For the best experience, open
https://m.hosakannada.com
on your mobile browser.
Advertisement

Parliment Election : ಬಿಜೆಪಿ ಸೋಲಿನ ಪ್ರಮುಖ ಕಾರಣಗಳಿವು !!

Parliment Election :ಮುಳುಗಿ ಹೋಗುತ್ತಿದ್ದ ಕಾಂಗ್ರೆಸ್(Congress) ಗೆ ಮತ್ತೆ ಮರುಜೀವವನ್ನೂ ನೀಡಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಮತ್ತೆ ಸಮ್ಮಿಶ್ರ ಸರ್ಕಾರಕ್ಕೆ ರೆಡ್ ಕಾರ್ಪರೇಟ್ ಕೂಡ ಹಾಸಿದ್ದಾರೆ.
07:29 AM Jun 06, 2024 IST | ಸುದರ್ಶನ್
UpdateAt: 07:29 AM Jun 06, 2024 IST
parliment election   ಬಿಜೆಪಿ ಸೋಲಿನ ಪ್ರಮುಖ ಕಾರಣಗಳಿವು
Advertisement

Parliment Election : ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದ ಜನರು ನಿರೀಕ್ಷೆ ಮಾಡಿರದ ಫಲಿತಾಂಶ(Result) ಹೊರಬಿದ್ದಿದೆ. ಮೂರನೇ ಸಲಕ್ಕೂ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇನೆಂದು ಭೀಗುತ್ತಿದ್ದ ಬಿಜೆಪಿ ಸೊಕ್ಕನ್ನು ದೇಶದ ಮತದಾರರು 80 ದಿನಗಳಲ್ಲಿ ಮುರಿದುಬಿಟ್ಟಿದ್ದಾರೆ. ಅಲ್ಲದೆ ಮುಳುಗಿ ಹೋಗುತ್ತಿದ್ದ ಕಾಂಗ್ರೆಸ್(Congress) ಗೆ ಮತ್ತೆ ಮರುಜೀವವನ್ನೂ ನೀಡಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಮತ್ತೆ ಸಮ್ಮಿಶ್ರ ಸರ್ಕಾರಕ್ಕೆ ರೆಡ್ ಕಾರ್ಪರೇಟ್ ಕೂಡ ಹಾಸಿದ್ದಾರೆ.

Advertisement

ಹೌದು, ಈ ಸಲದ ಚುನಾವಣೆಯಲ್ಲಿ ಬಿಜೆಪಿ(BJP) ಸೊಕ್ಕು ಮುರಿದಿದೆ. ಪ್ರಜಾಸತ್ತಾತ್ಮಕವಾದ ದೇಶದಲ್ಲಿ ತಾನಿದ್ದೇನೆ ಎಂಬುದನ್ನು ಮರೆತು ಅತಿರೇಕವಾಗಿ ವರ್ತಿಸುತ್ತಿದ್ದ ಬಿಜೆಪಿಯ ಸೊಕ್ಕು ಮಾತ್ರವಲ್ಲ, ಬ್ಯಾನರ್ಜಿ ಹೇಳಿದಂತೆ ಬೆನ್ನು ಮೂಳೆಯೂ ಮುರಿದಿದೆ. ಈಗಲೂ ನಾನೆ, ಇನ್ನು ಮುಂದೆಯೂ ನಾನೆ ಎನ್ನುವ ಬಿಜೆಪಿಗೆ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿ ಕೂಟವು ಪ್ರಬಲವಾಗಿ ಸವಾಲೊಡ್ಡುವಲ್ಲಿ ಯಶಸ್ವಿಯಾಗಿದೆ. ಹಾಗಿದ್ರೆ ಬಿಜೆಪಿ ಸೋತದ್ದು ಹೇಗೆ, ಎಲ್ಲಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಿಜೆಪಿ ಸೋಲಲು ಕಾರಣವಾದ ಪ್ರಮುಖ ಅಂಶಗಳು:
1. ಸಂವಿಧಾನ ಬದಲಾವಣೆ ಹೇಳಿಕೆ: ಬಿಜೆಪಿ ಸೋಲಿಗೆ ಅತೀ ಪ್ರಮುಖ ಕಾರಣ ಅಂದ್ರೆ ಅದು ಸಂವಿಧಾನ ಬದಲಾವಣೆ ಹೇಳಿಕೆ. ಸ್ವ ಪಕ್ಷದ ಅದೂ ಅತೀ ಪ್ರಮುಖ ನಾಯಕರು ನೀಡಿದ ಸಂವಿದಾನ ಬದಲಾವಣೆ ಹೇಳಿಕೆ ಬಿಜೆಪಿಯನ್ನು ಹೀನಾಯವಾಗಿ ಮಲಗಿಸಿಬಿಟ್ಟಿತು. ಇದು ದೇಶಾದ್ಯಂತ ಸುದ್ದಿಯಾಯಿತು. ಎಷ್ಟರ ಮಟ್ಟಿಗೆ ಅಂದ್ರೆ ಜನರೇ ಬದಲಾಗುವಂತೆ. ಜೊತೆಗೆ ಇದನ್ನು ವಿರೋಧ ಪಕ್ಷಗಳು ಪ್ರಬಲ ಅಸ್ತ್ರವಾಗಿ ಬಳಸಿಕೊಂಡವು. ತಮ್ಮ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡವು. ಇದು ಸಂವಿಧಾನ ಉಳಿವು ಪ್ರಮುಖವಾದುದು ಎನ್ನುವ ಹೊಸ ಚರ್ಚೆಯನ್ನು ಹುಟ್ಟುಹಾಕಿತು.

