ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

ಆನ್ಲೈನ್ ನಲ್ಲಿ ಖರೀದಿಸುವಾಗ ಎಚ್ಚರ ! | ಮದ್ಯ ಖರೀದಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ 1.79 ಲಕ್ಷ ರೂ ಕಳೆದುಕೊಂಡ ಗ್ರಾಹಕ

09:47 AM Aug 23, 2021 IST | ಸುದರ್ಶನ್

ಮದ್ಯದ ಹುಚ್ಚು ಎಷ್ಟರ ಮಟ್ಟಿಗೆ ಎಂದರೆ ಆನ್‌ಲೈನ್‌ ನಲ್ಲಿ ಖರೀದಿಸುವವರೆಗೂ ತಲುಪಿದೆ. ಈಗ ಅಂತೂ ಎಲ್ಲಾ ಆನ್ಲೈನ್ ಮಯ ಆಗಿರುವ ಕಾಲವಾಗಿದ್ದು, ಆನ್ಲೈನ್ ನಲ್ಲಿ ವೈನ್‌ ಬಾಟಲಿ ಖರೀದಿಸಿದ್ದ ಗ್ರಾಹಕನೊಬ್ಬನಿಗೆ ಸೈಬರ್‌ ಖದೀಮರು ಬರೋಬ್ಬರಿ 1.79 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

Advertisement

ಅಲಿ ಅಸ್ಗರ್‌ ರಸ್ತೆಯ ದಿ ಎಂಬೆಸ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 80 ವರ್ಷದ ನಿವೃತ್ತ ಅಧಿಕಾರಿ ಸೈಬರ್‌ ಖದೀಮರಿಂದ ವಂಚನೆಗೆ ಒಳಗಾದವರು.

Mumbai Cricketer Dies: ಪಂದ್ಯದ ವೇಳೆ ಘೋರ ದುರಂತ; ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು!!

ಆ.19ರಂದು ವಿಭೂತಿಪುರದ ಕ್ರಿಸ್ಟಲ್‌ ವೈನ್ಸ್‌ ಪೋರ್ಟಲ್‌ನಲ್ಲಿ 1 ವೈನ್‌ ಬಾಟಲ್‌ ಆರ್ಡರ್‌ ಮಾಡಿದ್ದಾರೆ. ವಾಪಸ್‌ ಕರೆ ಮಾಡಿದ ಅಪರಿಚಿತ ನೀಲೇಶ್‌ ಚೌಧರಿ, ವೈನ್‌ ಶಾಪ್‌ ನೌಕರ ಎಂದು ಪರಿಚಯಿಸಿಕೊಂಡಿದ್ದಾನೆ. ನಿವೃತ್ತ ಅಧಿಕಾರಿ ವೈನ್‌ ಬಾಟಲ್‌ ಜತೆಗೆ 1 ಪ್ಯಾಕೇಟ್‌ ಸಿಗರೇಟ್‌ ಸಹ ಆರ್ಡರ್‌ ಮಾಡಿದ್ದರು. ಒಟ್ಟಾರೆ ಬಿಲ್‌ 730 ರೂ. ಬಿಲ್‌ ಆಗಿತ್ತು. ಅದಕ್ಕೆ ನಿವೃತ್ತ ಅಧಿಕಾರಿ, ಪೇಟಿಎಂನಲ್ಲಿ ಬಿಲ್‌ ಪಾವತಿಗೆ ಮುಂದಾದಾಗ ನೀಲೇಶ್‌, ಪೇಟಿಎಮ್‌ ಸೇವೆ ಇಲ್ಲ. ಕ್ರೆಡಿಟ್‌ ಕಾರ್ಡ್‌ನಲ್ಲಿ ಪಾವತಿಗೆ ಸೂಚಿಸಿದ್ದಾನೆ.

Advertisement

ಅದಕ್ಕೆ ಒಪ್ಪಿದ ಗ್ರಾಹಕ, ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಕಿರಾತಕ ಅದರಿಂದ 99,860 ರೂ. ಮತ್ತು 31,000ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ.

ಗಾಬರಿಕೊಂಡ ಗ್ರಾಹಕ, ನೀಲೇಶ್‌ಗೆ ಕರೆ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ 'ನಾನು ಮದ್ಯ ಸೇವನೆ ಮಾಡಿದ್ದು, ಗೊತ್ತಾಗದೆ ತಪ್ಪು ನಂಬರ್‌ ಒತ್ತಿದ್ದೇನೆ. ನಿಮ್ಮ ಬೇರೆ ಕ್ರೆಡಿಟ್‌ ಕಾರ್ಡ್‌ ನಂಬರ್‌ ಹೇಳಿ. ವಾಪಸ್‌ ಹಣ ಕಳುಹಿಸುತ್ತೇನೆ' ಎಂದು ಪುಸಲಾಯಿಸಿದ್ದಾನೆ.

Rohit Sharma: ಭಾರತದಲ್ಲಿ ಆಡುವಾಗ ಎಲ್ಲರೂ ಬಾಯಿ ಮುಚ್ಚಿಕೊಳ್ಳಿ- ರೋಹಿತ್‌ ಶರ್ಮಾ ಶಾಕಿಂಗ್‌ ಸ್ಟೇಟ್‌ಮೆಂಟ್‌

ಆಗ ನಿವೃತ್ತ ಅಧಿಕಾರಿ, ಮತ್ತೊಂದು ಕಾರ್ಡ್‌ ನಂಬರ್‌ ಕೊಟ್ಟಾಗ ಅದರಲ್ಲಿಯೂ 19,190 ರೂ. ಮತ್ತು 29,280 ರೂ. ಹಂತ- ಹಂತವಾಗಿ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿದ್ದಾನೆ.

ಬಳಿಕ ನಿವೃತ್ತ ಅಧಿಕಾರಿಗೆ ತಾನು ಮೋಸ ಹೋಗುತ್ತಿರುವುದು ಅರಿವಾಗಿ,ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಭಾಗ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Next Article