್ನು ಮದುವೆಯಾಗಲೂ ಬಯಸಿದಳು ಎನ್ನಲಾಗಿದೆ.

 

ದರಿದ್ರ ಲಕ್ಷ್ಮಿಯ ಇಚ್ಛೆಯ ಅನುಸಾರ, ಭಗವಾನ್ ವಿಷ್ಣುವು ಅವಳನ್ನು ಅದೇ ರೀತಿಯ ಋಷಿಯೊಂದಿಗೆ ಮದುವೆ ಮಾಡಿಸಿದ್ದು, ಅವಳ ಮದುವೆಯ ನಂತರ, ವಿಷ್ಣುವು ದರಿದ್ರ ಮತ್ತು ಅವಳ ಪತಿ ಋಷಿಗೆ ಭಾನುವಾರದಂದು ತನ್ನ ವಾಸಸ್ಥಾನವಾದ ಅಶ್ವತ್ಥ ಮರದಲ್ಲಿ ವಾಸಿಸಲು ನೆಲೆ ಕಲ್ಪಿಸಿ ಕೊಟ್ಟ ಎನ್ನಲಾಗಿದೆ. ಹೀಗಾಗಿ, ಅಂದಿನಿಂದ, ಅಲಕ್ಷ್ಮಿ ಭಾನುವಾರದಂದು ಅಶ್ವತ್ಥ ಮರದ ಮೇಲೆ ವಾಸಿಸುತ್ತಾಳೆ ಎಂಬ ನಂಬಿಕೆಯಿದೆ. ಇದರಿಂದಾಗಿ, ಭಾನುವಾರದಂದು ಅಶ್ವತ್ಥ ಮರವನ್ನು ಪೂಜಿಸಿದರೆ ಅಲಕ್ಷ್ಮಿ ಸಂತುಷ್ಟಳಾಗಿ ಮನೆಯಲ್ಲಿ ಬಡತನ ತಾಂಡವವಾಡುತ್ತದೆ. ಇದರಿಂದ, ಭಾನುವಾರದಂದು ಅಶ್ವತ್ಥ ಮರವನ್ನು ಪೂಜಿಸಬಾರದು ಎನ್ನಲಾಗುತ್ತದೆ. ಇನ್ನು ಮುಂದೆ ನೀವು ಕೂಡ ಆದಿತ್ಯವಾರ ಅಶ್ವತ್ಥ ವೃಕ್ಷ ಪೂಜಿಸುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ!! ಇಲ್ಲಾ ಎಂದಾದರೆ ಕಷ್ಟ ಕಾರ್ಪಣ್ಯಗಳು ಹೆಚ್ಚಾಗೋದು ನಿಶ್ಚಿತ.

Related News

Advertisement
Advertisement