Advertisement

2. ಮೋದಿ ಬಾಷಣ ಹಾಗೂ ಸಂದರ್ಶನಗಳು:
ಪ್ರಧಾನಿ ಮೋದಿ(PM Modi) ಅವರ ಭಾಷಣಗಳು ಹಾಗೂ ಅವರು ವಿವಿಧ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನಗಳೇ ಅವರಿಗೆ ಮುಳುವಾದವು. ಯಾಕೆಂದರೆ ಅವೆಲ್ಲವೂ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಿದ್ದವು. ಜೊತೆಗೆ, ಈ ಭಾಷಣ ಹಾಗೂ ಸಂದರ್ಶನಗಳೇ ಬಿಜೆಪಿಯ ಚುನಾವಣಾ ವಿಚಾರಗಳೇ ಆಗಿವೆಯೇನೋ ಎಂಬಂತೆ ಉದುದ್ದಕ್ಕೂ ಕಂಡುಬಂದಿತು.

ಅಲ್ಲದೆ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸುವ ವಿಚಾರಗಳಿಗೆ ವಿರುದ್ಧವಾದ ಅಭಿಪ್ರಾಯವನ್ನು ಖುದ್ದು ಮೋದಿ ಅವರೇ ತಮ್ಮ ಸಂದರ್ಶನಗಳಲ್ಲಿ ನೀಡಿದ್ದು ಪಕ್ಷಕ್ಕೆ ತುಸು ಮುಜುಗರವನ್ನೇ ಉಂಟು ಮಾಡಿತು. ಉದಾಹರಣೆಗೆ ಹೇಳುವದಾದರೆ ಚುನಾವಣೆ ಹತ್ತಿರ ಬರುತ್ತಿದೆ ಎಂದಾಗ ಎಲ್ಲಾ ಭಾಷಣಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸಿ ಮಾತನಾಡುತ್ತಿದ್ದ ಮೋದಿ, ಸಂದರ್ಶನದಲ್ಲಿ ತಾನು ಮುಸ್ಲಿಂ ವಿರೋಧಿ ಅಲ್ಲ, ಧರ್ಮಾಧಾರಿತವಾಗಿ ರಾಜಕೀಯ ಮಾಡುವುದಿಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದರು. ದೇವರು ತನ್ನನ್ನು ಯಾವುದೋ ಕಾರ್ಯಸಾಧನೆಗಾಗಿಯೇ ಕಳುಹಿಸಿದ್ದಾರೆ ಎನ್ನಿಸುತ್ತಿದೆ ಎಂದು ಪ್ರಧಾನಿ ಅವರು ಹೇಳಿದ್ದು ಯಾಕೋ ಅತಿರೇಕ ಅನಿಸಿತ್ತು.

