For the best experience, open
https://m.hosakannada.com
on your mobile browser.
Advertisement

Indian Politics : ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡುಗೆ ದೇಶದ ಪ್ರಧಾನಿ ಪಟ್ಟ ?!

Indian Politics: ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುತ್ತಿರುವ ಲೋಕಸಭಾ ಚುನಾವಣೆ ಫಲಿತಾಂಶ ಇದೀಗ ರಾಜಕೀಯ ಸಂಚಲನಕ್ಕೆ ಕಾರಣವಾಗಬಹುದು
01:01 PM Jun 04, 2024 IST | ಸುದರ್ಶನ್
UpdateAt: 01:30 PM Jun 04, 2024 IST
indian politics   ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡುಗೆ ದೇಶದ ಪ್ರಧಾನಿ ಪಟ್ಟ

Indian Politics: ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುತ್ತಿರುವ ಲೋಕಸಭಾ ಚುನಾವಣೆ ಫಲಿತಾಂಶ ಇದೀಗ ರಾಜಕೀಯ ಸಂಚಲನಕ್ಕೆ ಕಾರಣವಾಗಬಹುದು. ಇದೇ ರೀತಿ ಫಲಿತಾಂಶ ಮುಂದುವರೆದರೆ ನಿತೀಶ್ ಕುಮಾರ್(Nithish Kumar) ಅಥವಾ ಚಂದ್ರಬಾಬು ನಾಯ್ಡುಗೆ(Chnadrababu Naydu) ಪ್ರಧಾನಿ ಪಟ್ಟ ಒಲಿದರೂ ಒಲಿಯಬಹುದು ಎನ್ನಲಾಗುತ್ತಿದೆ.

Advertisement

ಹೌದು, ಲೋಕಸಭಾ ಚುನಾವಣೆ(Parliament Election) ಮತ ಎಣಿಕೆ ಇಡೀ ದೇಶದ ಜನರನ್ನೇ ಅಚ್ಚರಿಗೊಳಿಸಿದೆ. ಬಿಜೆಪಿ 350+ ಎಂದು ಹೇಳಿದ್ದ ಸಮೀಕ್ಷೆಗಳ ಭವಿಷ್ಯ ಟುಸ್ ಎನಿಸುತ್ತಿದೆ. ಯಾಕೆಂದರೆ NDA ಮೈತ್ರಿ ಪಕ್ಷಗಳು 300ಗಡಿ ದಾಟಲೂ ಹೆಣಗಾಡುತ್ತಿವೆ. ಅಚ್ಚರಿ ಅಂದ್ರೆ ಇಂಡಿಯಾ ಕೂಟ 220ರ ಗಡಿ ದಾಟಿದ್ದು ಇದು ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಲಾಭವಾಗುತ್ತದೆ. ಆದರೆ ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರದ ಚಂದ್ರಬಾಬು ನಾಯ್ಡು ಮನಸ್ಸು ಮಾಡಬೇಕು.

ಯಾಕೆಂದರೆ ದೇಶದ ಚುಕ್ಕಾಣಿ ಹಿಡಿಯಲು 272 ಸ್ಪಷ್ಪ ಬಹುಮತ ಬರಬೇಕು. ಆದರೀಗ ಬಿಜೆಪಿ ಬಳಿ ಕೇವಲ 240 ಸೀಟುಗಳಿವೆ. ಇನ್ನುಳಿದ ಸೀಟುಗಳು ದೋಸ್ತಿಗಳಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಬಳಿ ಇದೆ. ಬಿಹಾರದಲ್ಲಿ 32 ಸೀಟ್ ಹಾಗೂ ಆಂಧ್ರದಲ್ಲಿ 22 ಸೀಟ್ ಇವರ ಪಾಲಾಗಿದೆ. ಇವರೇನಾದರೂ ಇಂಡಿಯಾ ಕೂಟಕ್ಕೆ ಸಪೋರ್ಟ್ ಮಾಡಿದರೆ, ದೇಶದ ಅಧಿಕಾರ ಇಂಡಿಯಾ ಕೂಟದ ಪಾಲಾಗುವ ಎಲ್ಲಾ ಚಾನ್ಸ್ ಇದೆ. ಜೊತೆಗೆ ಚಂದ್ರಬಾಬು ಹಾಗೂ ನಿತೀಶ್ ಏನಾದರೂ ಪ್ರಧಾನಿ ಪಟ್ಟ ಡಿಮ್ಯಾಂಡ್ ಮಾಡಿದರೂ ಇಬ್ಬರಲ್ಲಿ ಒಬ್ಬರಿಗೆ ಪ್ರಧಾನಿ ಪಟ್ಟ ಒಲಿಯಬಹುದು.

Advertisement

ಹೀಗಾಗಿ ಕಾಂಗ್ರೆಸ್, ಈ ಇಬ್ಬರು ನಾಯಕರ ಮನೆ ಕದ ತಟ್ಟಿದೆ. ಇವರಿಬ್ಬರ ಮನ ವೊಲಿಸಲು ಕಾಂಗ್ರೆಸ್ ಯಶಸ್ವಿಯಾದರೆ ಬಹುಮತದತ್ತ ಇಂಡಿಯಾ ದಾಪುಗಾಲು ಇಡಲಿದೆ. ಇದರಿಂದ ಬಿಜೆಪಿ NDA ಕೋಟೆ ಛಿದ್ರವಾಗಲಿದೆ.

Advertisement
Advertisement
Advertisement