For the best experience, open
https://m.hosakannada.com
on your mobile browser.
Advertisement

Government Jobs For 10th Pass Students: SSLC ಆದವರಿಗೆ ಕರ್ನಾಟಕ ಸರ್ಕಾರದ ಹುದ್ದೆಗಳಲ್ಲಿ ಅವಕಾಶ! ಯಾವೆಲ್ಲಾ ಹುದ್ದೆಗೆ ಅರ್ಜಿ ಹಾಕಬಹುದು ಇಲ್ಲಿದೆ ಮಾಹಿತಿ!

Government Jobs For 10th Pass Students: ಎಸ್‌ಎಸ್‌ಎಲ್‌ಸಿ ಆಗಿದ್ದರು ಸಾಕು ಉತ್ತಮ ಉದ್ಯೋಗ ಪಡೆಯಬಹುದಾಗಿದೆ. ನಿಮಗೆ 18ವರ್ಷ ತುಂಬಿದ್ದಲ್ಲಿ ಹಲವು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಬನ್ನಿ ಇಲ್ಲಿ ಪೂರ್ಣ ಮಾಹಿತಿ ತಿಳಿಯಿರಿ.
10:50 AM Jun 20, 2024 IST | ಕಾವ್ಯ ವಾಣಿ
UpdateAt: 10:52 AM Jun 20, 2024 IST
government jobs for 10th pass students  sslc ಆದವರಿಗೆ ಕರ್ನಾಟಕ ಸರ್ಕಾರದ  ಹುದ್ದೆಗಳಲ್ಲಿ ಅವಕಾಶ  ಯಾವೆಲ್ಲಾ ಹುದ್ದೆಗೆ ಅರ್ಜಿ ಹಾಕಬಹುದು ಇಲ್ಲಿದೆ ಮಾಹಿತಿ

Government Jobs For 10th Pass Students:  ಬಡತನ, ಕಡಿಮೆ ಅಂಕಗಳು, ಆರ್ಥಿಕ ಪರಿಸ್ಥಿತಿಯ ಸಮಸ್ಯೆ ಹಿನ್ನೆಲೆಯಿಂದ ಎಸ್‌ಎಸ್‌ಎಲ್‌ಸಿ ನಂತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗದೇ ಇರುವವರು ತುಂಬಾ ಜನ ಇದ್ದಾರೆ. ಸದ್ಯ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಪಡೆದರು ಕೂಡ ನೀವು ಉತ್ತಮ ಕೆರಿಯರ್ ಸ್ಟ್ರಾಟ್ ಮಾಡಬಹುದು (Government Jobs For 10th Pass Students).

Advertisement

Karkala: 6,500 ರೂ ಬೆಲೆಯ ಅಂಜಲ್ ಮೀನು ಕದ್ದು 140 ರೂ ಗೆ ಮಾರಿದ ಕುಡುಕ - ಕೊನೆಗೆ ಮೀನು ಮಾಲಿಕ, ಕದ್ದವ ಹಾಗೂ ತಿಂದವನ ನಡುವೆ ನಡೆಯಿತು ರಾಜಿ ಸಂಧಾನ !!

ಹೌದು, ಎಸ್‌ಎಸ್‌ಎಲ್‌ಸಿ ಆಗಿದ್ದರು ಸಾಕು ಉತ್ತಮ ಉದ್ಯೋಗ ಪಡೆಯಬಹುದಾಗಿದೆ. ನಿಮಗೆ 18ವರ್ಷ ತುಂಬಿದ್ದಲ್ಲಿ ಹಲವು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಬನ್ನಿ ಇಲ್ಲಿ ಪೂರ್ಣ ಮಾಹಿತಿ ತಿಳಿಯಿರಿ.

Advertisement

ಡಾಟಾ ಎಂಟ್ರಿ ಆಪರೇಟರ್ ಹುದ್ದೆ:

ಹತ್ತನೇ ತರಗತಿ ಪಾಸ್ ಜತೆಗೆ, ರಾಜ್ಯ ಸರ್ಕಾರ / ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಪಡೆದಿರುವವರು ಕರ್ನಾಟಕ ರಾಜ್ಯದ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅಥವಾ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ, ನಾಡಕಛೇರಿ, ತಾಲ್ಲೂಕು ಕಛೇರಿಗಳಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಹುದ್ದೆ ಪಡೆಯಲು ಅರ್ಹರು.