3. ಮುಳವಾದ ಬಿಜೆಪಿ ನಾಯಕನ ಹೇಳಿಕೆ:
ಪುರಿಯ ಜಗನ್ನಾಥನು ಪ್ರಧಾನಿ ಮೋದಿ ಅವರ ಭಕ್ತ ಎಂದು ಪಕ್ಷದ ನಾಯಕ ಸಂಬಿತ್ ಪಾತ್ರಾ ಅವರು ಹೇಳಿಕೆ ನೀಡಿದ್ದು (ಬಾಯಿತಪ್ಪಿನಿಂದ ಹೇಳಿದ್ದಾಗಿ ಅವರು ನಂತರ ಹೇಳಿಕೆ ನೀಡಿದರು) ಹಾಸ್ಯಾಸ್ಪದವಾಯಿತು. ಇದು ಎಷ್ಟೋ ಭಕ್ತರ ಭಾವನೆಗೆ ನೇರವಾಗಿ ನಾಟಿತು. ವಿರೋಧ ಪಕ್ಷಗಳು, ಸಿನಿ ನಟರು, ಸೆಲೆಬ್ರಿಟಿಗಳ ಇದನ್ನು ಮೋದಿ ವಿರುದ್ಧ ದೊಡ್ಡ ಅಸ್ತ್ರವಾಗಿ ಬಳಸಿದರು.

4. ಅತಿರೇಕವಾದ ಮುಸ್ಲಿಂ ವಿರೋಧ:
ಬಿಜೆಪಿ ಪ್ರಮುಖ ಅಜೆಂಡವೇ ಮುಸ್ಲಿಂ ವಿರೋಧಿ ಎನ್ನುವಂತಿತ್ತು ಈ ಸಲದ ಪ್ರಚಾರ. ಪ್ರಚಾರವು ಬರೀ ಮುಸ್ಲಿಂ ವಿರೋಧಕ್ಕಷ್ಟೇ ಸೀಮಿತವಾಯಿತು. ದೇಶದೆಲ್ಲೆಡೆ 370ನೇ ವಿಧಿ ರದ್ದತಿಯ ಕುರಿತು ಮಾತ್ರ ಬಿಜೆಪಿ ಪ್ರಚಾರ ಮಾಡಿತು. ಅದುವೇ ನಮ್ಮ ದೊಡ್ಡ ಸಾಧನೆ ಎಂದು ಬಿಬಿಂಬಿಸಿತು.

5 . ಈ ವಿಚಾರಗಳ ಪ್ರಸ್ತಾಪವೇ ಆಗಲಿಲ್ಲ:
ತಮ್ಮ ಅಭಿವೃದ್ಧಿ ಕಾರ್ಯಗಳೇನು? ಇದುವರೆಗೂ ಏನು ಮಾಡಿದ್ದೇವೆ? ಮುಂದೆ ಏನು ಮಾಡುತ್ತೇವೆ. ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಿದ್ದೆವೆ? ರೈತರಿಗೆ ಏನು ಅನುಕೂಲ ಮಾಡಿದ್ದೇವೆ? ಜನರ ಕಲ್ಯಾಣಕ್ಕಾಗಿ ಏನು ಯೋಜನೆ ತಂದಿದ್ದೇವೆ? ಮುಂದೆ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ? ಎಂಬ ಯಾವೊಂದು ಅಂಶವೂ ಅವರ ಭಾಷಣಗಳಲ್ಲಿ ಇರಲಿಲ್ಲ. ಬರೀ ಮುಸ್ಲಿಂ ಮೀಸಲಾತಿ, ರಾಮ ಮಂದಿರ, ಹಿಂದುತ್ವ, ಹಿಂದೂ ಧರ್ಮ, ಪಿಒಕೆ ಪಡೆಯುತ್ತೇವೆ, ಮಸೀದಿ ಒಡೆಯುತ್ತೇವೆ, ದೇವಾಲಯ ಜೀರ್ಣೋದ್ಧಾರ ಮಾಡುತ್ತೇವೆ ಎಂಬ ವಿಚಾರ ಬಿಟ್ಟರೆ ಜನರ ಉದ್ದಾರಕ್ಕಾಗಿ ಏನು ಮಾಡುತ್ತೇವೆ ಎಂಬ ಯಾವ ಅಂಶಗಳು ಲವಲೇಶವಾಗಿಯೂ ಅವರಲ್ಲಿರಲಿಲ್ಲ.

