For the best experience, open
https://m.hosakannada.com
on your mobile browser.
Advertisement

Parliment election: ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ ' ಬಿಡುಗಡೆ !!

Parliment Election : ಲೋಕಸಭಾ ಚುನಾವಣೆಗೆ ಹಲವು ಭರವಸೆಗಳನ್ನೊಳಗೊಂಡ ಬಿಜೆಪಿಯು ಪ್ರಣಾಳಿಕೆ(BJP Pranalike) ಯನ್ನು ಬಿಡುಗಡೆ ಮಾಡಿದೆ.
10:46 AM Apr 14, 2024 IST | ಸುದರ್ಶನ್
UpdateAt: 10:55 AM Apr 14, 2024 IST
parliment election  ಬಿಜೆಪಿಯ ಪ್ರಣಾಳಿಕೆ  ಸಂಕಲ್ಪ ಪತ್ರ   ಬಿಡುಗಡೆ

Parliment Election : ಲೋಕಸಭಾ ಚುನಾವಣೆಗೆ ಹಲವು ಭರವಸೆಗಳನ್ನೊಳಗೊಂಡ ಬಿಜೆಪಿಯು ಪ್ರಣಾಳಿಕೆ(BJP Pranalike) ಯನ್ನು ಬಿಡುಗಡೆ ಮಾಡಿದೆ. 'ಸಂಕಲ್ಪ ಪತ್ರ'(Sankalpa Patra) ಎಂಡ ಹೆಸರಿನಲ್ಲಿ ಬಿಜೆಪಿ ತನ್ನ ಈ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಗಮನ ಸೆಳೆದಿದೆ.

Advertisement

ಇದನ್ನೂ ಓದಿ: Intercourse: ಒಂದು ವಾರದಲ್ಲಿ ಎಷ್ಟು ಬಾರಿ ಸಂಭೋಗಿಸಬೇಕು? : ಹಗಲಿನಲ್ಲಿ ಸಂಭೋಗ ಮಾಡುವುದು ಉತ್ತಮವೇ?

ದೆಹಲಿಯ ಬಿಜೆಪಿ(BJP) ಕಛೇರಿಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲಿ, ಅಂಬೇಡ್ಕರ್ ಜಯಂತಿಯ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಯವರು ಈ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಪ್ರತಿ ಕ್ಷಣವೂ ದೇಶಕ್ಕಾಗಿ.. 24*7 For 2047 ಚುನಾವಣಾ ಘೋಷವಾಕ್ಯದೊಂದಿಗೆ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದೇ ವೇಳೆ ಪ್ರಧಾನಿ ಮೋದಿ ಅವರ 10 ವರ್ಷಗಳ ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

Advertisement

ಇದನ್ನೂ ಓದಿ: Idli: ಇಡ್ಲಿ ಹುಟ್ಟಿದ್ದು ಭಾರತದಲ್ಲಿ ಅಲ್ಲ : ಅಸಲಿಗೆ ಈ ಖಾದ್ಯ ಯಾವ ದೇಶದ್ದು ಗೊತ್ತಾ..?

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

• 70 ವರ್ಷ ದಾಟಿದವರಿಗಾಗಿ ಆಯುಷ್ಮಾನ್‌ ಭಾರತ್‌ ಯೋಜನೆ ವಿಸ್ತರಣೆ, ಎಲ್ಲರಿಗೂ ಉಚಿತ ಚಿಕಿತ್ಸೆ

• ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ

• ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ

• ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪೂರೈಕೆ

• ಕೋಟ್ಯಂತರ ಕುಟುಂಬಗಳಿಗೆ ಸೋಲಾರ್‌ ಮೂಲಕ ಉಚಿತವಾಗಿ ವಿದ್ಯುತ್‌ ಪೂರೈಕೆ

• ಮುದ್ರಾ ಯೋಜನೆ ಅಡಿಯಲ್ಲಿ ಸಿಗುವ ಸಾಲದ ಮೊತ್ತ 20 ಲಕ್ಷ ರೂ.ಗೆ ಏರಿಕೆ

• ಅಮೃತ್‌ ಭಾರತ್‌, ವಂದೇ ಭಾರತ್‌ ರೈಲುಗಳ ಸಂಖ್ಯೆ ಹೆಚ್ಚಳ

• ಮಂಗಳಮುಖಿಯರಿಗೂ ಆಯುಷ್ಮಾನ್‌ ಭಾರತ್‌ ಯೋಜನೆ ಅಡಿ ಉಚಿತ ಚಿಕಿತ್ಸೆ

• 10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ

• ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ

• ರೈತರಿಗೆ ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮುಂದುವರಿಕೆ

• ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು

• ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ

• ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ

• ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು

ಬಿಜೆಪಿಯ ಈ ಪ್ರಣಾಳಿಕೆ ಗಮನಿಸಿದಾಗ ಬಡವರು, ಯುವಕರು, ರೈತರು, ಮಹಿಳೆಯರು, ವಂಚಿತರು, ಹಿರಿಯ ನಾಗರಿಕರು ಸೇರಿ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ತತ್ವದಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಹೇಳಬಹುದು. ರೈತರು, ಬಡವರು, ಮಹಿಳೆಯರಿಗೆ ಮೋದಿ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.

Advertisement
Advertisement