ಸೇವಕರ ಹುದ್ದೆ:

ಜಿಲ್ಲಾ ನ್ಯಾಯಾಲಯ, ತಾಲ್ಲೂಕುನ್ಯಾಯಾಲಯ, ಹೈಕೋರ್ಟ್‌ ನ್ಯಾಯಾಲಯ, ಸೆಷನ್‌ ಕೋರ್ಟ್‌ ನ್ಯಾಯಾಲಯ, ಸಿವಿಲ್‌ ಕೋರ್ಟ್‌ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತಿ ವರ್ಷ ಸೇವಕರ ಹುದ್ದೆಗೆ ಅರ್ಜಿ ಕರೆಯಲಾಗುತ್ತದೆ. 18ವರ್ಷ ತುಂಬಿದ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಇದ್ದ ಆಸಕ್ತರು ಅರ್ಜಿ ಸಲ್ಲಿಸಬಹುದು.

ಆದೇಶ ಜಾರಿಕಾರರು:

ಆದೇಶ ಜಾರಿಕಾರರ ಹುದ್ದೆಗೆ ಕೋರ್ಟ್‌ಗಳಲ್ಲಿ ಆಗಾಗ ಹೆಚ್ಚಾಗಿ ಅಧಿಸೂಚಿಸಿ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು  ಮತ್ತು ಈ ಹುದ್ದೆಗೆ ವಾಹನ ಚಾಲನ ಪರವಾನಿಗೆ(ಡಿಎಲ್‌) ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ 18-35 ವರ್ಷ ಆಗಿದ್ದರೆ ಸಾಕು.

ಮೀಸಲು ಪೊಲೀಸ್ ಕಾನ್ಸ್‌ಟೇಬಲ್:

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಯಲ್ಲಿನ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರು ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಬರೆದು ಹುದ್ದೆಯ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಅರಣ್ಯ ವೀಕ್ಷಕರು:

ಫಾರೆಸ್ಟ್‌ ವಾಚರ್ ಅಥವಾ ಅರಣ್ಯ ವೀಕ್ಷಕರು ಎಂಬ ಅರಣ್ಯ ಇಲಾಖೆಯ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಸಾಕು. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತವೆ.

ಗ್ರೂಪ್‌ ಡಿ ಹುದ್ದೆಗಳು:

ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿನ ಹಲವು ಗ್ರೂಪ್‌ ಡಿ ಹುದ್ದೆಗಳಿಗೆ ಸಹ ಎಸ್‌ಎಸ್ಎಲ್‌ಸಿ ವಿದ್ಯಾರ್ಹತೆ ಸಾಕಾಗುತ್ತೆ. ಈ ಗ್ರೂಪ್‌ ಡಿ ಹುದ್ದೆಗಳನ್ನು ಪಡೆಯುವವರು ಸರ್ಕಾರಿ ಇಲಾಖಾ /ಕಚೇರಿಗಳಲ್ಲಿ ಕಚೇರಿ ಸಹಾಯಕರು ಹಾಗೂ ಇತರೆ ಹುದ್ದೆಗೆ ಆಯ್ಕೆ ಆಗುತ್ತಾರೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ:

ವಾಹನ ಚಾಲನ ಪರವಾನಗಿ ಹೊಂದಿದ್ದಲ್ಲಿ ಕರ್ನಾಟಕದಲ್ಲಿನ ರಸ್ತೆ ಸಾರಿಗೆ ಸಂಸ್ಥೆಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಸೇರಿದಂತೆ, ಇತರೆ ಸಾರಿಗೆ ಸಂಸ್ಥೆಗಳು, ಸರ್ಕಾರದ ಯಾವುದೇ ಇಲಾಖೆಯ ಚಾಲಕ ಹುದ್ದೆಗಳು, ನ್ಯಾಯಾಲಯಗಳ ಚಾಲಕ ಹುದ್ದೆಗಳಿಗೆ ಸಹ ಅರ್ಜಿ ಸಲ್ಲಿಸಿ ಆಯ್ಕೆ ಆಗಬಹುದು.

ಅಣ್ಣಾವ್ರನ್ನು ಬಿಡುಗಡೆ ಮಾಡುವಾಗ ವೀರಪ್ಪನ್ ಕೊಟ್ಟ ಉಡುಗೊರೆಯೇನು? ಇಲ್ಲಿದೆ ಯಾರಿಗೂ ತಿಳಿಯದ ಅಚ್ಚರಿ ವಿಚಾರ

Advertisement
Advertisement
Advertisement