For the best experience, open
https://m.hosakannada.com
on your mobile browser.
Advertisement

Parliment Election : ಬಿಜೆಪಿ ಸೇರಿದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ !!

Parliament Election: ಕಾಂಗ್ರೆಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು ಕಾಂಗ್ರೆಸ್ ಪಾರ್ಟಿಗೆ ಮುಜುಗರ ಆಗುವಂತೆ ಮಾಡಿದ್ದಾರೆ. 'ಕೈ' ಬಿಟ್ಟು ಕಮಲ ಹಿಡಿದಿದ್ದಾರೆ ಎನ್ನಲಾಗಿದೆ.
11:37 AM Apr 30, 2024 IST | ಸುದರ್ಶನ್
UpdateAt: 11:40 AM Apr 30, 2024 IST
parliment election   ಬಿಜೆಪಿ ಸೇರಿದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ
Advertisement

Parliment Election : ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ(Parliment Election) ಕಾಂಗ್ರೆಸ್ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದು ಕಾಂಗ್ರೆಸ್ ಪಾರ್ಟಿಗೆ ತೀವ್ರ ಮುಜುಗರ ಆಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು 'ಕೈ' ಬಿಟ್ಟು ಕಮಲ ಹಿಡಿದಿದ್ದಾರೆ ಎನ್ನಲಾಗಿದೆ.

Advertisement

ಇದನ್ನೂ ಓದಿ:  Bank Rules: ಗ್ರಾಹಕರೆ ಗಮನಿಸಿ - ಮೇ ತಿಂಗಳಲ್ಲಿ ಬದಲಾಗಲಿವೆ ಬ್ಯಾಂಕಿನ ಈ ನಿಯಮಗಳು !!

ಹೌದು, ಪ್ರದೇಶದ ಇಂದೋರ್(Indhore) ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಇಂದು ( ಏ 29), ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಭಾಮ್ ತಮ್ಮ ನಾಮಿನಿಶೇನ್ ಅನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಪ್ರದೇಶದ ಸಚಿವ ಮತ್ತು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ (Kailash Vijayvargiya) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡು ‘ಪಕ್ಷಕ್ಕೆ ಸ್ವಾಗತ’ ಎಂದು ಬರೆದಿದ್ದಾರೆ.

Advertisement

ಇದನ್ನೂ ಓದಿ:  Business Tips: ಹೀಗೆ ಮಾಡಿದ್ರೆ ಸಾಕು, ದಿನಕ್ಕೆ 2,500 ರೂಪಾಯಿ ಗಳಿಸಬಹುದು!

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ರಾಜ್ಯಾಧ್ಯಕ್ಷ ವಿಡಿ ಶರ್ಮಾ ನೇತೃತ್ವದಲ್ಲಿ ಇಂದೋರ್‌ನ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಗುಜರಾತ್ ನಲ್ಲೂ ನಡೆದಿತ್ತು ಈ ಬೆಳವಣಿಗೆ: 

ಗುಜರಾತ್ ರಾಜ್ಯದ ಸೂರತ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿಲೇಶ್ ಕುಂಭಾನಿಯ ನಾಮಪತ್ರ ತಿರಸ್ಕೃತಗೊಂಡಿತ್ತು, ಕಣದಲ್ಲಿದ್ದ ಇತರ ಅಭ್ಯರ್ಥಿಗಳು ಒಬ್ಬರಿಗೊಬ್ಬರಂತೆ ನಾಮಪತ್ರ ಹಿಂದಕ್ಕೆ ಪಡೆದ ನಂತರ, ಅಲ್ಲಿನ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದರು.

Advertisement
Advertisement
Advertisement