Bantwala: ಬಂಟ್ವಾಳ; ಚುನಾವಣಾ ಕರ್ತವ್ಯದಲ್ಲಿದ್ದ ಪಂಚಾಯತ್ ಕಾರ್ಯದರ್ಶಿ ನಾಪತ್ತೆ
Bantwala: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಯೊಬ್ಬರು ಕಾಣೆಯಾಗಿರುವ ಕುರಿತು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ - ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಪ್ರಮುಖ ಆರೋಪಿ !!
ಅತ್ತ ಕರ್ತವ್ಯಕ್ಕೂ ಹೋಗದೆ, ಇತ್ತ ಮನೆಗೂ ಬಾರದೇ ಕಾಣೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಕುರಿತು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಕೊಲ್ಪೆದಬೈಲು ನಿವಾಸಿ ಲಕ್ಷ್ಮೀನಾರಾಯಣ ಎಂಬುವವರೇ ಕಾಣೆಯಾದ ವ್ಯಕ್ತಿ. ಬುಧವಾರ (ಮಾ.27) ಮಧ್ಯಾಹ್ನದ ನಂತರ ಇವರು ಕಚೇರಿಯಿಂದ ತೆರಳಿದ್ದಾರೆ. ಫೋನ್ ಸ್ವಿಚ್‌ಆಫ್ ಆಗಿದ್ದು, ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ. ಈ ಕುರಿತು ಇವರ ಪತ್ನಿ ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Mangalore: ಮಂಗಳೂರು ಕ್ಷೇತ್ರದಲ್ಲಿ 'ಸೌಜನ್ಯಗಳಿಗಾಗಿ ನೋಟಾ' ಚಳವಳಿ ಶುರು - ಈ ಸಲ ಎಲ್ಲಾ ಮತ ಲೆಕ್ಕಾಚಾರ ಅಡಿ ಮೇಲು !
ಇವರು ಎಸ್‌ಎಸ್‌ಟಿ ತಂಡದಲ್ಲಿ ಚುನಾವಣೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದು, ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಇತರೆ ಸಿಬ್ಬಂದಿ ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಇವರು ಈ ಹಿಂದೆ ಕೂಡಾ ಇದೇ ರೀತಿ ಕಾಣೆಯಾಗಿದ್ದು, ಪೊಲೀಸರು ಪತ್ತೆ ಮಾಡಿದ್ದರು.
ಬೈಕ್ ಮತ್ತು ಮೊಬೈಲ್ ಫೋನ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದ್ದು, ಇದೀಗ ಪೊಲೀಸರು ಲಕ್ಷ್ಮೀನಾರಾಯಣ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.