EAC-PM: ಭಾರತದಲ್ಲಿ ಹಿಂದೂಗಳ ಸಂಖ್ಯೆ 8% ರಷ್ಟು ಕಡಿಮೆ, ಮುಸ್ಲಿಂ ಶೇ.43 ರಷ್ಟು ಹೆಚ್ಚಳ
EAC-PM: ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ (ಇಎಸಿ-ಪಿಎಂ) ಅಧ್ಯಯನದ ಪ್ರಕಾರ ಭಾರತದಲ್ಲಿ ಹಿಂದೂಗಳು ಜನಸಂಖ್ಯೆಯು 1950 ಮತ್ತು 2015 ರ ನಡುವೆ 7.8% ರಷ್ಟು ತೀವ್ರವಾಗಿ ಕುಸಿದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 1950 ಮತ್ತು 2015 ರ ನಡುವೆ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯ ಪಾಲು 43.15% ರಷ್ಟು ಹೆಚ್ಚಾಗಿದ್ದು, ಕ್ರಿಶ್ಚಿಯನ್ನರ ಸಂಖ್ಯೆ 5.38% ರಷ್ಟು ಹೆಚ್ಚಾಗಿದೆ ಮತ್ತು ಸಿಖ್ಖರ ಸಂಖ್ಯೆ 6.58% ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ, ಬೌದ್ಧರ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವೂ ಕಂಡುಬಂದಿದೆ.
ಇದನ್ನೂ ಓದಿ: Google Pay: ನೀವು ಗೂಗಲ್ ಪೇ ಬಳಸುತ್ತೀರಾ? ಹಾಗಾದ್ರೆ ನಿಮಗಾಗಿ ಇಲ್ಲಿದೆ ಸೂಪರ್ ಅವಕಾಶ!
ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಹಿಂದೂಗಳ ಸಂಖ್ಯೆಯು 1950 ರಲ್ಲಿ ಒಟ್ಟು ಜನಸಂಖ್ಯೆಯ 84% ರಷ್ಟಿತ್ತು, ಇದು 2015 ರಲ್ಲಿ 78% ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಅಂದರೆ 65 ವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆಯು ಒಟ್ಟು ಜನಸಂಖ್ಯೆಯ 9.84% ರಿಂದ 14.09% ಕ್ಕೆ ಏರಿತು. ಆದರೆ ಅನೇಕ ನೆರೆಯ ರಾಷ್ಟ್ರಗಳಲ್ಲಿ ಬಹುಸಂಖ್ಯಾತ ಸಮುದಾಯದ ಜನಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: Live In Relation: ಇನ್ಮುಂದೆ ಮುಸ್ಲಿಮರಿಗೆ ಲಿವ್ ಇನ್ ರಿಲೇಶನ್‌ಶಿಪ್‌ನ ಹೊಸ ಕಾನೂನು ಜಾರಿ; ಹೈಕೋರ್ಟ್ ಮಹತ್ವದ ತೀರ್ಪು!
ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಬಹುಸಂಖ್ಯಾತ ಜನಸಂಖ್ಯೆಯ ಕುಸಿತವು (ಶೇ. 7.8) ಮ್ಯಾನ್ಮಾರ್‌ನಲ್ಲಿನ ಶೇಕಡಾ 10 ರಷ್ಟು ಕುಸಿತದ ನಂತರ ಎರಡನೇ ಅತ್ಯಂತ ಗಮನಾರ್ಹ ಕುಸಿತವಾಗಿದೆ. ಭಾರತದೊಂದಿಗೆ, ನೇಪಾಳದಲ್ಲಿ ಹಿಂದೂ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ 3.6% ರಷ್ಟು ಕುಸಿತವನ್ನು ದಾಖಲಿಸಿದೆ. ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯು ಸಿದ್ಧಪಡಿಸಿದ ಈ ವರದಿಯನ್ನು ಮೇ 2024 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವಿಶ್ವದ 167 ದೇಶಗಳಲ್ಲಿನ ಜನಸಂಖ್ಯೆಯ ಬದಲಾವಣೆಗೆ ಸಂಬಂಧಿಸಿದ ಪ್ರವೃತ್ತಿಗಳನ್ನು ಚರ್ಚಿಸಲಾಗಿದೆ.