6. ಸತ್ಯವನ್ನು ಜನರಿಗೆ ತಲುಪಿಸಲಿಲ್ಲ
ಬಿಜೆಪಿಗರ ಅಭಿವೃದ್ಧಿ ಸಾಕಷ್ಟಿದೆ. 10 ವರ್ಷಗಳಲ್ಲಿ ದೇಶ ಉತ್ತಮ ಅಭಿವೃದ್ಧಿ ಕಂಡಿರುವುದು ಸತ್ಯ. ಜಗತ್ತು ಭಾರತವನ್ನು ನೋಡುವ ದೃಷ್ಟಿಯೇ ಬದಲಾಲದದ್ದು ಸತ್ಯ. ತಕ್ಕ ಮಟ್ಟಿಗೆ ಜನರ ಬದುಕು ಸುಧಾರಿಸಿದ್ದು, ಭ್ರಷ್ಟಾಚಾರ ನಿರ್ಮೂಲನೆ ಆದದ್ದು ಎಲ್ಲದೂ ಸತ್ಯ. ಆದರೆ ಅದೆಲ್ಲವನ್ನೂ ಬಿಜೆಪಿ ಜನರಿಗೆ ಮುಟ್ಟಿಸಲಿಲ್ಲ. ಬರೀ ಹಿಂದುತ್ವ ಎನ್ನುತ್ತ ಜನರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ನೋಡಿತು. ಆದರೆ ಜನ ಬುದ್ಧಿವಂತರು. ಲಾಭ-ನಷ್ಪಗಳನ್ನು ಅಳೆಯುತ್ತಾರೆ, ಹೊಟ್ಟೆ ಪಾಡು ನೋಡುತ್ತಾರೆ ಹೊರತು, ತಮ್ಮ ಮಕ್ಕಳ ಭವಿಷ್ಯವನ್ನು ನೋಡುತ್ತಾರೆ ಹೊರತು ಧಾರ್ಮಿಕ ದೃಷ್ಟಿಯಿಂದ ಯಾವ ನಾಯಕನ ಆಯ್ಕೆಗೂ ಮುಂದಾಗಲ್ಲ. ನಮಗಾಗಿ ಏನು ಮಾಡಿದ್ದಾರೆ, ಮಾಡುತ್ತಾರೆ ಎಂಬುದು ಮುಖ್ಯ. ಈ ಸಲ ಜನ ಬಯಸಿದ್ದು, ಮಾಡಿದ್ದು, ಪ್ರತಿಫಲ ನೀಡಿದ್ದು ಅದನ್ನೆ.

ಕರ್ನಾಟಕದದಲ್ಲೂ ಹಾಗೆ ಕೆಲವು ನಾಯಕರು ನಿಮಗೆ ಟಿಪ್ಪು ಬೇಕೋ, ಇಲ್ಲಾ ಕೆಂಪೇಗೌಡ ಬೇಕೋ ನಿರ್ಧರಿಸಿ ಎಂದು ಗಂಟಲು ಹರಿಯುವ ಹಾಗೆ ಕಿರಚುತ್ತಿದ್ದರು. ಇದು ಯಾರಿಗೆ ಬೇಕು ಸ್ವಾಮಿ. ಅವರು ಸತ್ತು ನೂರಾರು ವರ್ಷ ಕಳೆದಿದೆ. ಅವರ ಬಗ್ಗೆ ಮಾತಾಡಿ ಏನು ಪ್ರಯೋಜನ. ಅಭಿವೃದ್ಧಿ ಬಗ್ಗೆ ಮಾತಾಡಿ. ಮುಂದಿನ ಕಾರ್ಯಗಳ ಬಗ್ಗೆ ಬೊಬ್ಬಿರಿಯಿರಿ. ಅದು ಬಿಟ್ಟು ಧರ್ಮಾಧಾರಿತವಾಗಿ ರಾಜಕೀಯ ಏಕೆ? ಹೀಗಾಗಿ ಜನ ನಮಗೆ ಗ್ಯಾರಂಟಿ ಬೇಕು, ಬದುಕು ಬೇಕು ಎನ್ನುತ್ತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದದ್ದು.

