For the best experience, open
https://m.hosakannada.com
on your mobile browser.
Advertisement

Parliment election : ದಕ್ಷಿಣ ಕನ್ನಡದಿಂದ ಕಟೀಲ್ ಬದಲು ಅಣ್ಣಾ ಮಲೈ ಕಣಕ್ಕೆ?!

02:18 PM Mar 07, 2024 IST | ಹೊಸ ಕನ್ನಡ
UpdateAt: 03:17 PM Mar 07, 2024 IST
parliment election   ದಕ್ಷಿಣ ಕನ್ನಡದಿಂದ ಕಟೀಲ್ ಬದಲು ಅಣ್ಣಾ ಮಲೈ ಕಣಕ್ಕೆ

Parliment election: ಲೋಕಸಭಾ ಚುನಾವಣೆಗೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ ಕೈ ಸೇರಿದೆ. ಎರಡನೇ ಪಟ್ಟಿಯಲ್ಲಿ 10 ರಿಂದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂಭವ ಇದೆ ಎನ್ನಲಾಗಿದೆ. ಈ ನಡುವೆ ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರವಾದ ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ(BJP Candidate)ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು ನಳೀನ್ ಕುಮಾರ್ ಕಟೀಲ್ ಬದಲು ತಮಿಳು ನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆಯಂತೆ !!

Advertisement

ಇದನ್ನೂ ಓದಿ: Adil Khan Durrani Marriage: ಆದಿಲ್ ಖಾನ್ ದುರಾನಿಯ ಬಾಳಲ್ಲಿ ಹೊಸ ಹೆಂಡತಿಯ ಆಗಮನ! ಯಾರೀ ಸೋಮಿ ಖಾನ್?

ಹೌದು, ಅಣ್ಣಾಮಲೈ(Anna malai) ಅವರನ್ನು ಬಿಜೆಪಿ ವರಿಷ್ಠರು, ಕರ್ನಾಟಕ(Karnataka)ದಿಂದ ಚುನಾವಣೆ ಅಖಾಡಕ್ಕೆ ಇಳಿಸುತ್ತಾರೆಂಬ ಗುಮಾನಿ ಎದುರಾಗಿದೆ. ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಹವಾ ಇದೆ. ಇನ್ನು ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ಅವರು ನಮ್ಮ ರಾಜ್ಯದಲ್ಲೂ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ. 'ಸಿಂಗಂ ಅಣ್ಣಾಮಲೈ' ಅಂತಾನೆ ಅವರನ್ನು ಇಲ್ಲಿನ ಜನರು ಕರೆಯುತ್ತಿದ್ದರು. ಈಗ ಇದೆ ಅಣ್ಣಾಮಲೈ ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.

Advertisement

ಅಣ್ಣಾಮಲೈ ಅವರನ್ನು ಕರ್ನಾಟಕದ ಕರಾವಳಿ ಭಾಗದ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ಸಾಗಿವೆ ಎಂಬ ಮಾತು ಹರಿದಾಡಿದೆ. ಇನ್ನೊಂದು ಕಡೆ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಇದೀಗ ದಕ್ಷಿಣ ಕನ್ನಡದಲ್ಲಿ ಅಸಮಾಧಾನ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿಯೇ ಕಟೀಲ್ ಬದಲು ಈಗ ಅಣ್ಣಾಮಲೈ ಅವರನ್ನ ದಕ್ಷಿಣ ಕನ್ನಡದಿಂದ ಲೋಕಸಭೆಗೆ ಇಳಿಸಲು ಚರ್ಚೆ ನಡೆದಿಯಂತೆ.

ದ.ಕ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಹಲವು ಆಕಾಂಕ್ಷಿಗಳಿದ್ದಾರೆ. ಅರುಣ್ ಕುಮಾರ್ ಪುತ್ತಿಲ, ಬ್ರಿಜೇಶ್ ಚೌಟ ಹಾಗೂ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಕೂಡ ಟಿಕೆಟ್ ಆಕಾಂಕ್ಷಿ. ಅಲ್ಲದೆ ಕಟೀಲ್ ಅವರು ಈಗಾಗಲೇ ಟಿಕೆಟ್ ನನಗೆ, ಹೆಚ್ಚಿನ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಡೆ ಏನೆಂದು ಕಾದು ನೋಡಬೇಕಿದೆ.

Advertisement
Advertisement