ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

OPS: ಹಳೆ ಪಿಂಚಣಿ ಯೋಜನೆ ಮರು ಜಾರಿ - ಸಂಸತ್ತಲ್ಲಿ ಕೇಂದ್ರ ಸರ್ಕಾರದ ಮಹತ್ವದ ಹೇಳಿಕೆ!!

07:20 AM Dec 14, 2023 IST | ಹೊಸ ಕನ್ನಡ
UpdateAt: 08:03 AM Dec 14, 2023 IST
Advertisement

OPS: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು(NPS) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ(OPS) ಯನ್ನು ಮರು ಸ್ಥಾಪಿಸಬೇಕೆಂದು ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಂತೆ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪನೆ ಕುರಿತು ಮಹತ್ವದ ಹೇಳಿಕೆ ಒಂದನ್ನು ನೀಡಿದೆ.

Advertisement

 

ಹೌದು, ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಅಲ್ಲಿಯೂ ಸಹ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪನೆ ಮಾಡುವ ಸಂಬಂಧ ಚರ್ಚೆಗಳು ನಡೆದಿವೆ. ಈ ವೇಳೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಲು ಹಣಕಾಸು ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆಯೇ ಹೊರತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವ ಚಿಂತನೆಯೂ, ಪ್ರಸ್ತಾಪವು ನಮ್ಮಲ್ಲಿಲ್ಲ ಎಂದು ಹಣಕಾಸು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

Advertisement

 

ಅಂದಹಾಗೆ ಸಂಸದರಾದ ಗಣೇಶಮೂರ್ತಿ ಮತ್ತು ಎ.ರಾಜಾ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಹಣಕಾಸು ಸಚಿವರು ಈ ಮೇಲಿನಂತೆ ಖಡಕ್ ಆಗಿ ಉತ್ತರವನ್ನು ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಿ ನೌಕರರ ಬೇಡಿಕೆ ಸದ್ಯದಲ್ಲಿ ಈಡೆರುವುದು ಹುಸಿಯಾಗಿದೆ.

 

ಏನಿದು ರಾಷ್ಟ್ರೀಯ ಪಿಂಚಣಿ ಯೋಜನೆ ?

ಏಪ್ರಿಲ್ 1, 2004 ರಿಂದ ಜಾರಿಗೆ ದೇಶದಲ್ಲಿ 11,41985 ಸಿವಿಲ್ ಪಿಂಚಣಿದಾರರು, 3387173 ರಕ್ಷಣಾ ಪಿಂಚಣಿದಾರರು (ನಾಗರಿಕ ಪಿಂಚಣಿದಾರರು ಸೇರಿದಂತೆ ರಕ್ಷಣಾ ಪಿಂಚಣಿದಾರರು), 438758 ಟೆಲಿಕಾಂ ಪಿಂಚಣಿದಾರರು, 1525768 ರೈಲ್ವೆ ಪಿಂಚಣಿದಾರರು ಮತ್ತು 301765 ಅಂಚೆ ಪಿಂಚಣಿದಾರರು ಇದ್ದಾರೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಒಟ್ಟು 67,95,449 ಪಿಂಚಣಿದಾರರಿದ್ದಾರೆ.

ಇದನ್ನು ಓದಿ: Prathap simha: ಸಂಸತ್ ಒಳಗೆ ನುಗ್ಗಿದವರಿಗೆ ಪಾಸ್ ಕೊಟ್ಟಿದ್ದೆ ನಾನು !! ಕೊನೆಗೂ ಸ್ಪೀಕರ್ ಮುಂದೆ ಎಲ್ಲಾ ಸತ್ಯ ಬಿಚ್ಚಿಟ್ಟ ಪ್ರತಾಪ್ ಸಿಂಹ !!

Advertisement
Advertisement