Padmaraj R: ಕರಾವಳಿಯಲ್ಲಿ ಕಲಿತವರಿಗೆ ಕರಾವಳಿಯಲ್ಲೇ ಉದ್ಯೋಗ- ಪದ್ಮರಾಜ್ ಆರ್
Padmaraj R: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಪದ್ಮರಾಜ್ ಆರ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಕಾನೂನು ವೃತ್ತಿಯ ಅಭ್ಯಾಸವನ್ನು ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರೊಂದಿಗೆ ಪ್ರಾರಂಭಿಸಿದ ಇವರು ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಅವರು 25 ವರ್ಷಗಳಿಂದ ಕುದ್ರೋಳಿ ಕ್ಷೇತ್ರದ ಕೋಶಾಧಿಯಾಗಿದ್ದಾರೆ.
ಇದನ್ನೂ ಓದಿ: Viral Video: ರೈಲಲ್ಲಿ ಹುಡುಗನನ್ನು ಬಾತ್ ರೂಮ್'ಗೆ ಎಳೆದೊಯ್ದು ಲಾಕ್ ಮಾಡಿಕೊಂಡ ಮಂಗಳಮುಖಿ !! ಮುಂದಾಗಿದ್ದೇ ವಿಚಿತ್ರ
ಇದೀಗ ಇವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಉದ್ಯೋಗ ಸೃಷ್ಟಿಯೇ ಮೊದಲ ಆದ್ಯತೆ ಎಂದು ಸಂದರ್ಶದನದಲ್ಲಿ ಹೇಳಿರುವ ಪದ್ಮರಾಜ್ ಆರ್ ಅವರು, ಇಲ್ಲಿ ಕಲಿತವರಿಗೆ ಇಲ್ಲಿಯೇ ಉದ್ಯೋಗ ದೊರಕಿಸಲು ಪ್ರಯತ್ನಿಸುವುದು ಎಂದು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗಿರುವ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿಯನ್ನು ತೆಗೆದುಹಾಕುವುದು ಹಾಗೂ ಸಾಮರಸ್ಯದ ಗತ ವೈಭವ ಮರುಕಳಿಸುವಂತೆ ಮಾಡುವುದು ನನ್ನ ಮೊದಲ ಕೆಲಸವೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Lifestyle: ಬೇಸಿಗೆಯಲ್ಲಿ ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? : ಇಲ್ಲಿದೆ ನೋಡಿ ಉತ್ತರ
ಅನುದಾನದ ನೆಲೆಯಲ್ಲಿ ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡುವುದು, ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಿ ಮತ್ತಷ್ಟು ವಿದೇಶಿ ವಿಮಾನ ಕರಾವಳಿ ಸಂಪರ್ಕಕ್ಕೆ ಸಿಗುವಂತೆ ಮಾಡುವುದು, ಈ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು ಜೊತೆಗೆ ಮೆಡಿಕಲ್ ಕ್ಷೇತ್ರದಲ್ಲಿ ಅದ್ವಿತೀಯ ಬೆಳವಣಿಗೆ ಮಾಡುವುದು ನನ್ನ ಕನಸು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.