For the best experience, open
https://m.hosakannada.com
on your mobile browser.
Advertisement

Parliment Election : ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ಲೋಕಸಭಾ ಅಭ್ಯರ್ಥಿ ಇವರು - ಒಟ್ಟು ಆಸ್ತಿ 5785 ಕೋಟಿ !!

Parliment Election : ದೇಶದಲ್ಲಿ ಲೋಕಸಭಾ ಚುನಾವಣೆ(Parliment Election ) ಕಾವು ಜೋರಿದೆ. ದೇಶದ ಕೆಲವೆಡೆ ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದೆ
12:46 PM Apr 24, 2024 IST | ಸುದರ್ಶನ್
UpdateAt: 12:48 PM Apr 24, 2024 IST
parliment election   ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ಲೋಕಸಭಾ ಅಭ್ಯರ್ಥಿ ಇವರು   ಒಟ್ಟು ಆಸ್ತಿ 5785 ಕೋಟಿ
Advertisement

Parliment Election : ದೇಶದಲ್ಲಿ ಲೋಕಸಭಾ ಚುನಾವಣೆ(Parliment Election ) ಕಾವು ಜೋರಿದೆ. ದೇಶದ ಕೆಲವೆಡೆ ಈಗಾಗಲೇ ಮೊದಲ ಹಂತದ ಚುನಾವಣೆ ನಡೆದಿದೆ. ಮುಂದಿನ ಹಂತದ ಚುನಾವಣೆಗಳಿಗೆ ತಯಾರಿ ನಡೆದಿದೆ. ಈ ನಡುವೆ ಕಣದಲ್ಲಿರುವ ಕೆಲವು ಅಭ್ಯರ್ಥಿಗಳು ವಿಶೇಷ ವಿಚಾರಗಳಿಂದ ಗಮನ ಸೆಳೆಯುತ್ತಿದ್ದಾರೆ. ಅಂತೆಯೇ ಇದೀಗ ಇಡೀ ದೇಶದಲ್ಲಿ ಅತ್ಯಂತ ಶ್ರೀಮಂತ ಲೋಕಸಭಾ ಅಭ್ಯರ್ಥಿ(Parliament Candidate) ಯಾರೆಂದು ನಾವು ನಿಮಗೆ ಹೇಳುತ್ತೇವೆ.

Advertisement

ಇದನ್ನೂ ಓದಿ:  Government Job: ಈ ಕೋರ್ಸ್ ಮಾಡಿದ್ರೆ ಸಾಕು, ಸರ್ಕಾರಿ ನೌಕರಿ ಸಿಗೋದು ಫಿಕ್ಸ್!

ಹೌದು, ಲೋಕಸಭಾ ಚುನಾವಣೆಗೆ ಅಫಿಡವಿಟ್(Affidavit) ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಮ ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ಬಗ್ಗೆ ಘೋಷಣೆ ಮಾಡಬೇಕು. ಅಂತೆಯೇ ಸಲ್ಲಿಸಿದ ದಾಖಲೆಗಳ‌ ಪ್ರಕಾರ ಆಂಧ್ರಪ್ರದೇಶದ ಗುಂಟೂರು ಟಿಡಿಪಿ(TDP) ಅಭ್ಯರ್ಥಿ ಪೆಮ್ಮಸಾಮಿ ಚಂದ್ರಶೇಖರ್(Pemmaswamy Chandrashekar) ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.. ಇವರು ಬರೋಬ್ಬರಿ 5,785 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ:  Marigold Flower : ಮಾರಿಗೋಲ್ಡ್ ಹೂವು ಯಾವ ದೇಶದಲ್ಲಿ ಮೊದಲು ಅರಳಿತು ಗೊತ್ತಾ? : ಇವುಗಳಲ್ಲಿನ ಎಷ್ಟು ಔಷಧೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ವೃತ್ತಿಯಲ್ಲಿ ವೈದ್ಯ:

ಟಿಡಿಪಿ ಅಭ್ಯರ್ಥಿ ಘೋಷಣೆ ಮಾಡಿಕೊಂಡಂತೆ, ಅಮೆರಿಕದಲ್ಲಿ‌ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಮೂಲ ಗುಂಟೂರು ಜಿಲ್ಲೆಯ ಬುರ್ರಿಪೊಲಂ ಆದ ಅಪೆಮ್ಮಸಾಮಿ ಚಂದ್ರಶೇಖರ್ ಅನಿವಾಸಿ ಭಾರತೀಯನಾಗಿದ್ದು, ಅಮೆರಿಕಾದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ. ಹೀಗಾಗಿ ನಿನ್ನೆ(ಏ.23) ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಅವರು ಅವರು ಭಾರಿ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.

Advertisement
Advertisement
Advertisement