For the best experience, open
https://m.hosakannada.com
on your mobile browser.
Advertisement

Most Educated Person: ವಿಶ್ವದ ಅತ್ಯಂತ ಹೆಚ್ಚು ವಿದ್ಯಾವಂತ ವ್ಯಕ್ತಿ ಈ ಭಾರತೀಯ; ಇವರ ದಾಖಲೆ ಮುರಿಯಲು ಯಾರಿಗೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ

09:22 AM Mar 09, 2024 IST | ಹೊಸ ಕನ್ನಡ
UpdateAt: 09:22 AM Mar 09, 2024 IST
most educated person  ವಿಶ್ವದ ಅತ್ಯಂತ ಹೆಚ್ಚು ವಿದ್ಯಾವಂತ ವ್ಯಕ್ತಿ ಈ ಭಾರತೀಯ  ಇವರ ದಾಖಲೆ ಮುರಿಯಲು ಯಾರಿಗೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ
Advertisement

Most Educated Person in the World: ಪ್ರಪಂಚದಲ್ಲಿ ಹೆಚ್ಚು ಓದಿದ ವ್ಯಕ್ತಿ ಯಾರು(Most Educated Person) ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬಹುದು. ಹೆಚ್ಚು ಅಧ್ಯಯನ ಮಾಡಿದ ದಾಖಲೆ ಬರೆದವರು ಭಾರತೀಯರು ಎಂದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು. ಇಂದು ನಾವು ಆ ವ್ಯಕ್ತಿಯ ಬಗ್ಗೆ ಮತ್ತು ಅವರು ಎಷ್ಟು ಡಿಗ್ರಿಗಳನ್ನು ತೆಗೆದುಕೊಂಡಿದ್ದಾರೆ ಇವುಗಳ ಬಗ್ಗೆ ತಿಳಿದುಕೊಳ್ಳೋಣ.

Advertisement

ವಿಶ್ವದಲ್ಲೇ ಅತ್ಯಂತ ವಿದ್ಯಾವಂತ ವ್ಯಕ್ತಿ ಡಾ. ದಶರಥ್ ಸಿಂಗ್. ಅವರನ್ನು ವಿಶ್ವದ ಅತ್ಯಂತ ಅರ್ಹ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಈ ಸಾಧನೆ ಮಾಡುವ ಮೊದಲು ರಾಜಸ್ಥಾನದ ದಶರಥ್ ಸಿಂಗ್ ಭಾರತೀಯ ಸೇನೆಯಲ್ಲಿ ಯೋಧರಾಗಿದ್ದರು. ಡಾ. ದಶರಥ್ ಸಿಂಗ್ ಅವರು 1988 ರಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಭಾರತೀಯ ಸೇನೆಗೆ ಸೈನಿಕರಾಗಿ ಸೇರಿದರು. ಅವರು 16 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದರು ಮಾತ್ರವಲ್ಲದೆ ತಮ್ಮ ಮುಂದಿನ ಅಧ್ಯಯನವನ್ನು ಮುಂದುವರೆಸಿದರು. ಈಗ 68 ಕ್ಕೂ ಹೆಚ್ಚು ಡಿಗ್ರಿ ಮತ್ತು ಡಿಪ್ಲೋಮಾಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ದಶರತ್‌ಗೆ ಭಾರತದ ಅತ್ಯಂತ ಅರ್ಹ ಸೈನಿಕ ಎಂಬ ಬಿರುದು ಕೂಡ ಲಭಿಸಿದೆ.

Advertisement

ಡಾ.ದಶರಥ್ ಅವರು ಅನೇಕ ಪದವಿಗಳನ್ನು ಪಡೆದರೂ ಅಧ್ಯಯನವನ್ನು ನಿಲ್ಲಿಸಲಿಲ್ಲ. ಮೂರು ವಿಷಯಗಳಲ್ಲಿ ಪಿಎಚ್‌ಡಿ ಮಾಡಿದ್ದಲ್ಲದೆ 14 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದರೊಂದಿಗೆ ಡಾ.ದಶರಥ್ ಸಿಂಗ್ ಶೇಖಾವತ್ ಅವರು ಪಿಎ, ಬಿಪಿಸಿ, ಬಿಎಜಿ, ಬಿಎಡ್ ಮತ್ತು ಎಲ್ ಎಲ್ ಬಿ ಯಂತಹ ಕೋರ್ಸ್ ಗಳನ್ನೂ ಮಾಡಿದ್ದಾರೆ. ಅವರು ವೈದ್ಯಕೀಯ, ತತ್ವಶಾಸ್ತ್ರ ಮತ್ತು ಪತ್ರಿಕೋದ್ಯಮದಂತಹ ವಿಷಯಗಳನ್ನು ಸಹ ಅಧ್ಯಯನ ಮಾಡಿದ್ದಾರೆ. ಈ ರೀತಿಯಾಗಿ ಅವರು ಒಟ್ಟು 68 ಡಿಗ್ರಿ ಮತ್ತು ಡಿಪ್ಲೋಮಾಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ : ವಾಟರ್ ಪ್ಯೂರಿಫೈಯರ್‌ಗಳ ಮೇಲಿನ ಖರ್ಚು ಇನ್ನು ಅತೀ ಕಡಿಮೆ, ಸರಕಾರ ಕಂಪನಿಗಳಿಗೆ ಕೊಟ್ಟ ಸೂಚನೆ ಏನು?

Advertisement
Advertisement
Advertisement