7. ಅಂಬಾನಿ, ಆದಾನಿ ವಿಚಾರದ ಬಗ್ಗೆ ಪ್ರಧಾನಿ ವಹಿಸಿದ್ದ ಮೌನ:
ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಳೆದ ಎರಡು-ಮೂರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದಾರೆ. ಇದಕ್ಕಾಗಿಯೇ ತಮ್ಮ ಸಂಸತ್ ಸದಸ್ಯತ್ವವನ್ನು ಕಸಿದುಕೊಳ್ಳಲಾಯಿತು. ಇಷ್ಟೆಲ್ಲಾ ಆಪಾದನೆ ಮಾಡಿದರೂ ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಗಲಿ ಪ್ರಧಾನಿ ಆಗಲಿ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನಲಿಲ್ಲ. ಇದು ಮೌನಂ ಸಮ್ಮತಿ ಲಕ್ಷಣವಾಗಿ ಜನ ಸ್ವೀಕರಿಸಿದರು.

8. ಐಟಿ, ಇಡಿಯ ಅತಿರೇಕದ ದಾಳಿ:
IT, ED ದೇಶದ ಸರ್ವೋಚ್ಚ ಸಂಸ್ಥೆಗಳಲ್ಲಿ ಪ್ರಮುಖವಾದವು. ಅದು ಅನ್ಯಾಯ, ಭ್ರಷ್ಟಾಚಾರವನ್ನು ಹುಡುಕಿ ಮಟ್ಟಹಾಕಲೇ ಇರುವುದು. ಅಂತೆಯೇ ಅವುಗಳ ಕೆಲಸವನ್ನು ತಪ್ಷದೆ ಅವು ನಿರ್ವಹಿಸಿದವು. ಆದರೆ ಕಾಂಗ್ರೆಸ್ ಹಾಗೂ ವಿಪಕ್ಷಗಳ ನಾಯಕರನ್ನು ಮಾತ್ರ. ಇಡೀ ದೇಶದಲ್ಲಿ ಯಾವೊಬ್ಬ ಬಿಜೆಪಿ ನಾಯಕನ ಮನೆಯಮೇಲೂ ದಾಳಿ ನಡೆಯಲಿಲ್ಲ. ಹಾಗಿದ್ರೆ ಬಿಜೆಪಿಯವರೆಲ್ಲರೂ ಸತ್ಯವಂತರೆ? ಇದು ಎಷ್ಟು ತಾರತಮ್ಯವಾಗಿತ್ತು ಎಂಬುದು ದೇಶದ ಸಣ್ಣ ಮಕ್ಕಳಿಗೂ ತಿಳಿಯುತ್ತಿತ್ತು. ಇದು ಅತಿರೇಕವಾದಾಗ ಜನ ಮನದಲ್ಲೀಯೇ ವಿರೋಧಿಸಿ, ಮತದ ಮೂಲಕ ಬುದ್ದಿ ಕಲಿಸಿದರು.

8. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಿಜೆಪಿ ಮಾಡಿದ ಪ್ರಜಾಪ್ರಭುತ್ವದ ಕಗ್ಗೋಲೆ:
ಕರ್ನಾಟಕ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೋಲೆಯನ್ನೇ ಮಾಡಿದೆ. ಹೌದು, ಪ್ರಜಾಪ್ರಭುತ್ವ ಅಂದರೆ ಪ್ರಜೆಗಳು ಆರಿಸಿದ ಪ್ರತಿನಿಧಿಗಳು ತಮ್ಮನ್ನು ಆಳಬೇಕು. ಆದರೆ ಈ ಬಿಜೆಪಿ ಕೆಲವು ನಾಲಾಯಕ್ಕು ನಾಯಕರು, ಶಾಸಕರು-ಮಂತ್ರಿಗಳನ್ನು ಕೊಂಡುಕೊಂಡು ಮೂರು ರಾಜ್ಯಗಳಲ್ಲಿ ಸರ್ಕಾರ ಕೆಡವಿ ತಮ್ಮ ಬೇಳೆ ಬೇಯಿಸಿಕೊಂಡರು. ಮಹಾರಾಷ್ಟ್ರದಲ್ಲಂತೂ ಅತಿರೇಕವಾಗಿ ನಡೆದುಕೊಂಡರು. ದೇಶದವನ್ನು ಉದ್ಧಾರ ಮಾಡುತ್ತೇವೆಂದು ಬಡಾಯಿ ಕೊಚ್ಟುವ ಇವರು, ಮೂರು ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೊಂದು ಬಿಟ್ಟರು. ಹೀಗಾಗಿ ಇದರ ಪ್ರತಿಫಲ ಇಂದು ಅನುಭವಿಸುತ್ತಿದ್ದಾರೆ. ಕರ್ಮ ರಿಟರ್ನ್ಸ್ ಅನ್ನೋದು ಸುಮ್ಮನೆಯಾ ಹೇಳಿ.

