Parliment election : ಲೋಕಸಭಾ ಚುನಾವಣೆ - ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !!
Parliment election: ಮುಂಬರುವ ಲೋಕಸಭಾ ಚುನಾವಣೆಯ ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಎಲ್ಲಾ ಪಕ್ಷಗಳು ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಈಗಲೇ ಗೆಲುವಿನ ನಗೆ ಬೀರುತ್ತಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಇದೀಗ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ(Congress candidates)ಸಂಭಾವನೆಯ ಪಟ್ಟಿಯೊಂದು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಹೌದು, ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವುದರ ಮೂಲಕ ಭರ್ಜರಿ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ(Parliament election)ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕೆಂಬ ಶಪಥವನ್ನು ತೊಟ್ಟಿದೆ. ಹೀಗಾಗಿ ಈಗಿಂದಲೇ ರಾಜ್ಯದ ಕಾಂಗ್ರೆಸ್ ವರಿಷ್ಠರು ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ಗೆಲ್ಲುವಂತಹ ಸಮರ್ಥವಾದ ಹಾಗೂ ಪ್ರಬಲವಾದ ಸೂಕ್ತ ಅಭ್ಯರ್ಥಿಗಳ ಪಟ್ಟಿಯೊಂದನ್ನು ಹಿಡಿದು ಡಿಕೆಶಿ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಆ ಪಟ್ಟಿ ಇಂತಿದೆ.
ಇದನ್ನು ಓದಿ: Basavanagouda patil yatnal: ಯತ್ನಾಳ್ ಗೆ ಲೋಕಸಭಾ ಟಿಕೆಟ್- ಈ ಸ್ಪರ್ಧೆ ಕಾಂಗ್ರೆಸ್ ನಿಂದಲೋ.. ಇಲ್ಲಾ ಬಿಜೆಪಿಯಿಂದಲೊ ?!
ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಸಂಭವನೀಯ ಪಟ್ಟಿ:
• ಚಾಮರಾಜನಗರ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್ ಬೋಸ್
• ಮೈಸೂರು-ಕೊಡಗು : ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ
• ಹಾಸನ : ಮಾಜಿ ಸಚಿವ ಬಿ.ಶಿವರಾಂ
• ಮಂಗಳೂರು : ಮಿಥುನ್ ರೈ
• ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ
• ಶಿವಮೊಗ್ಗ : ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್
• ದಾವಣಗೆರೆ: ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ
• ಚಿತ್ರದುರ್ಗ: ಎಚ್.ಆಂಜನೇಯ
• ತುಮಕೂರು: ಸಚಿವ ರಾಜಣ್ಣ
• ಚಿಕ್ಕಬಳ್ಳಾಪುರ: ವೀರಪ್ಪಮೊಯಿಲಿ
• ಬೆಂಗಳೂರು ಗ್ರಾಮಾಂತರ: ಹಾಲಿ ಸದಸ್ಯ ಡಿ.ಕೆ.ಸುರೇಶ್
• ಬೆಂಗಳೂರು ಉತ್ತರ : ಸಚಿವ ಕೃಷ್ಣಬೈರೇಗೌಡ
• ಕೋಲಾರ: ಕೆ.ಎಚ್ ಮುನಿಯಪ್ಪ
• ರಾಯಚೂರು : ಬಿವಿ ನಾಯಕ್
• ಮಂಡ್ಯ : ಚಲುವರಾಯ ಸ್ವಾಮಿ , ಅಥವಾ ಚಲುವರಾಯ ಸ್ವಾಮಿ ಪತ್ನಿ
• ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ , ಗಣೇಶ್ ಹುಕ್ಕೇರಿ
• ಬೆಂಗಳೂರು ಕೇಂದ್ರ: ಸಚಿವ ಕೆ.ಜೆ.ಜಾರ್ಜ್, ಬಿ ಕೆ ಹರಿಪ್ರಸಾದ್
• ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್
• ಹಾವೇರಿ- ಗದಗ : ಮಾಜಿ ಶಾಸಕ ಡಿ.ಆರ್.ಪಾಟೀಲ್, ಸಲ್ಲಿಂ ಅಹಮದ್
• ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ
• ಚಿಕ್ಕೋಡಿ: ಮಾಜಿ ಶಾಸಕ ವಿವೇಕ ಪಾಟೀಲ್
• ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ
• ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
• ಬೀದರ್: ಮಾಜಿ ಶಾಸಕ ರಾಜಶೇಖರ ಪಾಟೀಲ್
• ಬಳ್ಳಾರಿ: ವಿ.ಎಸ್.ಉಗ್ರಪ್ಪ
• ಬಾಗಲಕೋಟೆ: ವೀಣಾ ಕಾಶಪ್ಪನವರ್
• ಉತ್ತರ ಕನ್ನಡ : ಅಂಜಲಿ ನಿಂಬಾಲ್ಕರ್ , ಹೆಬ್ಬಾರ್ ಮಗ