For the best experience, open
https://m.hosakannada.com
on your mobile browser.
Advertisement

EPFO for Foreign Workers: ಇಂತವರಿಗಿನ್ನು ಪೆನ್ಶನ್ ಮತ್ತು ಪಿಎಫ್ ಇಲ್ಲ !!

EPFO for Foreign Workers: ಭಾರತದಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರಿಗೆ ಯಾವುದೇ ರೀತಿಯ ಪೆನ್ಶನ್ ಮತ್ತು ಪಿಎಫ್(EPFO for Foreign Workers) ಕೊಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್(Karmataka High court) ಮಹತ್ವದ ಆದೇಶ ಹೊರಡಿಸಿದೆ.
01:58 PM May 11, 2024 IST | ಸುದರ್ಶನ್
UpdateAt: 01:58 PM May 11, 2024 IST
epfo for foreign workers  ಇಂತವರಿಗಿನ್ನು ಪೆನ್ಶನ್ ಮತ್ತು ಪಿಎಫ್ ಇಲ್ಲ
Advertisement

EPFO for Foreign Workers: ಭಾರತದಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರಿಗೆ ಯಾವುದೇ ರೀತಿಯ ಪೆನ್ಶನ್ ಮತ್ತು ಪಿಎಫ್(EPFO for Foreign Workers) ಕೊಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್(Karmataka High court) ಮಹತ್ವದ ಆದೇಶ ಹೊರಡಿಸಿದೆ.

Advertisement

ಹೌದು, ಕೇಂದ್ರ ಸರ್ಕಾರ 2008ರಲ್ಲಿ ಜಾರಿಗೊಳಿಸಿದ್ದ ಭಾರತದಲ್ಲಿರುವ ವಿದೇಶಿ ನೌಕರರಿಗೆ ವಿಸ್ತರಿಸುವ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಮತ್ತು ಉದ್ಯೋಗಿಗಳ ಪಿಂಚಣಿ (ಇಪಿ) ಯೋಜನೆಯ ತಿದ್ದುಪಡಿಯನ್ನು 'ಅಸಾಂವಿಧಾನಿಕ' ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ತಿದ್ದುಪಡಿ ಕಾನೂನು ಪ್ರಶ್ನಿಸಿ ಸ್ಟೋನ್ ಹಿಲ್ ಎಜುಕೇಷನ್ ಫೌಂಡೇಷನ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮ ಲೇಖಾ ಅವರ ಪೀಠ ಈ ಆದೇಶ ಮಾಡಿ ತಿದ್ದುಪಡಿ ಕಾನೂನನ್ನು ರದ್ದುಪಡಿಸಿದೆ.

Advertisement

ಇದನ್ನೂ ಓದಿ: Women’s Intresting Facts: ಗಂಡಸರಿಗಿಂತ ಮಹಿಳೆಯರಿಗೆ ಮೂಡ್ ಬರೋದು ಹೆಚ್ಚು ಅಂತೆ! ಕಾರಣ ಹೀಗಿದೆ ನೋಡಿ

ಈ ಕುರಿತು ನ್ಯಾಯಾಲಯವು '2008ರ ಅ. 1ರಿಂದ ಜಾರಿಗೆ ಬರುವಂತೆ ಯಾವುದೇ ವೇತನ ಮಿತಿ ಇಲ್ಲದೆ ವಿದೇಶಿ ಕಾರ್ಮಿಕರನ್ನು ಇಪಿಎಫ್‌ ಮತ್ತು ಇಪಿಎಸ್‌ ವ್ಯಾಪ್ತಿಗೆ ಒಳಪಡಿಸಲು ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಆದರೆ, ಭಾರತೀಯ ಕಾರ್ಮಿಕರಿಗೆ ಪ್ರತಿ ತಿಂಗಳು 15 ಸಾವಿರ ರೂ. ವೇತನ ಮಿತಿ ಇದೆ. ಆದರೆ, ವಿದೇಶಿ ಕಾರ್ಮಿಕರಿಗೆ ಮಿತಿ ಹೇರದಿರುವುದು ಸರಿಯಲ್ಲ' ಎಂದ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ ಇಪಿಎಫ್​​(EPF) ಮತ್ತು ಎಂಪಿ(MP) ಕಾಯಿದೆಯು ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿದೆ. ಅದರ ಅಡಿಯಲ್ಲಿ ಇಪಿಎಫ್ ಸಂಸ್ಥೆ ಅಥವಾ ಇಪಿಎಫ್ಒನ ಉದ್ಯೋಗಿಗಳು ಸರಿಯಾಗಿ ಅನುಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಬಹುದಾಗಿದೆ. ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಲಾಗಿರುವ ಯೋಜನೆಯನ್ನು ಭಾರೀ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅವಶ್ಯಕತೆ ಪೂರೈಸಲು ಅನುಮತಿಸಲಾಗದು. ಭಾರತದಿಂದ ಹೊರ ದೇಶಕ್ಕೆ ಸೇವೆಯ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾಯಿದೆ ರೂಪಿಸಲಾಗಿದೆ ಅಷ್ಟೇ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?
2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಇಪಿಎಫ್ ಯೋಜನೆಯ ಪ್ಯಾರಾ 83 ಮತ್ತು ಇಪಿ ಯೋಜನೆಯ ಪ್ಯಾರಾ 43ಎ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.‌ ವಿದೇಶಿ ಕಾರ್ಮಿಕರಿಗೆ ವೇತನ ಮಿತಿ ಇಲ್ಲದೆ ಇಪಿ ಮತ್ತು ಇಪಿಎಫ್ ಸೌಲಭ್ಯ ಪಡೆ ಯಲು ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಭಾರತದಲ್ಲಿ ವಿದೇಶಿ ಉದ್ಯೋಗಿಗಳು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕಾರ್ಯನಿರ್ವಹಿಸಲಿದ್ದು, ಅವರಿಗೆ ಭವಿಷ್ಯ ನಿಧಿಗೆ ಹಣ ಸಂದಾಯ ಮಾಡುವುದರಿಂದ ತಮಗೆ ಹಾನಿಯಾಗುತ್ತದೆ. ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: Speaking English: Still ಮತ್ತು Yet ಬಳಕೆ ಬಗ್ಗೆ ಕನ್ಫ್ಯೂಷನ್ ಇದ್ಯಾ? Anybody Vs Nobody ಬಳಕೆ ಬಗ್ಗೆ ಮಾಹಿತಿ !

Advertisement
Advertisement
Advertisement