ಈಗ ಮೋದಿ ಏನೇ ಕಸರತ್ತು ಮಾಡಿ ಸರ್ಕಾರ ರಚಿಸಿದರೂ ಇದು ಅಸ್ತಿತ್ವವೇ ಇಲ್ಲದಾಗಿರುತ್ತದೆ. ಯಾವಾಗ ಬಿದ್ದುಹೋಗುತ್ತದೆ ಎಂದು ಹೇಳದ ಸ್ಥಿತಿಯಲ್ಲಿ ಮುನ್ನಡೆಯುತ್ತದೆ. ಯಾಕೆಂದರೆ ಈಗ NDA ಬೆಂಬಲಿಸಿರುವ ಇಬ್ಬರು ಮಹಾನ್ ನಾಯಕರು ಅಂತವರು. ಇನ್ನಾದರು ಮೋದಿ ಆಗಲಿ, ಬಿಜೆಪಿ ಆಗಲಿ ಜನರ ನಾಡಿಮಿಡಿತ ಅರಿತು ನಡೆದರೆ ಒಳಿತು. ಅದು ಬಿಟ್ಟು ಹಿಂದೂ, ಹಿಂದುತ್ವ, ಮುಸ್ಲಿಂ ವಿರೋದಿ, ರಾಮಂದಿರ, ಪಿಒಕೆ, ಕಾಶ್ಮೀರ, ದೇವತಾ ಪುರುಷ ಅಂತ ಹೋದರೆ 240 ಅಲ್ಲ, 50 ಸೀಟು ಗೆಲ್ಲುವುದು ಕಷ್ಟವಾಗಬಹುದು. ಅದೆಲ್ಲವೂ ಇರಬೇಕು, ಆದರೆ ಆಡಳಿತವನ್ನೇ ಅದರ ಮೂಲಕ ನಡೆಸುವುದಲ್ಲ.

ಈಗ ಜನ ಬುದ್ಧಿವಂತರು. ಭಾವನೆಗಳಿಗೆ ಒಳಗಾಗುವುದಿಲ್ಲ. ಆರಂಭದಲ್ಲಿ ಹೇಳಿದಂತೆ ಅವರು ಸುಂದರ ಭವಿಷ್ಯ ಕಾಣುವರು. ಅದಕ್ಕೆ ಉದಾಹರಣೆ 303 ಇದ್ದ ಬಿಜೆಪಿ, 240 ಕ್ಕೆ ಕುಸಿದಿರುವುದು. ಒಂದು ಸಲ ರ್ಯಾಲಿಯಲ್ಲಿ, ಮೆರವಣಿಗೆಯಲ್ಲಿ ಹಿಂದೂ, ಹಿಂದೂ ಎಂದು ಕುಣಿದರೆ ಅವರು ಮರುಳಾಗಿದ್ದಾರೆ ಎಂದಲ್ಲ. ನಮಗೂ ಒಂದು ಬದುಕಿದೆ ಎಂಬದು ಅವರಿಗೆ ತಿಳಿದಿರುತ್ತದೆ. ಇದು ಮೋದಿ ಅರ್ಥೈಸಬೇಕು. ನಾನು ಏನೂ ಮಾಡಿದರೂ ಅದು ಸೈ ಎಂದರೆ ಜನ ಬೇರೆಯವರಿಗೆ ಜೈ ಅನ್ನುತ್ತಾರೆ ಎಂಬುದನ್ನೂ ಅರಿಯಬೇಕು.

Advertisement
Advertisement
Advertisement