Parliment Election : ಕರ್ನಾಟಕದಲ್ಲಿ ಟುಸ್ ಆಯ್ತಾ ಮೋದಿ ಹವಾ - ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಫಿಕ್ಸಾ ?!
Parliment Election :ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ(Parliment Election) ಮುಗಿದು ನಾಯಕರೆಲ್ಲರೂ ಪರಿಷತ್ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಇದರ ನಡುವೆ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ. ಅಂತೆಯೇ ಬಿಜೆಪಿ ಕೂಡ ತಾನು ಗೆಲ್ಲಬಹುದಾದ, ಕಳೆದುಕೊಳ್ಳಬಹುದಾದ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ತೊಡಗಿದ್ದು, ಗುಪ್ತಚರ ಇಲಾಖೆ ನೀಡಿದ ಅಂಕಿಅಂಶದಿಂದ ಶಾಕ್ ಆಗಿದೆ.
ಇದನ್ನೂ ಓದಿ: Reliance: ಭರ್ಜರಿ ಸುದ್ದಿ - ಇನ್ನು ರಿಲಯನ್ಸ್ ರಿಟೇಲ್‌ನಲ್ಲಿ ಸಿಗಲಿದೆ ಬ್ರಿಟನ್ ಫ್ಯಾಷನ್ ASOS ಬ್ರ್ಯಾಂಡ್‌ನ ಉತ್ಪನ್ನಗಳು
ಹೌದು, ಕರ್ನಾಟಕ ದಕ್ಷಿಣ ಭಾರತದಲ್ಲಿ(South India) ಬಿಜೆಪಿಯ(BJP) ಹೆಬ್ಬಾಗಿಲು. ಇಲ್ಲಿ ಸ್ಥಳೀಯ ನಾಯಕರಿಗೆ ಮಣೆ ಹಾಕುವ ಬದಲು ಜಗಮೆಚ್ಚಿದ ಪ್ರಧಾನಿ ಮೋದಿಗೆಯೇ ಹೆಚ್ಚು ಮನ್ನಣೆ. ಲೋಕ ಸಮರದಲ್ಲಿ ಕಳೆದ ದಶಕದಿಂದ ಬಿಜೆಪಿ ಏನಾದರೂ ಎರಡಂಕಿಯ ಲೆಕ್ಕಾಚಾರದಲ್ಲಿ ಗೆಲ್ಲುತ್ತಿದೆ ಎಂದರೆ ಅದಕ್ಕೆ ಮೋದಿಯೇ ಕಾರಣ. ಈ ಸಲದ ಚುನಾವಣೆಯೂ ಮೋದಿ ಮುಂದಾಳತ್ವದಲ್ಲಿಯೇ ನಡೆಯಿತು. ಆದರೆ ಈ ಸಮರದಲ್ಲಿ ಮಾತ್ರ ರಾಜ್ಯದಲ್ಲಿ ಮೋದಿ ಅಲೆ ಟುಸ್ ಆಗುತ್ತದೆ ಎನ್ನಲಾಗಿದ್ದು, ಇದು ಬಿಜೆಪಿ ನುಂಗಲಾರದ ತುತ್ತಾಗಿದೆ. 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲವ ಭರವಸೆಯಲ್ಲಿ ಭೀಗುತ್ತಿದ್ದ ಕಮಲ ಪಡೆಗೆ ಕಾಂಗ್ರೆಸ್ ಸಂಗ್ರಹಿಸಿದ ಆ ಒಂದು ಸಮೀಕ್ಷೆ ಮರ್ಮಾಘಾತ ಉಂಟು ಮಾಡಿದೆ.
ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly Election) ಪಂಚ ಗ್ಯಾರಂಟಿಗಳನ್ನ ನೀಡುವ ಮೂಲಕ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಅದೂ ಅಲ್ಲದೆ 2019 ರ ಲೋಕಸಭಾ ಚುನಾವಣೆಯಲ್ಲಿ (Parliament Election ) ಕಾಂಗ್ರೆಸ್ ಕೇವಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಹೈಕಮಾಂಡ್(Congress highcomand) 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ನೀಡಿತ್ತು. ಹೀಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಇದನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಗೆ ಎರಡಂಕಿಯ ಫಲಿತಾಂಶವನ್ನು ತರಬೇಕೆಂದು ಪಣ ತೊಟ್ಟಿ ಹೋರಾಡಿದ್ದಾರೆ. ಹೀಗಾಗಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲೂ ಇದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಹುತೇಕ ಕ್ಷೇತ್ರಗಳ ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿರುವುದರಿಂದ ಕೈ ಪಡೆ ಫುಲ್ ಖುಷ್ ಆಗಿದೆ. ಒಟ್ಟಿನಲ್ಲಿ ಸಮೀಕ್ಷೆಯಿಂದಾಗಿ ಕಾಂಗ್ರೆಸ್ ನಾಯಕರು ಕನಿಷ್ಠ 20 ಕ್ಷೇತ್ರಗಳನ್ನ ಗೆಲುವ ನಿರೀಕ್ಷೆಯಲ್ಲಿದ್ದಾರೆ.
ಅಂದಹಾಗೆ ಕಾಂಗ್ರೆಸ್(Congress) ಪಕ್ಷವು ಸುಮಾರು 18-20 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಆದರೆ ಕೆಲವು ಪ್ರಜ್ಞಾವಂತ ನಾಯಕರು ಸುಮಾರು 13-14 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಬರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಸಲೀಂ ಅಹ್ಮದ್ ತಿಳಿಸಿದ್ದಾರೆ.
BJP-JDS ಲೆಕ್ಕಾಚಾರ ಏನು?
ಬಿಜೆಪಿ ಕೂಡ ತನ್ನ ಗೆಲುವಿನ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದು, ಪಕ್ಷದ ಆಂತರಿಕ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ಯಾರೂ ಕೂಡ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಸೋಲುವ ಭೀತಿಯನ್ನು ವ್ಯಕ್ತಪಡಿಸಿಲ್ಲ. ಆದರೆ 2019ರ ಚುನಾವಣೆಗೆ ಹೋಲಿಸಿದರೆ ಮತಗಳ ಅಂತರದಲ್ಲಿ ವ್ಯತ್ಯಾಸವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೂ ಕೂಡ ಎಲ್ಲಾ ಸಮೀಕ್ಷೆಗಳ ಮೂಲಕ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರತಿಯೊಬ್ಬ ಶಾಸಕರಿಂದಲೇ ಅವರ ಕ್ಷೇತ್ರದ ಮುನ್ನಡೆ, ಹಿನ್ನಡೆ ಸಾಧ್ಯತೆಯ ಮಾಹಿತಿ ಪಡೆಯಲಾಗಿದೆ. ಆದರೆ ಕಾಂಗ್ರೆಸ್ ಸಮೀಕ್ಷೆ ಮೈತ್ರಿ ಪಕ್ಷಗಳಿಗೆ ಕೊಂಚ ನಡುಕ ಹುಟ್ಟಿಸಿವೆ.
ಈ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು?
* ಚಾಮರಾಜನಗರ
* ಚಿತ್ರದುರ್ಗದ
* ಕಲಬುರಗಿ
* ಕೊಪ್ಪಳ
* ಬೆಳಗಾವಿ
* ಚಿಕ್ಕೋಡಿ - ( 50 - 50 )
* ದಾವಣಗೆರೆ - ( 50 -50 )
* ಬೆಂಗಳೂರು ಗ್ರಾಮಾಂತರ- (50-50)