For the best experience, open
https://m.hosakannada.com
on your mobile browser.
Advertisement

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿಗೆ ಆದೇಶ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Teachers Recruitment: ಶಿಕ್ಷಕರ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Teachers Recruitment)  ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
09:56 AM Jun 15, 2024 IST | ಕಾವ್ಯ ವಾಣಿ
UpdateAt: 09:56 AM Jun 15, 2024 IST
teachers recruitment  ಪ್ರಾಥಮಿಕ  ಪ್ರೌಢಶಾಲಾ ಸಹ ಶಿಕ್ಷಕರು  ಮುಖ್ಯ ಶಿಕ್ಷಕರ ನೇಮಕಾತಿಗೆ ಆದೇಶ  ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Advertisement

Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಲು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಶಾಲಾ ಶಿಕ್ಷಣ ಇಲಾಖೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಿರಲಿಲ್ಲ. ಇದೀಗ ಈ ಕುರಿತು ಶಿಕ್ಷಕರ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Teachers Recruitment)  ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Advertisement

ಹೌದು, ರಾಜ್ಯದ 2023-24ನೇ ಸಾಲಿನ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಈಗಾಗಲೇ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲು (Teachers Recruitment) ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿತ್ತು. ಅಂತೆಯೇ ಇದೀಗ ಮುಖ್ಯ ಶಿಕ್ಷಕರ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ ನಡೆಸಿ, ಸ್ಥಳ ನಿಯುಕ್ತಿಗೊಳಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ದರ್ಶನ್‌ ಇರೋ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದು ಯಾಕೆ? ಇಲ್ಲಿದೆ ಮಾಹಿತಿ

Advertisement

ಸದ್ಯ ಪರೀಕ್ಷಾ ಅಂಕಗಳ ಜತೆಗೆ ಅಭ್ಯರ್ಥಿಗಳ ಸೇವಾ ಅನುಭವ ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ನಿಗದಿಪಡಿಸಿರುವ ಅಂಕಗಳ ಕ್ರೋಡೀಕರಣದೊಂದಿಗೆ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ನಡೆದ ಪರೀಕ್ಷೆಯ ಫಲಿತಾಂಶ ಪಟ್ಟಿ ಪ್ರಕಟಣೆ ಮಾಡಲು ಜೂನ್‌ 11 ನಿಗದಿ ಮಾಡಲಾಗಿದೆ.

ಇನ್ನು ಪ್ರಕಟಿತ ಫಲಿತಾಂಶ ಪಟ್ಟಿಗೆ ಸೇವಾನುಭವ ಹಾಗೂ ವಿದ್ಯಾರ್ಹತೆ ಸಂಬಂಧ ಅಂಕಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್‌ 11ರಿಂದ 14ರವರೆಗೆ ಅವಕಾಶ ನೀಡಲಾಗಿದೆ. ಈ ಆಕ್ಷೇಪಣೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ಸರಿಪಡಿಸಲು ಜೂನ್‌ 15ರಿಂದ 19ರವರೆಗೆ ಅವಕಾಶ ನೀಡಲಾಗಿದ್ದು, ಅಂತಿಮವಾಗಿ ಜೂನ್‌ 24ರಂದು ಅರ್ಹತಾ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ.

Renuka Swamy Murder Case: ನಟ ದರ್ಶನ್‌ಗೆ ಕಾಡ್ತಿದೆಯಾ ಪಶ್ಚಾತ್ತಾಪ? ದುಃಖದಲ್ಲಿ ನಟ ಹೇಳಿದ್ದೇನು?

Advertisement
Advertisement
Advertisement