ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Parliment election : 2024ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದ್ಯಾರು? ಅಚ್ಚರಿ ಮೂಡಿಸಿದ ಸಮೀಕ್ಷೆ!!

09:23 AM Dec 13, 2023 IST | ಹೊಸ ಕನ್ನಡ
UpdateAt: 10:10 AM Dec 13, 2023 IST
Advertisement

Parliment election : ಮುಂಬರುವ ಲೋಕಸಭಾ ಚುನಾವಣೆಗೆ(Parliament election)ಈಗಲೇ ಪಕ್ಷಗಳೆಲ್ಲವೂ ತಯಾರಿಗೆ ನಡೆಸಿ, ಗೆಲುವಿನ ಮಂತ್ರವನ್ನು ಪಠಿಸುತ್ತಿವೆ. ಈ ನಡುವೆ ಕೆಲವು ಮಾಧ್ಯಮಗಳು, ಪತ್ರಿಕೆಗಳು ಮುಂದಿನ ಚುನಾವಣೆಯ ಸಮೀಕ್ಷೆಗಳನ್ನ ನಡೆಸುತ್ತಿದ್ದು ಗೆಲುವು ಯಾರದ್ದೆಂದು ಹೇಳಿರುವುದನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಜಾಗತಿಕ ಆರ್ಥಿಕ ರೇಟಿಂಗ್‌ ಏಜೆನ್ಸಿ ಫಿಚ್‌ ಕೂಡ ಗೆಲುವು ಯಾರ ಪಾಲಾಗಲಿದೆ ಎಂದು ಭವಿಷ್ಯ ನುಡಿದಿದೆ

Advertisement

ಇದನ್ನು ಓದಿ: Cleaning Tips: ವಾಶ್ ಬೇಸಿನ್ ಕೊಳಕು ತೆಗೆಯಲು ಕಷ್ಟ ಪಡ್ತೀದ್ದಿರಾ? ಚಿಂತೆ ಬಿಡಿ, ಈ ಟ್ರಿಕ್ ಯೂಸ್ ಮಾಡಿ

ಹೌದು, ಮುಂದಿನ ವರ್ಷ ಅಂದರೆ 2024ರಲ್ಲಿ 18ನೇ ಲೋಕಸಭಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆ ಏಪ್ರಿಲ್ ಮತ್ತು ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಿದೆ ಎಂದು ತಿಳಿದುಬಂದಿದೆ. ಈ ಚುನಾವಣೆಯಲ್ಲಿ ಕೂಡ ಆಡಳಿತರೂಢ ಬಿಜೆಪಿ(BJP)ಯು ಗೆಲುವು ಸಾಧಿಸಲಿದೆ. ಅಂದರೆ ಬಿಜೆಪಿಯು ಬಹುಮತದೊಂದಿಗೆ ಅಧಿಕಾರವನ್ನು ಮತ್ತೆ ಹಿಡಿಯಲಿದ್ದು ಈ ಮೂಲಕ ಮೋದಿ(PM Modi) ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂದು ಹೇಳಿದೆ. ಆದರೂ ಕೂಡ ಈ ಚುನಾವಣೆಯಲ್ಲಿ ದೊರಕುವ ಬಹುಮತದ ಪ್ರಮಾಣವು ಆಡಳಿತದ ಸುಧಾರಣಾ ಕಾರ್ಯಸೂಚಿಯ ಮೇಲೆ ಪ್ರಭಾವ ಬೀರಬಹುದು ಎಂದೂ ಅದು ಹೇಳಿದೆ.

Advertisement

Advertisement
Advertisement