NOTA: ಸೌಜನ್ಯಾ ನ್ಯಾಯಕ್ಕಾಗಿ ನೋಟಾ ಅಭಿಯಾನ; ಉಜಿರೆಯಿಂದ ಪೂಂಜಾಲುಕಟ್ಟೆಯ ತನಕ ಬೃಹತ್ ವಾಹನ ರ್ಯಾಲಿ !
NOTA: ಸೌಜನ್ಯ ನ್ಯಾಯಕ್ಕಾಗಿ ಈ ಸಲ ನೋಟಾಕ್ಕೆ ಮತದಾನ ಮಾಡಬೇಕೆಂದು ಕೋರಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ವತಿಯಿಂದ ಬೃಹತ್ ವಾಹನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಉಜಿರೆಯಿಂದ ಪುಂಜಾಲಕಟ್ಟೆ ತನಕ ನೋಟಾ ಅಭಿಯಾನಕ್ಕಾಗಿ ಈ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Birth to 6 children: ಒಂದಾದ ನಂತರ ಒಂದರಂತೆ ಒಂದು ಗಂಟೆಯೊಳಗೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಸೌಜನ್ಯ ನ್ಯಾಯಕಾಗಿ ನಡೆಯುತ್ತಿರುವ ನೋಟ ಚಳುವಳಿಯ ಭಾಗವಾಗಿ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮ್ಮಣ್ಣ ಶೆಟ್ಟಿ ಹಾಗೂ ಹಲವು.ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ. ಸೌಜನ್ಯಳಿಗೆ ನ್ಯಾಯ ನೀಡುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ಓಟು ಬರುವಾಗ ಮಾತ್ರ ಜನರ ಮುಂದೆ ಹೋಗಿ ಮತ ಕೇಳುತ್ತಿದ್ದಾರೆ. ಇವರಿಗೆ ಮತ ಕೇಳುವ ಹಕ್ಕಿಲ್ಲ. ಹೀಗಾಗಿ ಸೌಜನ್ಯಳ ನ್ಯಾಯಕ್ಕಾಗಿ ನೋಟಾಕ್ಕೆ ಮತ ಹಾಕಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Neha Hiremath: ನನ್ನ ಜೊತೆ ಮಾತಾಡಲ್ಲ ಅಂದಳು, ಚಾಕು ಹಾಕಿದೆ- ಆರೋಪಿ ಫಯಾಜ್
ಈ ಸಂದರ್ಭದಲ್ಲಿ ಮಾತನಾಡಿದ ದೈವ ಚಿಂತಕ ತಮ್ಮಣ್ಣ ಶೆಟ್ಟಿಯವರು ಈ ನೋಟಾದಿಂದ ಹೆಣ್ಣು ಮಕ್ಕಳ ಅತ್ಯಾಚಾರ, ಅಕ್ರಮ ಬಡ್ಡಿ ದಂಧೆಗೆ ಮುಕ್ತಿ ಸಿಗಲಿ ಎಂದು ಹೇಳಿದ್ದಾರೆ. ಸೌಜನ್ಯಾ ಮನೆ ಪಾಂಗಾಲದಿಂದ ಹೊರಟ ಜಾಥಾವು ಉಜಿರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ಮತ್ತು ಜನರನ್ನು ಸೇರಿಸಿಕೊಂಡು ಪುಂಜಾಲುಕಟ್ಟೆಯವರಿಗೆ ಮುಂದುವರೆಯಿತು.
ಜಾಥಾ ಪ್ರಯುಕ್ತ ಇವತ್ತು ಉಜಿರೆಯಿಂದ ಪುಂಜಾಲುಕಟ್ಟೆಯ ತನಕ ಬೃಹತ್ ಬೈಕ್ ರ್ಯಾಲಿ ನಡೆದಿದೆ. ನೂರಾರು ಜನ ಬೈಕ್ ಕಾರು ಜೀಪು ಏರಿ ಬಂದು ಸೌಜನ್ಯ ನ್ಯಾಯಕ್ಕಾಗಿ ನೋಟಾ ಮತದಾನಕ್ಕೆ ಬೆಂಬಲ ಸೂಚಿಸಿ ರ್ಯಾಲಿ ನಡೆಸಿದರು. ಇದೇ ಮೊದಲ ಬಾರಿಗೆ ಎಂಬಂತೆ ನೋಟಾಕ್ಕಾಗಿ ಪ್ರಚಾರ ಮತ್ತು ಜಾಥಾ ಶುರುವಾಗಿದೆ. ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆ ನೊಟಾಕ್ಕಾಗಿ ಈ ಥರ ಪ್ರಚಾರ ಆಗಿರೋದು ವಿಶೇಷ.