Parliment election: ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಟಿಕೆಟ್ ವಿಚಾರದಲ್ಲಿ ರೋಚಕ ಟ್ವಿಸ್ಟ್- ಈ ಬಾರಿ 'ಶೋಭಾ'ಗಿಲ್ಲಾ ಟಿಕೆಟ್?! ಇವರಿಗೆ ಫಿಕ್ಸ್?
Parliment election: ಮುಂಬರುವ ಲೋಕಸಭಾ ಚುನಾವಣೆಗೆ ಈಗಿಂದಲೇ ಎಲ್ಲಾ ಪಕ್ಷಗಳು ತಯಾರಿ ನಡೆಸಿವೆ. ರಾಜ್ಯ ಬಿಜೆಪಿಗಂತೂ ಈ ಸಲದ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಹಲವು ಮಂದಿ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ಆದರೂ ಕೂಡ ಹೈಕಮಾಂಡ್ ಹಾಗೂ ರಾಜ್ಯದ ವ ಬಾರಿ ಜಾಗರೂಕತೆಯಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದು, ಈವರೆಗೂ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಈ ನಡುವೆ ಹೈ ವೋಲ್ಟೇಜ್ ಕ್ಷೇತ್ರವಾದ ಉಡುಪಿ-ಚಿಕ್ಕಮಗಳೂರು(Udupi chikkamagaluru) ಅಭ್ಯರ್ಥಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಈಗಾಗಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ(BJP) ಯ ತೆಕ್ಕೆಯಲ್ಲಿದ್ದು ಶೋಭಾ ಕರಂದ್ಲಾಜೆ ಇಲ್ಲಿನ ಹಾಲಿ ಸಂಸದೆಯಾಗಿದ್ದಾರೆ. ಜೊತೆಗೆ ಕೇಂದ್ರ ಮಂತ್ರಿಯೂ ಆಗಿದ್ದಾರೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೋಭಾ ಅವರಿಗೆ ಟಿಕೆಟ್ ಸಿಗುವುದು ಡೌಟ್ ಆಗಿದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಸಿ.ಟಿ ರವಿ(CT Ravi) ಅವರು ಈ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ಅನ್ನು ಪಡೆಯಲು ಭಾರೀ ಕಸರತ್ತು ನಡೆಸಿದ್ದಾರೆ. ಆದರೆ ಅವರಿಗೂ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ. ಹಾಗಿದ್ದರೆ ಹೈಕಮಾಂಡ್ ಯಾರ ಮೇಲೆ ಒಲವು ಇಟ್ಟಿದೆ ಎಂದು ನೋಡಿದಾಗ ಕಂಡುಬರುವ ಹೆಸರು ಪ್ರಮೋದ್ ಮಧ್ವರಾಜ್ ಅವರದ್ದು.
ಇದನ್ನೂ ಓದಿ: Physical Relationship: ವಿದ್ಯಾರ್ಥಿ ಜೊತೆ ಶಿಕ್ಷಕಿಯ ರಾಸಲೀಲೆ: ಶಿಕ್ಷಕಿ ಅಮಾನತು!!
ಹೌದು, 2013ರ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದಂತಹ ಪ್ರಮೋದ್ಮಧ್ವರಾಜ್(Pramod madhvaraj) ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದ ಫಲದಿಂದ ಜೆಡಿಎಸ್ ನಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಅಲ್ಲದೆ ನಂತರದ ದಿನಗಳಲ್ಲಿ ಕಾಂಗ್ರೆಸ್ ನಿಂದ ಬೇಸರಗೊಂಡು ಬಿಜೆಪಿಯನ್ನು ಸೇರ್ಪಡೆಗೊಂಡ ಮಧ್ವರಾಜ್ ಅವರು ಬಿಜೆಪಿಯ ಹಲವಾರು ಸಾಧನೆಗಳನ್ನು ಪ್ರೋತ್ಸಾಹಿಸುತ್ತಾ, ಬೆಂಬಲಿಸುತ್ತಾ, ಬಿಜೆಪಿಯವರನ್ನು ಕೊಂಡಾಡುತ್ತಾ ಬಂದಿದ್ದಾರೆ. ಅಲ್ಲದೆ ಜೀವ ಇರುವವರೆಗೂ ಮುಂದೆ ಬಿಜೆಪಿಗೆ ದುಡಿಯುತ್ತೇನೆ ಎಂದಿದ್ದಾರೆ. ಜೊತೆಗೆ ಕರಾವಳಿಲ್ಲಿ ಪ್ರಬಲ ಬಿಜೆಪಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಎರಡು ಅವಧಿಗೆ ಶೋಭಾ ಕರಂದ್ಲಾಜೆಯ ಕಾರ್ಯ ವೈಖರಿಯನ್ನು ನೋಡಿರುವಂತಹ ಮಲೆನಾಡು ಹಾಗೂ ಕರಾವಳಿಯ ಮಂದಿ ಇದೀಗ ರಾಜ್ಯದ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರಿಗೆ ಟಿಕೆಟ್ ನೀಡಲು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕಿಳಿಸುತ್ತದೆಯೋ ಎಂದು ನೋಡಬೇಕಾಗಿದೆ.