For the best experience, open
https://m.hosakannada.com
on your mobile browser.
Advertisement

Parishad Election: ಸುಮಲತಾಗೆ ಕೈ ಕೊಟ್ಟು ಸಿ ಟಿ ರವಿ ಕೈ ಹಿಡಿದ ಬಿಜೆಪಿ !!

Parishad Election: ಬಿಜೆಪಿ ತನ್ನ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಿದ್ದು ಸಿ.ಟಿ ರವಿ ಸೇರಿ ಮೂವರು ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಆದರೆ ಸುಮಲತಾ ಅಂಬರೀಷ್ ಗೆ ದೊಡ್ಡ ಶಾಕ್ ನೀಡಿದೆ.
02:04 PM Jun 02, 2024 IST | ಸುದರ್ಶನ್
UpdateAt: 02:07 PM Jun 02, 2024 IST
parishad election  ಸುಮಲತಾಗೆ ಕೈ ಕೊಟ್ಟು ಸಿ ಟಿ ರವಿ ಕೈ ಹಿಡಿದ ಬಿಜೆಪಿ
Advertisement

Parishad Election: ಲೋಕಸಭಾ ಚುನಾವಣೆ ಕಾವು ತಣ್ಣಗಾಗುತ್ತಿದ್ದಂತೆ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರುತ್ತಿದೆ. ಪಕ್ಷಗಳು ಅಳೆದು-ತೂಗಿ ಟಿಕೆಟ್ ಕೂಡ ಘೋಷಣೆ ಮಾಡುತ್ತಿವೆ. ಅಂತೆಯೇ ಇದೀಗ ಬಿಜೆಪಿ ತನ್ನ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡಿದ್ದು ಸಿ.ಟಿ ರವಿ ಸೇರಿ ಮೂವರು ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಆದರೆ ಸುಮಲತಾ ಅಂಬರೀಷ್ ಗೆ ದೊಡ್ಡ ಶಾಕ್ ನೀಡಿದೆ.

Advertisement

ಹೌದು, ಪರಿಷತ್‌ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧೆಗೆ ಮಾಜಿ ಸಚಿವ ಸಿ.ಟಿ ರವಿ(CT Ravi), ಎನ್. ರವಿಕುಮಾರ್(Ravi Kumar) ಮತ್ತು ಎಂ.ಜಿ ಮೂಳೆ(M g Mule) ಅವರಿಗೆ ಅವಕಾಶ ಸಿಕ್ಕಿದೆ. ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಮೂರು ಅಭ್ಯರ್ಥಿಗಳನ್ನು ಘೋಷಿಸಿದೆ. ಸುಮಲತಾ ಗೆ ಟಿಕೆಟ್ ಕೊಡುತ್ತೆ ಎಂಬ ಸುದ್ದಿ ಹಬ್ಬಿದ್ದರೂ ಅದು ಈಗ ಸುಳ್ಳಾಗಿದೆ.

ಇದನ್ನೂ ಓದಿ: Weekend Fun: ಹೋದದ್ದು ವೀಕೆಂಡ್‌ ಫನ್ ಮಾಡಲು! ಆಗಿದ್ದು ಇಬ್ಬರು ಬಾಲಕಿಯರ ದಾರುಣ ಸಾವು!

Advertisement

ಸುಮಲತಾ ಟಿಕೆಟ್ ಮಿಸ್:
ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿ, ಹೈಕಮಾಂಡ್ ಗೆ ಎದರಾಡದೆ ತಮ್ಮ ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಟುಕೊಟ್ಟ ಸುಮಲತಾ ಅಂಬರೀಷ್(Sumalatha Ambarish) ಅವರಿಗೆ ಈ ಸಲದ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿ ಬಿಜೆಪಿ ಬಿಗ್ ಗಿಫ್ಟ್ ನೀಡುತ್ತದೆ ಎಂದು ಭಾರೀ ಸುದ್ದಿಯಾಗಿತ್ತು. ಆದರೀಗ ಸುಮಲತಾಗೆ ಟಿಕೆಟ್ ಮಿಸ್ ಆಗಿದೆ.

ಸಿ ಟಿ ರವಿ ಕೈ ಹಿಡಿದ 'ಕಮಲ':
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡು, ಬಳಿಕ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಟಿಕೆಟ್ ಮೇಲೆ ಆಸೆಯಿರಿಸಿ ನಿರಾಸೆಯಾಗಿದ್ದ ಸಿಟಿ ರವಿ ಅವರಿಗೆ ಕೊನೆಗೂ ಬಿಜೆಪಿ ಕೈ ಹಿಡಿದಿದ್ದು ರವಿಗೆ ಬಂಪರ್ ಗಿಫ್ಟ್​ ಸಿಕ್ಕಿದೆ.

ಇದನ್ನೂ ಓದಿ: 2019ರಲ್ಲಿ ಫಲಿತಾಂಶದ ಬಗ್ಗೆ ಪಕ್ಕಾ ಭವಿಷ್ಯ ನುಡಿದದ್ದು ಈ ಎರಡು ವಾಹಿನಿಗಳು ಮಾತ್ರ !!

Advertisement
Advertisement
Advertisement