Parliment Election: ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೆ ಜನರೇ ಸಂಗ್ರಹಿಸಿ ಕೊಟ್ಟರು 50 ಲಕ್ಷ !!
Parliment Election: ಹಿಂದಿನ 60ರ ದಶಕದ ಚಿತ್ರಣ ಗಮನಿಸಿದರೆ ದೇಶದಲ್ಲಿ ಸದ್ಯ ಕಾಂಗ್ರೆಸಿನ ಸ್ಥಿತಿ ಚಿಂತಾಜನಕವಾಗಿದೆ. ಲೋಕಸಭಾ ಚುನಾವಣೆಯಲ್ಲಿ 50 ಸ್ಥಾನಗಳನ್ನು ಕೂಡ ಗೆಲ್ಲದಂತಹ ಹಂತಕ್ಕೆ ಕಾಂಗ್ರೆಸ್ ತಲುಪಿದೆ. ಬಿಜೆಪಿಯ(BJP) ಪ್ರಬಲ ನಾಯಕತ್ವದ ಫಲವೋ ಅಥವಾ ಕಾಂಗ್ರೆಸ್(Congress) ನಲ್ಲಿ ನಡೆದು ಬಂದ ಕುಟುಂಬ ರಾಜಕಾರಣದ ಫಲವೋ ಇಲ್ಲ ಮೋದಿಯ ಅಲೆಯ ಪ್ರಭಾವವೋ ಕಾಂಗ್ರೆಸ್ನ ಉತ್ತಮ ಅಭ್ಯರ್ಥಿಗಳು ಕೂಡ ಚುನಾವಣೆಯಲ್ಲಿ ಸೋಲುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಇದರ ನಡುವೆಯೂ ಕೂಡ ಕೆಲ ಉತ್ ಅಭ್ಯರ್ಥಿಗಳನ್ನು ಜನ ಎಂದಿಗೂ ಕೈ ಬಿಡುವುದಿಲ್ಲ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ. ಅಂತಯೇ ಗುಜರಾತ್ ನಲ್ಲಿ ಇದಕ್ಕೆ ಒಂದು ಸ್ಪಷ್ಟ ಉದಾಹರಣೆಯನ್ನು ನಾವು ನೋಡಬಹುದು.
ಇದನ್ನೂ ಓದಿ: Amith Shah: ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ, ಅದು ಶಾಶ್ವತ - ಅಮಿತ್ ಶಾ ಸ್ಪಷ್ಪನೆ !!
ಗುಜರಾತ್‌ನ ಬನಸ್ಕಾಂಠಾ(Banasjanta) ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಗೆನಿಬೆನ್ ಠಾಕೂರ್(Geniben Thakur) ಅವರು ಕಣಕ್ಕಿಳಿದಿದ್ದಾರೆ. ಚುನಾವಣೆಯಲ್ಲಿ ಸೆಣೆಸುವಷ್ಟು ಹಣಕಾಸು ಇಲ್ಲ ಈ ಅಭ್ಯರ್ಥಿಗೆ, ಚುನಾವಣಾ ಪ್ರಚಾರಕ್ಕೆ ಆ ಕ್ಷೇತ್ರದ ಜನತೆಯೇ ದೇಣಿಗೆ ರೂಪದಲ್ಲಿ 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹ ಮಾಡಿ, ಅದನ್ನು ಗೆನಿಬೆನ್ ಗೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ಗೆನಿಬೆನ್ ಠಾಕೂರ್ ಅವರ ಪ್ರಾಮಾಣಿಕತೆ, ಅವರ ನಿಷ್ಟೆ ಏನೆಂಬುದು ಎಲ್ಲರಿಗೂ ತಿಳಿದಂತಾಗಿದೆ. ಅದರಲ್ಲೂ ವಿಶೇಷ ಅಂದರೆ ಮೋದಿಯ ತವರಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯ ಶಕ್ತಿ ಪ್ರದರ್ಶನವಾಗಿದೆ.
ಇದನ್ನೂ ಓದಿ: Women drinking blood: ಪ್ರತಿದಿನ ಆಹಾರವಾಗಿ ರಕ್ತ ಕುಡಿಯುವ ಯುವತಿ : ಈಗಾಗಲೇ ಆಕೆ ಸೇವಿಸಿದ್ದು ಬರೋಬ್ಬರಿ 3,785 ಲೀಟರ್ ರಕ್ತ
ಅಂದಹಾಗೆ ಕಳೆದ 40 ದಿನಗಳ ಹಿಂದೆ ಕ್ಷೇತ್ರದಲ್ಲಿ ಗೆನಿಬೆನ್ ತನ್ನ ಪ್ರಚಾರವನ್ನು ಆರಂಭಿಸಿದಾಗ ಪ್ರಚಾರದಲ್ಲಿ ವಾಹನ ಇಂಧನ ವೆಚ್ಚ ಹಾಗೂ ಸಾರ್ವಜನಿಕ ಸಭೆ ನಿರ್ವಹಿಸಿಲು ದೇಣಿಗೆ ರೂಪದಲ್ಲಿ ಹಣ ಸಹಾಯ ಮಾಡಿ ಎಂದು ಜನರಲ್ಲಿ ಕೇಳಿಕೊಂಡಿದ್ದರು. ಅದರಂತೆ ಅನೇಕರು ಧನ ಸಹಾಯಕ್ಕೆ ಮುಂದ್ದಾಗಿದ್ದು, ಒಟ್ಟು 50 ಲಕ್ಷಕ್ಕೂ ಅಧಿಕ ಮೊತ್ತ ದೇಣಿಗೆ ರೂಪದಲ್ಲಿ ಪಡೆದುಕೊಂಡಿದ್ದೇನೆ ಎಂದು ಠಾಕೂರ್ ತಿಳಿಸಿದ್ದಾರೆ.